/newsfirstlive-kannada/media/post_attachments/wp-content/uploads/2025/07/AMERICA_SOUTH.jpg)
ಈ ಹಿಂದೆ ಭೂಮಿಯ ಮೇಲೆ ಇದ್ದ ನಾಗರಿಕತೆಗಳ ಬಗ್ಗೆ ಕೆದಕುತ್ತ ಹೋದರೆ ಒಂದಿಲ್ಲವೊಂದು ಕುರುಹು ಸಿಗುತ್ತವೆ. ವಿಶ್ವದಲ್ಲಿ ಹಳೆಯ ನಾಗರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಹರಪ್ಪ ಮತ್ತು ಮೊಹೆಂಜೋದಾರೋ ಸಿಂಧೂ ನಾಗರಿಕತೆಯ ಎರಡು ಪ್ರಮುಖ ನಗರಗಳು. ಇದೇ ರೀತಿ 3,500 ವರ್ಷಗಳ ಹಳೆಯದಾದ ನಗರವನ್ನು ಪುರಾತತ್ವಶಾಸ್ತ್ರಜ್ಞರು ದಕ್ಷಿಣ ಅಮೆರಿಕಾದಲ್ಲಿ ಪತ್ತೆ ಹಚ್ಚಿದ್ದಾರೆ.
ದಕ್ಷಿಣ ಅಮೆರಿಕದ ಪೆರು ದೇಶದಲ್ಲಿ 3,500 ವರ್ಷದ ಹಳೆಯದಾದ ನಗರವನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಸದ್ಯ ಪತ್ತೆ ಆಗಿರುವ ಪ್ರದೇಶ ಈ ಹಿಂದಿನ ವ್ಯಾಪಾರ ಕೇಂದ್ರವಾಗಿತ್ತು ಎನ್ನುವುದು ಕಂಡುಬರುತ್ತದೆ. ಇದು ಪೆಸಿಫಿಕ್ ಕರಾವಳಿ ಸಂಸ್ಕೃತಿಗಳನ್ನು ಆಂಡಿಸ್ ಮತ್ತು ಅಮೆಜಾನ್‌ನಲ್ಲಿರುವ ಸಂಸ್ಕೃತಿಗಳೊಂದಿಗೆ ಸಂಪರ್ಕಿಸುವಂತಿದೆ. ಮಧ್ಯಪ್ರಾಚ್ಯ ಹಾಗೂ ಏಷ್ಯಾದ ನಾಗರಿಕತೆಗಳಂತೆ ಇದು ಕೂಡ ಆ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿರುವ ಸ್ಥಳದ ಡ್ರೋನ್ ಕ್ಯಾಮೆರಾದಲ್ಲಿ ಶೂಟ್ ಮಾಡಿದಂತ ದೃಶ್ಯಗಳನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬೆಟ್ಟದ ಮೇಲೆ ವೃತ್ತಾಕಾರದ ರಚನೆ ಇದೆ. ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿ ಕಲ್ಲು ಹಾಗೂ ಮಣ್ಣಿನ ಅವಶೇಷಗಳಿವೆ. ಇಲ್ಲಿ 3,500 ವರ್ಷಗಳ ಹಿಂದೆ ವ್ಯಾಪಾರ ನಡೆಯುತ್ತಿದ್ದು ಎನ್ನಲಾಗಿದೆ. ಮಾರ್ಕೆಟ್ನಲ್ಲಿ ಇರುವಂತಹ ಚಿತ್ರಣ ಕಾಣಬಹುದಾಗಿದೆ.
ಇದನ್ನೂ ಓದಿ:ಲೀಗ್ನಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸಂಜು ಸ್ಯಾಮ್ಸನ್ ಸೇಲ್.. ಆಕ್ಷನ್ನಲ್ಲಿ ಎಲ್ಲ ದಾಖಲೆ ಉಡೀಸ್!
ಸದ್ಯ ಉತ್ತರ ಬರಾಂಕಾ ಪ್ರಾಂತ್ಯದಲ್ಲಿ ಪತ್ತೆ ಆಗಿರುವ ಈ ನಗರವನ್ನು ಪೆನಿಕೊ ಎಂದು ಕರೆಯುತ್ತಿದ್ದರು. ಈ ನಗರ 1800 ರಿಂದ 1500 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಧ್ಯ ಕಂಚಿನ ಯುಗದ (Middle Bronze Age) ನಗರವಾಗಿದೆ. ಅಮೆರಿಕದ 5,000 ವರ್ಷಗಳ ಹಿಂದಿನ ಅತ್ಯಂತ ಹಳೆಯ ನಾಗರಿಕತೆ ಆಗಿರುವ ಕ್ಯಾರಲ್ ನಾಗರಿಕತೆಗೆ ಸಮೀಪದಲ್ಲೇ ಇದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ