ಆಸ್ತಿಗಾಗಿ ಸಂಸಾರದಲ್ಲಿ ಹುಳಿ ಹಿಂಡಿದ್ರಾ ನೀಚರು! ಪತಿಯ ನಿಧನದ ಬಳಿಕ ಪತ್ನಿಗೆ ಬೆದರಿಕೆ ಹಾಕುತ್ತಿರುವುದೇಕೆ?

author-image
Gopal Kulkarni
Updated On
ಆಸ್ತಿಗಾಗಿ ಸಂಸಾರದಲ್ಲಿ ಹುಳಿ ಹಿಂಡಿದ್ರಾ ನೀಚರು! ಪತಿಯ ನಿಧನದ ಬಳಿಕ ಪತ್ನಿಗೆ ಬೆದರಿಕೆ ಹಾಕುತ್ತಿರುವುದೇಕೆ?
Advertisment
  • ಆಸ್ತಿಗಾಗಿ ಸಂಸಾರದಲ್ಲಿ ಹುಳಿ ಹಿಂಡಿದರಾ ಸಂಬಂಧಿಕರು?
  • ಪತಿ ನಿಧನದ ಬಳಿಕ ಪತ್ನಿಗೆ ಬ್ಲ್ಯಾಕ್​ಮೇಲ್ ಮಾಡಿ ಆಸ್ತಿ ಲೂಟಿ
  • ಪತಿಯ ಕುಟುಂಬಸ್ಥರ ವಿರುದ್ಧ ಠಾಣೆ ಮೆಟ್ಟಿಲೇರಿರುವ ಪತ್ನಿ

ಆಸ್ತಿಗಾಗಿ ಸಂಸಾರದಲ್ಲಿ ಹುಳಿ ಹಿಂಡಿದರಾ ಸಂಬಂಧಿಕರು ಎಂಬ ಅನುಮಾನ ಮೂಡುವಂತಹ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ನಿಧನದ ಬಳಿಕ ಪತ್ನಿಗೆ ಬ್ಲ್ಯಾಕ್​ಮೇಲ್ ಮಾಡಿ ಆಸ್ತಿ ಲೂಟಿ ಮಾಡಿದ ಘಟನೆ ನಡೆದಿದೆ. ಪತಿ ಕುಟುಂಬಸ್ಥರ ವಿರುದ್ಧ ಪತ್ನಿ ಮಹಾಲಕ್ಷ್ಮೀ ಲೇಔಟ್ ಠಾಣೆಯ ಮೆಟ್ಟಿಲೇರಿದ್ದಾರೆ. ಮೂವರ ವಿರುದ್ಧ ಪವಿತ್ರಾ ಎನ್ನುವವರು ಕೇಸ್ ದಾಖಲಿಸಿದ್ದಾರೆ.

20 ವರ್ಷಗಳ ಹಿಂದೆ ಲಾರಿ ಚಾಲಕ ಸೋಮಶೇಖರ್ ಎಂಬುವವರ ಜೊತೆ ಪವಿತ್ರಾ ಅವರ ಮದುವೆಯಾಗಿತ್ತು. ಲಾರಿ ಚಾಲಕ ಸೋಮಶೇಖರ್ ತುಂಬಾ ಓದಿದ್ದೀನಿ ಅಂತ ಹೇಳಿ ಮದುವೆಯಾಗಿದ್ದರಂತೆ. ಇಷ್ಟಾದರೂ ಮದುವೆಯಾದ ಮೇಲೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದರಂತೆ ಪವಿತ್ರಾ ಮತ್ತು ಸೋಮಶೇಖರ್.

ಇದನ್ನೂ ಓದಿ:ಮಂಡ್ಯ VC ನಾಲೆಯಲ್ಲಿ ಮತ್ತೊಂದು ಭೀಕರ ದುರಂತ.. ಕಾರಿನಲ್ಲಿದ್ದವರಿಗಾಗಿ ತೀವ್ರ ಹುಡುಕಾಟ; ಆಗಿದ್ದೇನು?

ಈ ವೇಳೆ ಪವಿತ್ರಾಗೆ ನಾದಿನಿ ಗಂಡ ನಾಗರಾಜ್​ನಿಂದ ಕಿರುಕುಳ ಶುರುವಾಗಿದೆ. ಪವಿತ್ರಾ ಪತಿ ಸೋಮಶೇಖರ್​ಗೆ ಕುಡಿಸಿ ಪವಿತ್ರಾಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನಂತೆ. ನಾಗರಾಜ್​ ಮಾತಿಗೆ ಒಪ್ಪದಿದ್ದಾಗ ಗಂಡನಿಗೆ ಸುಳ್ಳು ಹೇಳಿ ನಿನ್ನಂತವ ಬದುಕಿರಬಾರು, ನಿನ್ನ ಪತ್ನಿ ಸರಿಯಿಲ್ಲ ಅಂದಿದ್ದರಂತೆ. ನಾನಾಗಿದ್ದರೆ ಸಾಯುತ್ತಿದ್ದೇ ಎಂದು ಪ್ರಚೋದನೆ ನೀಡಿದ್ದರಂತೆ ಇದೇ ಕಾರಣದಿಂದ ಸೋಮಶೇಖರ ತನ್ನ ಜೀವ ತಾನೇ ಕಳೆದುಕೊಂಡ ಎಂದು ಪವಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ

ಇದಾದ ನಂತರ ಆಸ್ತಿಯ ದಾಖಲೆಗಳು, 15 ಲಕ್ಷ ರೂಪಾಯಿಯ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪವಿತ್ರಾಗೆ ಬೆದರಿಕೆ ಹಾಕಿ ಆಸ್ತಿ ಪತ್ರಕ್ಕೆ ಸಹಿ ತೆಗೆದುಕೊಂಡರಂತೆ. 500 ರೂಪಾಯಿಯ ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಂಡು ಆಸ್ತಿ ಲೂಟಿ ಮಾಡಿದ್ದಾರೆ ಎಂದು ಪವಿತ್ರಾ, ನಾಗರಾಜ್, ತ್ರಿಮೂರ್ತಿ, ಸಿದ್ದಗಂಗಾ ಎಂಬುವವರ ಮೇಲೆ ದೂರು ದಾಖಲಿಸಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment