ಜೈಪುರ ಜೋಡಿಗಳಿಂದ ಕಮಾಲ್​.. ಕಾಗದದಿಂದ ನಿರ್ಮಾಣವಾಯ್ತು ವಾಟರ್​ ಪ್ರೂಫ್, ಫೈರ್​ ಪ್ರೂಫ್ ಮನೆ!

author-image
Gopal Kulkarni
Updated On
ಜೈಪುರ ಜೋಡಿಗಳಿಂದ ಕಮಾಲ್​.. ಕಾಗದದಿಂದ ನಿರ್ಮಾಣವಾಯ್ತು ವಾಟರ್​ ಪ್ರೂಫ್, ಫೈರ್​ ಪ್ರೂಫ್ ಮನೆ!
Advertisment
  • ಅತ್ಯಂತ ಕಡಿಮೆ ದರದಲ್ಲಿ, ಕಾಗದದಲ್ಲಿ ತಯಾರಾಗಿದೆ ಈ ಮನೆ
  • ಮಳೆ, ಬೆಂಕಿಯ ಯಾವ ಅಪಾಯವೂ ಈ ಮನೆಗೆ ತಾಗುವುದಿಲ್ಲ
  • ಜೈಪುರದ ವಾಸ್ತುಶಿಲ್ಪಿ ಜೋಡಿಯಿಂದ ನಿರ್ಮಾಣವಾಗಿದ ವಿಶೇಷ ಮನೆ

ಜೈಪುರ ಮೂಲದ ಆರ್ಕಿಟೆಕ್ಟ್ಸ್ ಆದ ಅಭಿಮನ್ಯ ಸಿಂಗ್ ಹಾಗೂ ಶಿಲ್ಪಿ ದುವಾ ಎಂಬ ಜೋಡಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸವನ್ನೇ ಬರೆದಿದೆ. ಕಾಂಪೋಸಿಟ್​ ಹನಿಕೊಂಬ್​ ಸ್ಯಾಂಡ್​ವಿಚ್​​ ಪ್ಯಾನೆಲ್​ನ ಮರು ಬಳಕೆಗೆ ಮಾಡಲಾಗುವ ಪೇಪರ್​ನಿಂದ ಮನೆಯನ್ನು ಕಟ್ಟುವ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ, ಅತ್ಯಂತ ಸಮರ್ಥನೀಯ ಪುಟ್ಟ ಮನೆಗಳನ್ನು ಎರಡು ವಾರದಲ್ಲಿ ಕಟ್ಟಿ ಮುಗಿಸಿದ್ದು ದೊಡ್ಡ ಸುದ್ದಿಗೆ ಕಾರಣವಾಗಿದೆ. ಈ ಮನೆಗಳು ಅತ್ಯಂತ ಕೈಗೆಟುಕುವ ದರದಲ್ಲಿ ನಿರ್ಮಾಣವಾಗುತ್ತವೆ. ಇವುಗಳ ನಿರ್ಮಾಣಕ್ಕೆ ಅಬ್ಬಬ್ಬ ಅಂದ್ರೆ 6 ರಿಂದ 10 ಲಕ್ಷ ರೂಪಾಯಿಯವರೆಗೆ ಖರ್ಚು ಬರುತ್ತದೆ

ರಿಸೈಕಲ್ಡ್ ಕಾಗದಿಂದ ಗಟ್ಟಿಮುಟ್ಟಾದ ವಿಶಿಷ್ಟ ಫಲಕಗಳನ್ನು ತಯಾರಾಗಿಸಲಾಗುತ್ತದೆ. ಷಡ್ಭುಜಾಕೃತಿಯಲ್ಲಿ ಅವುಗಳನ್ನು ಮಡಚಿ ಪ್ಯಾನೆಲ್​ ರೀತಿ ಜೋಡಿಸಲಾಗುತ್​ತದೆ. ಫ್ಲೈವುಡ್, ಸಿಮೆಂಟ್ ಮತ್ತು ಫೈಬರ್ ಬೋರ್ಡ್​ಗಳಿಂದ ಮಾಡಿದ ಫಲಕಗಳ ನಡುವೆ ಸ್ಯಾಂಡ್​ವಿಚ್​ ಜೋಡಣೆ ಮಾಡಲಾಗುತ್ತದೆ.
ಶಿಲ್ಪಿ ಅವರು ಹೇಳುವ ಪ್ರಕಾರ ತ್ರಿಕೋನಾಕೃತಿ ರೀತಿಯ ಶೇಪ್​ ಕಟ್ಟಡಕ್ಕೆ ಅತ್ಯಂತ ಬಲಿಷ್ಠವಾದ ಶೇಫ್​, ಹೆಕ್ಸಾಂಗಲ್ ಅಂದ್ರೆ ಷಡ್ಬುಜಾಕೃತಿ ಒಟ್ಟು ಆರು ತ್ರಿಕೋನಾಕೇತಿಗಳನ್ನೊಳಗೊಂಡಿರುತ್ತದೆ. ಈ ಒಂದು ತಂತ್ರ ಕಮರ್ಷಿಯಲ್ ಏರ್​ಕ್ರಾಫ್ಟ್​ಗಳ ನಿರ್ಮಾಣಕ್ಕೆ ಅತ್ಯಂತ ಸಾಮ್ಯತೆಯನ್ನು ಹೊಂದಿದೆ. ಇಲ್ಲಿ ಆಲ್ಯೂಮಿನಿಯಂನನ್ನು ಅವುಗಳ ಬಾಳಿಕೆಯ ಗುಣದಿಂದಾಗಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಶ್ರೀಮಂತೆ ಮಹಾರಾಣಿ ಯಾರು? ಸ್ಯಾರಿ ಕಲೆಕ್ಷನ್​​ನಲ್ಲಿ ನೀತಾ ಅಂಬಾನಿಯಂತೆ ಈಕೆ ಫೇಮಸ್​​

ಈ ಮನೆಗಳ ನಿರ್ಮಾಣಕ್ಕೆ ಬಳಸಲಾಗುವ ವಸ್ತುಗಳೆಲ್ಲವೂ ಹಗುರವಾದ ಭಾರವನ್ನು ಹೊಂದಿವೆ. ಅಷ್ಟು ಮಾತ್ರವಲ್ಲ ಮನೆಗಳನ್ನು ನಾವು ಅಂದುಕೊಂಡದ್ದಕ್ಕಿಂತ ಬೇಗ ಮಾಡಿ ಮುಗಿಸಬಹುದು. ಅದು ಮಾತ್ರವಲ್ಲ ಅವುಗಳನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿಯೂ ನಿರ್ಮಾಣ ಮಾಡಬಹುದು. ಸಾಂಪ್ರದಾಯಿಕ ಮನೆಗಳ ನಿರ್ಮಾಣಕ್ಕಿಂತ ಅತ್ಯಂತ ವೇಗವಾಗಿ ಈ ಮನೆಗಳು ನಿರ್ಮಾಣವಾಗುತ್ತವೆ ಎಂದು ಹೇಳಿದ್ದಾರೆ.


">January 15, 2025


ಮನೆಗಳನ್ನು ನಿರ್ಮಾಣ ಮಾಡುವಾಗ ಬಳಸುವ ಸೆಲ್​ಗಲು ಪೇಪರ್​​ಗಳನ್ನು ಬೆಂಕಿಗೆ ಆಹುತಿಯಾಗದಂತೆ ಕಾಪಾಡುತ್ತವೆ. ಇನ್ನು ಪ್ಯಾನಲ್​ಗಳು ವಾಟರ್ ರಸಿಸ್ಟಂಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಈ ಮನೆಗಳು ವಾಟರ್ ಮತ್ತು ಫೈರ್ ಪ್ರೂಫ್​ ಮನೆಗಳಾಗಿ ಗುರುತಿಸಿಕೊಳ್ಳುತ್ತವೆ ಎಂದು ಹೇಳಿದದ್ದಾರೆ. ಅದು ಮಾತ್ರವಲ್ಲ ಈ ಮನೆಗಳನ್ನು ಅತ್ಯಂತ ಕಡಿಮೆ ಭಾರ ಇರುವುದರಿಂದ ಇವುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಳವಾಗಿ ಸ್ಥಳಾಂತರ ಮಾಡಬಹುದುಎ ಎಂದು ಕೂಡ ಶಿಲ್ಪಿ ಹೇಳಿದ್ದಾರೆ. ಈಗಾಗಲೇ ನಮ್ಮ ಕಂಪನಿ ಒಟ್ಟು 50 ಸ್ಟ್ರಕ್ಚರ್​ಗಳನ್ನು ಹೊಂದಿದೆ. ಅದರಲ್ಲಿ ಹಾಸ್ಪಿಟಲ್ ಮತ್ತು ಇನ್​ಸ್ಟಿಟ್ಯೂಷನ್ಸ್​ಗಳು ಇವೆ. ಸದ್ಯ ಈ ಜೋಡಿ ಒಟ್ಟು 500 ಗ್ರೀನ್ ಹೋಮ್ಸ್​ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಮುಂದಿನ ಐದು ವರ್ಷದಲ್ಲಿ ಇಡೀ ಭಾರತದಲ್ಲಿ ಒಟ್ಟು 500 ಮನೆಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಶಿಲ್ಪಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment