newsfirstkannada.com

ಹೊರ ರಾಜ್ಯಗಳಿಗೆ ಹೋಗುವ ಬಸ್​ಗಳಿಗೆ ಫ್ರೀ ಟಿಕೆಟ್​ ಅನ್ವಯಿಸುತ್ತಾ? 

Share :

11-06-2023

    ಇಂದಿನಿಂದ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ

    ಬಸ್​ನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ ಮುಖ್ಯ

    ಹೊರ ರಾಜ್ಯಗಳಿಗೆ ಹೋಗುವ ಬಸ್​ಗೆ ಫ್ರೀ ಟಿಕೆಟ್​ ಇದ್ಯಾ?

ಚಾಮರಾಜನಗರ: ಹೊರ ರಾಜ್ಯಗಳಿಗೆ ಹೋಗಿಬರುವ ಬಸ್‌ಗಳಲ್ಲಿ ರಾಜ್ಯದ ಒಳಗೂ ಉಚಿತ ಪ್ರಯಾಣ ಸೌಲಭ್ಯ ಇರುವುದಿಲ್ಲ ಎಂದು ಚಾಮರಾಜನಗರ ಕೆ‌ಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.

ಗುರುತಿನ ಚೀಟಿ ತೋರಿಸಿ

ರಾಜ್ಯದ ಗಡಿ ಭಾಗದವರೆಗೆ ಸಂಚರಿಸುವ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಒದಗಿಸಲಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

85 ಸಾವಿರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ನಂತರ ಮಾತು ಮುಂದುವರಿಸಿದ ಶ್ರೀನಿವಾಸ್ ಚಾಮರಾಜನಗರ ವಿಭಾಗದಲ್ಲಿ 488 ಬಸ್‌ಗಳಿವೆ. ಜಿಲ್ಲೆಯಲ್ಲಿ ಪ್ರತಿ ದಿನ ಪ್ರಯಾಣಿಸುವ 85 ಸಾವಿರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಸಿಗಲಿದೆ ಎಂದು ಹೇಳಿದ್ದಾರೆ.

ಇಂದಿನಿಂದ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಬಳಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಮಹಿಳೆಯರು ಪ್ರಯಾಣಿಸಲು ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊರ ರಾಜ್ಯಗಳಿಗೆ ಹೋಗುವ ಬಸ್​ಗಳಿಗೆ ಫ್ರೀ ಟಿಕೆಟ್​ ಅನ್ವಯಿಸುತ್ತಾ? 

https://newsfirstlive.com/wp-content/uploads/2023/06/Shakti-yojna.jpg

Load More