newsfirstkannada.com

ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿಕೊಟ್ಟು ರಾಮಲಲ್ಲಾನ ದರ್ಶನ ಪಡೆದ ಕೇಜ್ರಿವಾಲ್..!

Share :

Published February 13, 2024 at 10:14am

Update February 13, 2024 at 10:16am

  ಕುಟುಂಬ ಸಮೇತ ಅಯೋಧ್ಯೆಗೆ ಕೇಜ್ರಿವಾಲ್ ಭೇಟಿ

  ಕೇಜ್ರಿವಾಲ್​ಗೆ ಪಂಜಾಬ್ ಮುಖ್ಯಮಂತ್ರಿ ಸಾಥ್

  ಪ್ರಾಣ ಪ್ರತಿಷ್ಠಾಪನೆ ದಿನ ಗೈರಾಗಿದ್ದ ದೆಹಲಿ ಸಿಎಂ

ಉತ್ತರ ಪ್ರದೇಶದ ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿಕ ಪ್ರತಿ ದಿನ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ಇದರ ನಡುವೆ ನಾಯಕರು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ರಾಮ ಮಂದಿರಕ್ಕೆ ಭೇಟಿ ನೀಡ್ತಿದ್ದಾರೆ.

ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಕುಟುಂಬಸ್ಥರೊಂದಿಗೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗಿದ್ದರು. ಕೇಜ್ರಿವಾಲ್ ಕುಟುಂಬಸ್ಥರೊಂದಿಗೆ ರಾಮಲಲ್ಲಾ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಪ್ರಾಣ ಪ್ರತಿಷ್ಠಾಪನೆ ದಿನ ಕೇಜ್ರಿವಾಲ್​ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಅಂದು ಗೈರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿಕೊಟ್ಟು ರಾಮಲಲ್ಲಾನ ದರ್ಶನ ಪಡೆದ ಕೇಜ್ರಿವಾಲ್..!

https://newsfirstlive.com/wp-content/uploads/2024/02/KEJRIWAL-2.jpg

Load More