Advertisment

AR15: ಟ್ರಂಪ್​ ಹತ್ಯೆಗೆ ಯತ್ನಿಸಿದ್ದ ರೈಫಲ್​ನ ರಕ್ತಸಿಕ್ತ ಇತಿಹಾಸವಿದು!

author-image
AS Harshith
Updated On
Breaking News: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅರೆಸ್ಟ್​..!
Advertisment
  • ಅಪಾಯಕಾರಿ ರೈಫಲ್.. ಜಸ್ಟ್​ ಟ್ರಿಗ್ಗರ್​ ಒತ್ತಿದ್ರೆ ಎದುರಾಳಿ ಭಸ್ಮ
  • ರೈಫಲ್​ ಮೇಲೆ ಕೈ ಇಟ್ರೆ ಸಾಕು ಕಾರ್ಟ್ರಿಡ್ಜ್ ಖಾಲಿಯಾಗುವವರೆಗೆ ಬುಲೆಟ್​ ಹಾರುತ್ತೆ
  • ಇದನ್ನು ಅಮೆರಿಕಾದಲ್ಲಿ ಯಾರೂ ಬೇಕಾದ್ರು ಬಳಸಬಹುದು! ಇದು M16 ರೈಫಲ್​ನ ತಮ್ಮನೇ?

ಡೊನಾಲ್ಡ್​ ಟ್ರಂಪ್​. ಅಮೆರಿಕಾದ ಮಾಜಿ ಅಧ್ಯಕ್ಷ. ಇತ್ತೀಚೆಗೆ ಈ ಮಹಾನ್​ ವ್ಯಕ್ತಿಯನ್ನು ಹತ್ಯೆ ನಡೆಸಲು ಸಂಚು ನಡೆದಿತ್ತು. ಅದೃಷ್ಟವೋ​ ಅಥವಾ ಪೂರ್ವ ಜನ್ಮದ ಪುಣ್ಯವೋ ಗೊತ್ತಿಲ್ಲ. ಒಂದೇ ಒಂದು ಸೆಕೆಂಡ್​ನಲ್ಲಿ ಇಟ್ಟ ಗುರಿ ತಪ್ಪಿ ಆ ಗುಂಡು ಟ್ರಂಪ್​ ಕಿವಿಯನ್ನೇ ಹರಿದು ಬಿಟ್ಟಿತ್ತು. ಸರಿಯಾಗಿ ಗುರಿ ತಾಕಿದ್ದರೆ ಟ್ರಂಪ್​ ತಲೆಬರುಡೆ ಛಿದ್ರ ಛಿದ್ರವಾಗೋದರಲ್ಲಿ ನೋ ಡೌಟ್​.

Advertisment

publive-image

20 ವರ್ಷದ ಥಾಮಸ್​ ಮ್ಯಾಥ್ಯೂ ಕ್ರೂಕ್​ ಎಂಬಾತ ಟ್ರಂಪ್​ ತಲೆಗೆ ಗುರಿ ಇಟ್ಟ ವ್ಯಕ್ತಿ. ಎಆರ್​-15 ರೈಫಲ್​ ಬಳಸಿ ಟ್ರಂಫ್​ ಪ್ರಾಣವನ್ನು ಕಸಿಯಬೇಕು ಎಂದು ಪ್ಲಾನ್​ ಮಾಡಿದ್ದನು. ಆದರೆ ಟ್ರಂಪ್​ ಗುಂಡಿಗೆ ಗಟ್ಟಿ ಇತ್ತು. ಅದೃಷ್ಟ ಚೆನ್ನಾಗಿತ್ತು. ಎಆರ್​-15 ರೈಫಲ್ ಗುಂಡು ಟ್ರಂಪ್​ ಅನ್ನು ಏನು ಮಾಡಲು ಸಾಧ್ಯವಾಗಿಲ್ಲ. ಆದರೆ ವಿಚಾರ ಅದಲ್ಲ, ಎಆರ್​-15 ರೈಫಲ್ ಯಾವತ್ತು ಯಾರಿಗೂ ಮೋಸ ಮಾಡಿಲ್ಲ. ಅದರ ತಾಖತ್ತೇ ಬೇರೆ. ​ ಇದರ ಇತಿಹಾಸ ಮತ್ತು ಅದರ ಕಾರ್ಯಕ್ಷಮತೆ ಯಾವ ಗನ್​ಗೂ ಕಡಿಮೆ ಇಲ್ಲ. ಆದರೆ ಯುಎಸ್​ನಲ್ಲಿ ಈ ರೈಫಲನ್ನು ಯಾರು ಬೇಕಾದ್ರೂ ಖರೀದಿಸಬಹುದಾಗಿದೆ!.

publive-image

ಎಆರ್​-15 ರೈಫಲ್

ಇದನ್ನು ಪ್ರಾಣಿಗಳ ಬೇಟೆಗೆ ಬಳಸಲಾಗುತ್ತದೆ. 1950ರಲ್ಲಿ ಅರ್ಮಲೈಟ್​ ಎಂಬ ಕಂಪನಿ ಎಆರ್​-15 ರೈಫಲನ್ನು ತಯಾರಿಸಿತು. ವಾಷಿಂಗ್ಟನ್​ ಪೋಸ್ಟ್​ವೊಂದರ ವರದಿಯಂತೆ, 2021 ಮತ್ತು 2022ರ ನಡುವೆ ಯುನೈಟೆಡ್​​ ಸ್ಟೇಟ್ಸ್​​​​ನಲ್ಲಿ ನಡೆದ ಹಲವಾರು ಗುಂಡಿನ ದಾಳಿಯಲ್ಲಿ ಈ ರೈಫಲನ್ನು ಬಳಸಲಾಗಿದೆ.

ಅಪಾಯಕಾರಿ ರೈಫಲ್​!

M-16 ರೈಫಲ್​ ಅಮೆರಿಕಾ ಮಿಲಿಟರಿಯ ಪ್ರಮಾಣಿತ ಸೇವಾ ರೈಫಲ್ ಆಗಿದೆ. ಇದು ಅಸಾಲ್ಟ್ ರೈಫಲ್ ವಿಭಾಗದಲ್ಲಿ ಬರುತ್ತದೆ. ಸಂಪೂರ್ಣ ಸ್ವಯಂಚಾಲಿತವಾಗಿದೆ. ಅಚ್ಚರಿಯ ವಿಚಾರವೆಂದರೆ ಈ ರೈಫಲ್​ನಲ್ಲಿ ಕಾರ್ಟ್ರಿಡ್ಜ್ ಖಾಲಿಯಾಗುವವರೆಗೆ ಬುಲೆಟ್​ ಹಾರಿಸಬಹುದಾಗಿದೆ. 600 ಗಜಗಳಷ್ಟು ದೂರದವರೆಗೆ ಇದರ ಗುಂಡು ಹಾರುತ್ತದೆ.

Advertisment

publive-image

ಇದನ್ನೂ ಓದಿ: ದರ್ಶನ್​ ಭೇಟಿಗೆ ನಿರಾಕರಿಸಿದ್ರಾ ಸೋನಲ್​? ತರುಣ್​ ಕೈ ಹಿಡಿಯೋ ಹುಡುಗಿ ಕೊಟ್ಟ ಕಾರಣ ಏನು ಗೊತ್ತಾ?

AR-15 ಎಂಬುದು M-16 ನ ಆವೃತ್ತಿಯಾಗಿದೆ. ಈ ರೈಫಲ್​ 2 ವಿಧದಲ್ಲಿ ಸಿಗುತ್ತದೆ. ಹಸ್ತಚಾಲಿತ ಮತ್ತು ಅರೆ-ಸ್ವಯಂಚಾಲಿತ ಕಾರ್ಯಾಚರಣೆಯನ್ನು ಹೊಂದಿದೆ. ಹಸ್ತಚಾಲಿತವಾದರೆ ಟ್ರಿಗ್ಗರ್ ಎಳೆದರೆ ಸಾಕು, ಪ್ರತಿ ಬಾರಿ ಬುಲೆಟ್​ ಹೊರಹಾಕುದೆ. ಅರೆ-ಸ್ವಯಂಚಾಲಿತವಾದರೆ ಟ್ರಿಗ್ಗರ್​ನಿಂದ ಕೈ ತೆಗೆಯುವವರೆಗೆ ಗುಂಡುಗಳನ್ನು ಹಾರಿಸುತ್ತಲೇ ಇರುತ್ತದೆ.

publive-image

ಇದನ್ನೂ ಓದಿ: ಫೋಲ್ಡೇಬಲ್​ ಸ್ಮಾರ್ಟ್​​ಫೋನನ್ನು ಪರಿಚಯಿಸುತ್ತಿದೆ ಗೂಗಲ್​! ಆಗಸ್ಟ್​ 14ರಂದು ನಿಮ್ಮ ಮುಂದೆ ಹಾಜರು

Advertisment

ಅಚ್ಚರಿಯ ವಿಚಾರವೆಂದರೆ ಯುನೈಟೆಡ್ ಸ್ಟೇಟ್ಸ್​ನಲ್ಲಿ ಆತ್ಮರಕ್ಷಣೆಗಾಗಿ ಎಆರ್​-15 ರೈಫಲನ್ನು ಖರೀದಿಸಲು ಅನುಮತಿಯಿದೆ. ಆದರೆ ಇದನ್ನು ದುರ್ಬಳಿಕೆ ಮಾಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment