/newsfirstlive-kannada/media/post_attachments/wp-content/uploads/2024/12/beggers-4.jpg)
ಅದಕ್ಷ ಆಡಳಿತ, ಆರ್ಥಿಕ ದಿವಾಳಿತನ, ಮಿತಿ ಮೀರಿದ ಹಣದುಬ್ಬರ, ಬಡತನ, ನಿರುದ್ಯೋಗ.. ಇದನ್ನು ಹೇಳ್ತಿರೋದು ಬೇರೆ ಯಾರಿಗೂ ಇಲ್ಲ.. ಭಯೋತ್ಪಾದನೆಯ ಬೀಜೋತ್ಪಾದಕ ತಾಣ ಪಾಕಿಸ್ತಾನ ಈಗ ಬಿಕಾರಿಸ್ತಾನ ಆಗಿದೆ. ಪಾಕ್ ನೆಲದಲ್ಲಿ ಭಿಕ್ಷಾಟನೆ ವ್ಯಾವಹಾರಿಕ ಉದ್ಯಮವಾಗಿ ಬದಲಾಗಿದ್ದು, ಇದು ಸೌದಿ ಅರೇಬಿಯಾ ಸೇರಿ ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ರಫ್ತಾಗುತ್ತಿರುವ ಪ್ರಮುಖ ಸರಕಾಗಿದೆ.
ಭಯೋತ್ಪಾದನೆ ತವರು.. ಪಾಕಿಸ್ತಾನದಲ್ಲಿ ನೆಲಕಚ್ಚಿದ ಆರ್ಥಿಕತೆ ಒಂದ್ಕಡೆಯಾದ್ರೆ ಮತ್ತೊಂದ್ಕಡೆ ಕಿತ್ತು ತಿನ್ನುವ ಬಡತನ ಭಿಕ್ಷಾಟನೆಗೆ ತಳ್ಳಿದೆ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳಲ್ಲಿ ಸಂಘಟಿತ ಭಿಕ್ಷಾಟನೆ ವ್ಯವಸ್ಥಿತ ದಂಧೆಯಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಸರ್ಕಾರ ಸಹಾಯಕ್ಕಾಗಿ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ತಿರುಗುತ್ತಿದ್ದರೆ ಲಕ್ಷಾಂತರ ಜನರನ್ನು ಹಸಿವಿನಿಂದ ಜೀವ ಹಿಂಡುತ್ತಿದೆ. ಪರಿಣಾಮ ದೇಶದ ಜನಸಂಖ್ಯೆಯ 20ರಷ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡಿದೆ.
ಇದನ್ನೂ ಓದಿ:ಸಿರಿಯಾ ಮೇಲೆ ಮತ್ತೆ ದಾಳಿಗೆ ಸಜ್ಜಾದ ಇಸ್ರೇಲ್; ವೈರಿ ರಾಷ್ಟ್ರದ ಮೇಲೆ ಬಿದ್ದ ಬಾಂಬ್ ತೀವ್ರತೆ ಹೇಗಿತ್ತು ಗೊತ್ತಾ?
ಅರಬ್ಬರ ನಾಡಲ್ಲಿ ಪಾಕಿಗಳ ಭಿಕ್ಷಾಟನೆ
ಉಗ್ರರನ್ನ ರಫ್ತು ಮಾಡ್ತಿದ್ದ ಪಾಕಿಸ್ತಾನ ಈಗ ಭಿಕ್ಷುಕರ ರಫ್ತಿನಿಂದ ಕುಖ್ಯಾತಿಗೆ ಪಾತ್ರವಾಗಿದೆ. ಬಡತನ, ಹಸಿವಿನಿಂದ ನರಳುತ್ತಿರುವ ಜನರು ವಿಧಿ ಇಲ್ಲದೇ ಭಿಕ್ಷಾಟನೆ ಮಾಡುವ ಪರಿಸ್ಥಿತಿ ತಲುಪಿದ್ದಾರೆ. ಹಜ್ ಯಾತ್ರೆ ನೆಪದಲ್ಲಿ ವೀಸಾ ಪಡೆದು ಸೌದಿ ಅರೇಬಿಯಾದಂತಹ ರಾಷ್ಟ್ರಗಳಿಗೆ ಹೋಗಿ ಭಿಕ್ಷಾಟನೆಗೆ ಇಳೀತಿದ್ದಾರೆ.. ಸದ್ಯ ಸೌದಿಯ ಬೀದಿಬೀದಿಗಳಲ್ಲಿ ಪಾಕ್ ಭಿಕ್ಷುಕರೇ ತುಂಬಿದ್ದಾರೆ..
ಭಯೋತ್ಪಾದನೆ to ಭಿಕ್ಷಾಟನೆ!
- ಮೆಕ್ಕಾ, ಮದೀನಾ ಯಾತ್ರೆ ನೆಪದಲ್ಲಿ ವೀಸಾ ಪಡೆದು ಭಿಕ್ಷಾಟನೆ
- ಸೌದಿ ಅರೇಬಿಯಾದ ಬೀದಿ ಬೀದಿಗಳಲ್ಲಿ ಪಾಕಿಗಳ ಭಿಕ್ಷಾಟನೆ
- ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ, ಮದೀನಾದಲ್ಲಿ ಕಳ್ಳತನ ಕೃತ್ಯ
- ಸೌದಿ ಅರೇಬಿಯಾ ಕಾನೂನು ಪ್ರಕಾರ ಭಿಕ್ಷಾಟನೆ ಅಪರಾಧ
- ಭಿಕ್ಷಾಟನೆಗೆ 6 ತಿಂಗಳು ಜೈಲು, 50 ಸಾವಿರ ರಿಯಾಲ್ ದಂಡ
- ಅರೇಬಿಯಾದ ಜೈಲುಗಳಲ್ಲಿ ಬಂಧಿಯಾಗುತ್ತಿರುವ ಪಾಕಿಗಳು
- ಸುಮಾರು 10 ಮಿಲಿಯನ್ ಪಾಕಿಗಳು ವಿದೇಶದಲ್ಲಿ ವಾಸ
- ಇರಾಕ್ ಸೇರಿ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಅಕ್ರಮ ವಾಸ
ವೀಸಾ ಬಯಸುವವರಿಗೆ ಸಮಸ್ಯೆಯಾಗಿ ಪರಿಣಮಿಸ್ತಿದೆ. ಇದನ್ನು ನಿಯಂತ್ರಿಸದಿದ್ರೆ ಉಮ್ರಾ ಹಾಗೂ ಹಜ್ ಯಾತ್ರಿಕರ ಮೇಲೆ ಪರಿಣಾಮ ಬೀರಲಿದೆ ಅಂತ ಅರಬ್ ರಾಷ್ಟ್ರಗಳು ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಭಿಕ್ಷುಕರ ರಫ್ತು ನಿಲ್ಲಿಸದಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೌದಿ ಅರೇಬಿಯಾ ಇತರ ರಾಷ್ಟ್ರಗಳು ಪಾಕ್ಗೆ ಎಚ್ಚರಿಕೆ ನೀಡಿವೆ. ಈ ಬೆನ್ನಲ್ಲೇ ಎಚ್ಚೆತ್ತಂತೆ ಕಾಣಿಸ್ತಿರುವ ಪಾಕ್, 4,300 ಭಿಕ್ಷುಕರನ್ನು ಎಕ್ಸಿಟ್ ಕಂಟ್ರೋಲ್ ಲಿಸ್ಟ್ಗೆ ಸೇರಿಸಿದೆ.
ಇದನ್ನೂ ಓದಿ:ಎಲ್ಲಾ ಕ್ಷೇತ್ರಗಳಿಗೂ 2,000 ಕೋಟಿ ಆಶ್ವಾಸನೆ.. ಬೆನ್ನಲ್ಲೇ ಶಾಸಕರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ..!
ಭಿಕ್ಷುಕರನ್ನು ಸೌದಿ ಅರೇಬಿಯಾಗೆ ಕಳುಹಿಸುವ ಮಾಫಿಯಾ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರಮ ಕೈಗೊಳ್ಳುವ ಹೆಜ್ಜೆ ಇಟ್ಟಿದೆ. ಇದು ಒಂಥರಾ ನಾಟಕವೇ.. ತನ್ನ ಪ್ರಜೆಗಳನ್ನ ಸಾಕಲಾಗದ ಪಾಕ್ ಇಂಥ ಕುಚೇಷ್ಠೆ ಕೆಲಸಗಳನ್ನ ಬಿಡಲಾದಿತೆ. ಭಿಕ್ಷುಕರನ್ನು ಎಕ್ಸ್ಪೋರ್ಟ್ ಮಾಡ್ತಿರೋದು ದುರ್ದೈವ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ