/newsfirstlive-kannada/media/post_attachments/wp-content/uploads/2024/11/Donald-Trump.jpg)
ಜಾಗತಿಕವಾಗಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ ಯುಎಸ್ನ ಅಧ್ಯಕ್ಷೀಯ ಚುನಾವಣೆ ಕೊನೆಗೂ ಮುಗಿದಿದೆ. ಡೊನಾಲ್ಡ್ ಟ್ರಂಪ್ ಬಹುಮತವನ್ನು ಪಡೆದು ಅಧ್ಯಕ್ಷ ಗಾದಿಗೆ ಏರುವುದು ಖಚಿತವಾಗಿದೆ. ಉಳಿದ ರಾಷ್ಟ್ರಗಳಿಗೆ ಅಮೆರಿಕಾದ ಅಧ್ಯಕ್ಷರು ಬದಲಾಗುವುದು ಇವರೇ ಗೆದ್ದರೆ ಏನು ಎಂಬ ಆತಂಕ ಎಷ್ಟಿದೆಯೋ ಗೊತ್ತಿಲ್ಲ. ಆದ್ರೆ ಭಾರತೀಯರಿಗೆ ಅಮೆರಿಕಾದಲ್ಲಿ ಒಂದು ಮಳೆ ಬಿದ್ದರು ಕೂಡ ಇಲ್ಲಿ ಕೊಡೆ ಬಿಡಿಸುವಷ್ಟು ನಂಟಿದೆ. ಅದಕ್ಕೆ ಕಾರಣ ನಮ್ಮ ದೇಶದ ಲಕ್ಷಾಂತರ ಜನ ಭಾರತೀಯ ಮೂಲದವರು ಎಚ್4 ಅವಲಂಬಿತ ಸಂಗಾತಿ ವೀಸಾ ಹೊಂದಿರುವುದು.
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಗಾದಿಗೆ ಏರುವುದು ಖಚಿತವಾಗುತ್ತಿದ್ದಂತೆ ಅಲ್ಲಿರುವ ಭಾರತೀಯರ ಮೂಲದವರಿಗೆ ಅಂದ್ರೆ ಹೆಚ್1 ಬಿ ವೀಸಾ ಪಡೆದು ಉದ್ಯೋಗದಲ್ಲಿರುವ ಪತಿ ಅಥವಾ ಪತ್ನಿಯರಿಗೆ ದೊಡ್ಡ ಆತಂಕ ಶುರುವಾಗಿದೆ. ಅದಕ್ಕೆ ಕಾರಣ ಡೊನಾಲ್ಡ್ ಟ್ರಂಪ್ ಈ ಹಿಂದೆ ಅಧ್ಯಕ್ಷ ಸ್ಥಾನದಲ್ಲಿದ್ದಾಗ ತೆಗೆದುಕೊಂಡಿದ್ದ ಒಂದು ನಿರ್ಣಯ.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದ ಭಾರತೀಯರು.. ಈ ಮಹತ್ವದ ಸ್ಥಾನಗಳು ಸಿಗುತ್ತಾ?
ಟ್ರಂಪ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಎಚ್-4 ಅವಲಂಬಿತ ವೀಸಾ ಪಡೆದು ಅಮೆರಿಕಾದಲ್ಲಿರುವವರ ಸಂಗಾತಿಗಳ ವೀಸಾ ರದ್ದುಪಡಿಸುವುದಕ್ಕೆ ಪ್ರಯತ್ನಿಸಿದ್ದರು. ಆ ಪ್ರಕ್ರಿಯೆಯೂ ಕೂಡ ಶುರುವಾಗಿತ್ತು. ಅಷ್ಟರಲ್ಲಿ ಜೋ ಬೈಡನ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಎಚ್-4 ಅವಲಂಬಿತ ಸಂಗಾತಿ ವೀಸಾದವರು ಕೊಂಚ ನಿಟ್ಟುಸಿರು ಬಿಟ್ಟಿದ್ದರು.
ಈವಾಗ ಮತ್ತೆ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷ ಸ್ಥಾನದಲ್ಲಿ ವಿರಾಜಿಸಲಿದ್ದಾರೆ. ಮರಳಿ ಅದೇ ಪ್ರಕ್ರಿಯೆಗೆ ಕೈ ಹಾಕುವ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಒಂದು ವೇಳೆ ಗ್ರೀನ್ ಕಾರ್ಡ್ ಸಿಗದಿದ್ದ ಪಕ್ಷದಲ್ಲಿ ಅವಲಂಬಿತ ಸಂಗಾತಿ ವೀಸಾದಲ್ಲಿರುವವರು ಅನಿವಾರ್ಯವಾಗಿ ಭಾರತಕ್ಕೆ ವಾಪಸ್ ಬರಲೇಬೇಕಿದೆ. ಟ್ರಂಪ್ ಹೇಳಿ ಕೇಳಿ ಅಮೆರಿಕಾ ಫಸ್ಟ್ ಎನ್ನುವ ಕಟ್ಟರ್ ರಾಷ್ಟ್ರೀಯವಾದಿ, ಜಗತ್ತನ್ನು ಬಲಿ ಕೊಟ್ಟಾದರೂ ಅಮೆರಿಕಾ ಹಾಗೂ ಅವರ ಹೂಡಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎನ್ನುವ ಹುಕಿ ಇರುವವರು. ಹೀಗಾಗಿ ಈಗಾಗಲೇ ಆಮೆರಿಕಾದ ಉತ್ಪನ್ನವನ್ನೇ ಖರೀದಿಸಿ, ಆಮೆರಿಕನ್ನರನ್ನೇ ನೇಮಿಸಿಕೊಳ್ಳಿ ಎಂದಿರುವ ಡೋನಾಲ್ಡ್ ಟ್ರಂಪ್, ಮುಂಬರುವ ದಿನಗಳಲ್ಲಿ ಎಚ್-4 ಅವಲಂಬಿತರ ಸಂಗಾತಿ ವೀಸಾ ರದ್ದು ಮಾಡುವುದು ಬಹುತೇಕ ಸಾಧ್ಯತೆ ಇದ್ದು, ಅದೇ ಭೀತಿಯಲ್ಲಿ ಸದ್ಯ ಅನಿವಾಸಿ ಭಾರತೀಯರಲ್ಲಿ ಮೂಡಿದೆ.
ಇದನ್ನೂ ಓದಿ:ಅಮೆರಿಕದ ನೂತನ ಉಪಾಧ್ಯಕ್ಷ ಭಾರತದ ಅಳಿಯ! ತೆಲುಗು ಕುವರಿ ಉಷಾ ವ್ಯಾನ್ಸ್ ಬಗ್ಗೆ ನಿಮಗೆ ತಿಳಿದಿದೆಯೇ..?
ಆಮೆರಿಕಾದಲ್ಲಿ ಶಾಶ್ವತ ನಾಗರಿಕರಿಗೆ ವಾಸ ಮಾಡಲು ಗ್ರೀನ್ ಕಾರ್ಡ್ ಪಡೆಯಲು 54 ವರ್ಷ ಕಾಯಬೇಕು. ಎಚ್1 ಬಿ ವೀಸಾ ಹೊಂದಿದವರು ಪತ್ನಿ ಅಥವಾ ಪತಿ ಗ್ರೀನ್ಕಾರ್ಡ್ಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಎಚ್-1ಬಿ ವೀಸಾ ಹೊಂದಿರುವವರ ಪತ್ನಿ ಅಥವಾ ಪತಿ ಈಗ ಎಂಪ್ಲಾಯಮೆಂಟ್ ಅಥರೈಜೇಷನ್ ಡಾಕ್ಯುಮೆಂಟ್ ಹೊಂದಿದವರಾಗಿರತ್ತಾರೆ. ಎಂಪ್ಲಾಯಮೆಂಟ್ ಅಥರೈಜೇಷನ್ ಡಾಕ್ಯುಮೆಂಟ್ ಇದ್ದರೇ, ಬ್ಯಾಂಕ್ ಖಾತೆ ತೆರೆಯಬಹುದು. ಜೊತೆಗೆ ಆಮೆರಿಕಾದಲ್ಲಿ ಕಾರ್ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಆದರೆ ಎಚ್-4 ಅವಲಂಬಿತರ ಸಂಗಾತಿ ವೀಸಾ ರದ್ದಾರೆ ಭಾರತದ ಮೂಲದವರು ಭಾರತಕ್ಕೆ ವಾಪಸ್ ಬರಲೇಬೇಕಾಗುತ್ತದೆ.2022ರ ಅಂಕಿ ಸಂಖ್ಯೆಯ ಪ್ರಕಾರ ಒಟ್ಟು 3 ಲಕ್ಷ 20 ಸಾವಿರ 791 ಜನರು ಹೆಚ್1ಬಿ ವೀಸಾ ಕಾರ್ಡ್ ಹೊಂದಿದ ಭಾರತೀಯರು ಅಮೆರಿಕಾದಲ್ಲಿ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ