ಸಚಿನ್​​ ಪುತ್ರಿ ಆಸ್ಟ್ರೇಲಿಯಾ ಜಾಲಿ ಟ್ರಿಪ್​​; ಸರ್ಫಿಂಗ್, ರೇಸಿಂಗ್, ಸೈಕ್ಲಿಂಗ್ ಫುಲ್ ಮಸ್ತಿ

author-image
Gopal Kulkarni
Updated On
ಸಚಿನ್​​ ಪುತ್ರಿ ಆಸ್ಟ್ರೇಲಿಯಾ ಜಾಲಿ ಟ್ರಿಪ್​​; ಸರ್ಫಿಂಗ್, ರೇಸಿಂಗ್, ಸೈಕ್ಲಿಂಗ್ ಫುಲ್ ಮಸ್ತಿ
Advertisment
  • ಕಾಂಗರೂ ನಾಡಲ್ಲಿ ಜಾಲಿ ಡೇಸ್ ಕಳೆಯುತ್ತಿರುವ ಸಚಿನ್ ಪುತ್ರಿ ಸಾರಾ
  • ಸರ್ಫಿಂಗ್​, ರೇಸಿಂಗ್​​, ಸೈಕ್ಲಿಂಗ್​, ಸಾರಾ ತೆಂಡೂಲ್ಕರ್ ಏನೆಲ್ಲಾ ಮಾಡಿದರು!
  • 10 ವರ್ಷದವಳಿದ್ದಾಗ ಕಂಡ ಕನಸನ್ನು ನನಸು ಮಾಡಿಕೊಂಡ ಸಾರಾ

2025 ಬಂದಾಯ್ತು, 2024ರಲ್ಲಿ ಅದನ್ನ ಮಾಡಬೇಕು, ಇದನ್ನ ಮಾಡಬೇಕು ಅಂತಾ ನ್ಯೂ ಇಯರ್​ ರೆಸಲ್ಯೂಶನ್ ಬಹುತೇಕರು ಮಾಡಿದ್ದರು. ಆದ್ರೆ, ಹಲವರು ಅದನ್ನ ಮಾಡೋಕೆ ಆಗದೇ ಬೇಸರದಲ್ಲೇ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದ್ರೆ, ಕೆಲವ್ರು 2024ರ ಅಂತ್ಯದೊಳಗೆ ತಾನು ಏನೇನು ಮಾಡಬೇಕು ಅಂದುಕೊಂಡಿದ್ದರೋ ಅದನ್ನ ಮಾಡಿ ಮುಗಿಸಿದ್ದಾರೆ. ಅವರಲ್ಲಿ ಒಬ್ಬರು ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ ತೆಂಡೂಲ್ಕರ್​.

publive-image

ಕಾಂಗರೂ ನಾಡಲ್ಲಿ ತೆಂಡೂಲ್ಕರ್​ ಪುತ್ರಿ ಜಾಲಿ. ಜಾಲಿ..

2024ರ ಅಂತ್ಯದೊಳಗೆ ಹಲವು ಅಡ್ವೆಂಚರ್​​ಗಳನ್ನ ಮಾಡಬೇಕು ಅನ್ನೋದು ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ​ ಆಸೆಯಾಗಿತ್ತು. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಸಾರಾ ಕಂಡಿದ್ದ ಕನಸುಗಳನ್ನ ನನಸು ಮಾಡಿಕೊಂಡಿದ್ದಾರೆ. ಒಂದೊಂದು ಕನಸು ನನಸಾದಾಗಲೂ ಹಂಚಿಕೊಂಡಿರೋ ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿವೆ.

10 ವರ್ಷದವಳಿದ್ದಾಗ ಕಂಡ ಸರ್ಫಿಂಗ್​ ಕನಸು ನನಸು
ಸರ್ಫಿಂಗ್​ ಮಾಡಬೇಕು ಅನ್ನೋದು 10 ವರ್ಷದಳಿದ್ದಾಗಿನಿಂದ ಸಾರಾಗೆ ಇದ್ದ ಆಸೆಯಂತೆ.! 17 ವರ್ಷಗಳ ಬಳಿಕ ಆ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಕ್ವೀನ್ಸ್​ ಲ್ಯಾಂಡ್​ನ ಗೋಲ್ಡ್​ ಕೋಸ್ಟ್​ ಬೀಚ್​ನಲ್ಲಿ ಸರ್ಫಿಂಗ್​ ಮಾಡಿ ಏಂಜಾಯ್​ಮಾಡಿದ್ದಾರೆ.

ಇದನ್ನೂ ಓದಿ:Happy new year! ಚಿನ್ನ, ಬೆಳ್ಳಿ ಖರೀದಿಸೋರಿಗೆ ಗೋಲ್ಡನ್​ ನ್ಯೂಸ್.. ಬೆಲೆಯಲ್ಲಿ ಭಾರೀ ಇಳಿಕೆ

ಸಿಂಗಲ್​ ಆಗಿ ಜೆಟ್ಸ್​​ಕಿಂಗ್​ ರೈಡ್​ ಮಾಡಿದ ಸಾರಾ
ಜೆಟ್ಸ್​​​ಕಿಂಗ್​ ಸ್ವಲ್ಪ ಅಪಾಯಕಾರಿ ಗೇಮ್​,  ಜೀವಕ್ಕೇ ಕುತ್ತು ತರೋ ಸಾಧ್ಯತೆಯೇ ಹೆಚ್ಚು. ಒಂದು ಬಾರಿ ವಾಟರ್​ ಸ್ಕೂಟರ್​​ ಹತ್ತಿ ಏಕಾಂಗಿಯಾಗಿ ಸಮುದ್ರದ ಮಧ್ಯದವರೆಗೆ ರೈಡ್​ ಮಾಡಬೇಕು ಅನ್ನೋದು ಸಾರಾ ಡ್ರೀಮ್​​ನಲ್ಲಿ ಒಂದಾಗಿತ್ತಂತೆ. ಅದನ್ನ ಸಾರಾ ನನಸು ಮಾಡಿಕೊಂಡಿದ್ದಾರೆ..

publive-image

ಸ್ನೋರ್ ​​ಕೆಲಿಂಗ್​ ಮಾಡಿ ಸಮುದ್ರದಾಳದ ದರ್ಶನ
ನೋಡೋಕೆ ಸ್ಕೂಬಾ ಡೈವಿಂಗ್​ ತರಾನೇ ಅನಿಸಿದ್ರು, ಇದು ಸ್ಕೂಬಾ ಡೈವಿಂಗ್​ ಅಲ್ಲ.. ಇದು ಸ್ನೋರ್​ ಕೆಲಿಂಗ್​. ಮಾಸ್ಕ್​​, ಬ್ರೀದಿಂಗ್​ ಟ್ಯೂಬ್​ ಸಹಾಯದಿಂದ ಸಮುದ್ರಕ್ಕೆ ಜಿಗಿದು ಸಮುದ್ರದಾಳದ ದರ್ಶನ ಮಾಡಿದ್ದಾರೆ.

publive-image

ಸೈಕ್ಲಿಂಗ್ ಮಾಡಿದ್ದಕ್ಕೆ ಅಜ್ಜಿ ಹೇಳಿದ ಮಾತು ನೆನಪಾಯ್ತಂತೆ.!
ಕ್ವಿನ್ಸ್​​ಲ್ಯಾಂಡ್​​ ನಗರದ ರೌಂಡ್ಸ್​​​ ಹೊಡೆದಿರುವ ಸಾರಾತೆಂಡೂಲ್ಕರ್​ ​​​ ಸೈಕಲ್​ ಸವಾರಿಯನ್ನೂ ಮಾಡಿದ್ದಾರೆ. ಸೈಕ್ಲಿಂಗ್​ ಮಾಡಿದ ಸಾರಾಗೆ ಬೈಸಿಕಲ್ ಹಾಗೂ ಸ್ವಿಮ್ಮಿಂಗ್​ನ ಒಮ್ಮೆ ಕಲಿತರೆ ಎಂದೂ ಮರೆಯಲಾಗದ ವಿದ್ಯೆ ಎಂದು ಅಜ್ಜಿ ಹೇಳಿದ್ದ ಮಾತು ನೆನಪಾಯ್ತಂತೆ.

ಇದನ್ನೂ ಓದಿ:ಫೇಸ್​​ಬುಕ್ ಲವ್​​; ಪ್ರೇಯಸಿಯನ್ನು ಮದುವೆ ಆಗಲು ಪಾಕ್​ಗೆ ಹೋದ ಭಾರತೀಯ; ಆಮೇಲೇನಾಯ್ತು?

ಟಾಮ್​ಬೋರೈನ್​ ಕಾಡಲ್ಲಿ ಸಾರಾ ಸುತ್ತಾಟ
ಕಾಂಗರೂ ನಾಡಿನ ಕಾಡಲ್ಲೂ ಸಾರಾತೆಂಡೂಲ್ಕರ್​ ಸುತ್ತಾಟ ನಡೆಸಿದ್ದಾರೆ. ಕ್ವಿನ್ಸ್​​​​ಲ್ಯಾಂಡ್​ನ ಟಾಮ್​​ಬೋರೈನ್​ ರೈನ್​ ಫಾರೆಸ್ಟ್​ನ​ ಸ್ಕೈವಾಕ್​ಗೆ ಭೇಟಿ ನೀಡಿದ ​ಬಳಿಕ ಕಾಡಲ್ಲಿ ಸುತ್ತಾಟ ನಡೆಸಿದ್ದಾರೆ.
2024ರ ಆರಂಭದಲ್ಲಿ ಕಂಡಿದ್ದ ಕನಸುಗಳನ್ನೆಲ್ಲಾ ನನಸು ಮಾಡಿಕೊಂಡು ಹೊಸ ವರ್ಷಕ್ಕೆ ಸಾರಾ ಕಾಲಿಟ್ಟಿದ್ದಾರೆ. ಡಿಸೆಂಬರ್​ನಲ್ಲಿ ಮಾಡಿದ ಅಡ್ವೆಂಚರ್​​​ಗಳನ್ನ ನೋಡಿದ ಮೇಲೆ 2025ರಲ್ಲಿ ಸಾರಾ ಏನೆಲ್ಲಾ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment