/newsfirstlive-kannada/media/post_attachments/wp-content/uploads/2024/11/LIGHT-PILLERS.jpg)
ಕೆನಡಾ ಹಾಗೂ ಸೆಂಟ್ರಲ್ ಅಲ್ಬರ್ಟಾದ ಜನರು ಒಂದು ವಿಚಿತ್ರ ನೈಸರ್ಗಿಕ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ. ಕೆನಡಾ ಹಾಗೂ ಕೇಂದ್ರ ಅಲ್ಬರ್ಟಾದಲ್ಲಿ ಈಗ ಕೊರೆಯುವ ಚಳಿಗಾಲದ ಸಮಯ ಈ ಸಮಯದಲ್ಲಿ ಮಧ್ಯರಾತ್ರಿ ಬೆಳಕಿನ ಕಂಬಗಳಂತಹ ಸಹಸ್ರಾರು ಕಂಬಗಳು ಆಗಸದಲ್ಲಿ ಮೂಡಿದ್ದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಇದು ಏಲಿಯನ್ಗಳ ಹಾವಳಿಯಾ ಎಂಬ ಪ್ರಶ್ನೆಯೂ ಕೂಡ ಉದ್ಭವವಾಗಿದೆ.
ಈ ಬೆಳಕಿನ ಕಂಬಗಳ ಸಾಲನ್ನು ನೋಡಿ ಬೆಚ್ಚಿ ಬಿದ್ದ ಜನರು ಇದೊಂದು ಅತೀಂದ್ರಿಯ ಶಕ್ತಿಯ ವಿದ್ಯಮಾನ. ಯಾವುದೋ ಸೂಪರ್ನ್ಯಾಚುರಲ್ ಸೃಷ್ಟಿಸಿರುವ ಪವಾಡ ಎಂದೇ ಗಾಬರಿಗೊಂಡಿದ್ದರು. ಆದ್ರೆ ತಜ್ಞರು ಹೇಳುವ ಪ್ರಕಾರ ಇದು ಅದ್ಯಾವುದು ಅಲ್ಲ. ಏಲಿಯನ್ಸ್ಗಳಿಂದ ಸೃಷ್ಟಿಯಾದಂತಹುದು ಅಲ್ಲ. ಸದ್ಯ ಕೆನಡಾ ಹಾಗೂ ಸೆಂಟ್ರಲ್ ಅಲ್ಬರ್ಟಾದಲ್ಲಿ ಮೈಕೊರೆಯವ ಚಳಿ. ತಾಪಮಾನ -30ಕ್ಕೆ ಹೋಗಿ ತಲುಪಿದೆ ಇಂತಹ ಸಮಯದಲ್ಲಿ ನೈಸರ್ಗಿಕವಾಗಿ ಇಂತಹದೊಂದು ವಿದ್ಯಮಾನ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ:2007ರ ಘಟನೆಗೆ ಮತ್ತೆ ಕ್ಷಮೆ ಕೇಳಿದ ರಷ್ಯಾದ ಅಧ್ಯಕ್ಷ! ಅಂದು ನಡೆದ ಸಭೆಯಲ್ಲಿ ವಿವಾದ ಹುಟ್ಟಿಸಿತ್ತು ಒಂದು ಶ್ವಾನ!
ಇಂತಹ ಒಂದು ಸನ್ನಿವೇಶ ತೀವ್ರ ಚಳಿಯಲ್ಲಿ ಹಿಮ ಹರಳುಗಳು ವಾತಾವರಣದಲ್ಲಿ ಚದುರಿ ಹೋದಾಗ ಇಂತಹ ಬೆಳಕಿನ ಕಂಬಗಳು ಸೃಷ್ಟಿಯಾಗುತ್ತವೆ. ಪ್ಲೇಟ್ ಶೇಪ್ನಂತಹ ಮಂಜಿನ ಹರಳುಗಳು ಇಂತಹ ಉದ್ದನೆಯವಾದ ಬೆಳಕಿನ ಕಂಬಗಳ ರೀತಿ ಒಂದು ಬೆಳಕನ್ನು ಸೃಷ್ಟಿಸುತ್ತವೆ ಹೀಗಾಗಿ ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸೂಪರ್ ಸ್ಟಾರ್ ಕಾರು ನೋಡಿ ಫ್ಯಾನ್ಸ್ ಫುಲ್ ಶಾಕ್.. ನಾಗರ್ಜುನ್ ಖರೀದಿಸಿದ ಕಾರಿನ ಬೆಲೆ ಎಷ್ಟು?
ವಾತಾವರಣದಲ್ಲಿ ತಾಪಮಾನ -10 ರಿಂದ -40 ರಷ್ಟಿದ್ದಾಗ ಇಂತಹ ಬೆಳಕಿನ ಕಂಬಗಳು ಸೃಷ್ಟಿಯಾಗುತ್ತವೆ. ಈ ವಿದ್ಯಮಾನದಲ್ಲಿ ಬೀದಿ ದೀಪಗಳಿಂದ ಹಾಗೂ ಚಂದ್ರನ ಬೆಳಕಿನಿಂದ ಪ್ರಕಾಶವನ್ನು ಪಡೆಯುವ ಮೂಲಕ ಈ ಕಂಬಗಳಲ್ಲಿ ಬೆಳಕು ಕಾಣುತ್ತದೆ. ಭಿನ್ನ ಭಿನ್ನ ಬೆಳಕುಗಳಲ್ಲಿಯೂ ಕೂಡ ಈ ಬೆಳಕಿನ ಕಂಬಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ