/newsfirstlive-kannada/media/post_attachments/wp-content/uploads/2024/11/AR-RAHMAN.jpg)
ಸಂಗೀತ ಲೋಕದ ಮಾಂತ್ರಿಕ ಎ.ಆರ್ ರೆಹಮಾನ್ ಅವರ ದಾಂಪತ್ಯದಲ್ಲಿ ಅಲ್ಲೋಲ, ಕಲ್ಲೋಲವೇ ಸೃಷ್ಟಿಯಾಗಿದೆ. ರೆಹಮಾನ್ ಅವರ ಪತ್ನಿ ಸೈರಾ ಅವರು ತಮ್ಮ ಪತಿಯಿಂದ ಬೇರೆಯಾಗಲು ನಿರ್ಧರಿಸಿದ್ದು, ಸೈರಾ ವಕೀಲರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ‘ನಾಳೆ ಬರ್ತ್ ಡೇ ಇತ್ತು ಸರ್’- ಶೋ ರೂಂ ಬೆಂಕಿಯಲ್ಲಿ ಮಗಳನ್ನು ಕಳೆದುಕೊಂಡ ತಂದೆ ಕಣ್ಣೀರು
ಎ.ಆರ್ ರೆಹಮಾನ್ ಹಾಗೂ ಸೈರಾ ಅವರ ದಾಂಪತ್ಯ ಬಿರುಕು ಕಾಣಿಸಿಕೊಂಡಿದೆ. ಸೈರಾ ಪರ ವಕೀಲರಾದ ವಂದನಾ ಶಾ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ರೆಹಮಾನ್ ಹಾಗೂ ಸೈರಾ ದಂಪತಿ ಬೇರೆ, ಬೇರೆಯಾಗಲು ನಿರ್ಧಾರ ಮಾಡಿದ್ದಾರೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2024/11/AR-RAHMAN1.jpg)
ಬಹಳ ವರ್ಷಗಳ ಬಳಿಕ ಸೈರಾ ಅವರು ತಮ್ಮ ಪತಿ ಎ.ಆರ್ ರೆಹಮಾನ್ ಅವರಿಂದ ಬೇರೆಯಾಗುವ ಕಷ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ. ಬಹಳ ಪ್ರೀತಿಯಿಂದ ಕಾಲ ಕಳೆಯುತ್ತಿದ್ದ ಜೋಡಿ ಹಕ್ಕಿಗಳು ಭಾವನಾತ್ಮಕ ಒತ್ತಡದಲ್ಲಿ ಸಿಲುಕಿದ್ದವು. ಒಬ್ಬರಿಗೊಬ್ಬರ ಗೌರವಪೂರ್ವಕವಾಗಿ ದೂರ ಆಗುತ್ತಾ ಒಬ್ಬರಿಗೊಬ್ಬರು ಗೌರವಿಸಲು ತೀರ್ಮಾನಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/AR-RAHMAN2.jpg)
ಬಹಳ ನೋವಿನಿಂದಲೇ ಸೈರಾ ಅವರು ರೆಹಮಾನ್ ಅವರಿಂದ ದೂರವಾಗಲು ನಿರ್ಧಾರ ಮಾಡಿದ್ದಾರೆ. ಖಾಸಗಿ ಬದುಕು ಹಾಗೂ ಸೈರಾ ಅವರ ಕಷ್ಟದ ಸಮಯವನ್ನು ಅರ್ಥ ಮಾಡಿಕೊಳ್ಳಲು ಸಾರ್ವಜನಿಕರು, ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಳ್ಳಲಾಗಿದೆ.
ರೆಹಮಾನ್ ಹಾಗೂ ಸೈರಾ ದಂಪತಿ 12 ಮಾರ್ಚ್ 1995ರಲ್ಲಿ ಮದುವೆ ಆಗಿದ್ದರು. 29 ವರ್ಷದ ದಾಂಪತ್ಯ ಜೀವನಕ್ಕೆ ಇದೀಗ ಬ್ರೇಕ್ ಹಾಕುತ್ತಿದ್ದಾರೆ. ರೆಹಮಾನ್ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us