/newsfirstlive-kannada/media/post_attachments/wp-content/uploads/2024/06/AC.jpg)
ಪ್ರತಿ ಬಾರಿಯೂ ಎಸಿಯಲ್ಲಿ ಕುಳಿತುಕೊಂಡು ಕೆಲಸ ಮಾಡಲು ಯಾರು ತಾನೇ ಇಷ್ಟ ಪಡುತ್ತಾರೆ ಹೇಳಿ. ಹೀಗೆ ವರ್ಷದಲ್ಲಿ ಎಲ್ಲಾ ಕಾಲಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಹೀಗೆ ವಾತಾವರಣ ಬದಲಾವಣೆ ಆಗುತ್ತಲೇ ಇರುತ್ತದೆ.
/newsfirstlive-kannada/media/post_attachments/wp-content/uploads/2024/06/AC2.jpg)
ಹೀಗೆ ಯಾವ ಕಾಲ ಒಂದರೂ ಕೂಡ ಕೆಲವೊಬ್ಬರು ಹಗಲು ರಾತ್ರಿ ಎನ್ನದೇ ಆಫೀಸ್​ಗಳಲ್ಲಿ ಕೆಲಸ ಮಾಡುತ್ತಲ್ಲೇ ಇರುತ್ತಾರೆ. ಅದರಲ್ಲೂ ಆಫೀಸ್​ನ ಕ್ಯಾಬಿನ್​ನಲ್ಲಿ ದಿನದ 24 ಗಂಟೆಗಳ ಕಾಲ ಎಸಿ ಆನ್​​ನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಆದರೆ ನಿರಂತರವಾಗಿ ಎಸಿ ವಾತಾವರಣದಲ್ಲಿ ಇದ್ದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರವಹಿಸಿ. ಎಸಿ ಎಂದರೆ ಏರ್ ಕಂಡಿಷನ್ ಎಂದರ್ಥ. ಹೀಗೆ ಎಸಿ ಇರುವ ಸ್ಥಳಗಳಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ ಕಣ್ಣುಗಳು ಹಾಗೂ ಚರ್ಮ ಒಣಗುವಂತೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ಹೆಚ್ಚಾಗಿ ಕಿರಿಕಿರಿ ಉಂಟಾಗುತ್ತದೆ.
ಇದನ್ನೂ ಓದಿ: NDA ಸಭೆಗೂ ಮುನ್ನವೇ ದೊಡ್ಡ ಬೇಡಿಕೆ ಇಟ್ಟ ನಿತೀಶ್ ಕುಮಾರ್.. ಮೋದಿಗೆ ಟೆನ್ಷನ್ ಹೆಚ್ಚಿಸಿದ ಜೆಡಿಯು
ಅದರಲ್ಲೂ ಕೆಲವರಿಗೆ ಕಣ್ಣುಗಳ ಭಾಗದಲ್ಲಿ ಕೆರೆತ, ಕಣ್ಣು ಕೆಂಪಾಗುವುದು ಕಣ್ಣಿನ ಊತ ಉಸಿರಾಟ ವ್ಯವಸ್ಥೆಗೆ ತೊಂದರೆ ಹೀಗೆ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಅಸ್ತಮಾ, ಅಲರ್ಜಿ ಮತ್ತು ಉಸಿರಾಟದ ವ್ಯವಸ್ಥೆಯ ಸೋಂಕುಗಳು ಕಂಡುಬರುತ್ತವೆ. ದೀರ್ಘಕಾಲ ಎಸಿ ಗಾಳಿಯಲ್ಲಿ ಕೆಲಸ ಮಾಡುವವರು ಬಹಳ ಬೇಗನೆ ಶೀತ ಅಥವಾ ಜ್ವರ ಕೂಡ ಕಂಡುಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೇ ಬಹು ಮುಖ್ಯವಾಗಿ ಉಸಿರಾಟ ವ್ಯವಸ್ಥೆಯ ಮೇಲೆ ಎಸಿ ಗಾಳಿಯ ಪ್ರಭಾವದಿಂದ ಎದುರಾಗುವ ಆರೋಗ್ಯ ತೊಂದರೆಗಳು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಂದುಕೊಡುತ್ತವೆ.
ಎಸಿ ವಾತಾವರಣದಲ್ಲಿ ಬಹು ಕಾಲದವರೆಗೆ ಕುಳಿತು ಕೆಲಸ ಮಾಡುವುದರಿಂದ ಅಥವಾ ಹೆಚ್ಚು ಸಮಯ ಕಳೆಯುವುದರಿಂದ ದೇಹದ ತಾಪಮಾನ ಕಡಿಮೆಯಾಗುತ್ತದೆ. ಇದರಿಂದ ಬಹುಬೇಗನೆ ಕೈ ಕಾಲು ಹಿಡಿದು ಕೊಳ್ಳುವುದು, ಕೀಲು ನೋವಿನ ಸಮಸ್ಯೆ, ಮಾಂಸ ಖಂಡಗಳ ಸೆಳೆತ ಉಂಟಾಗುವುದು ಇತ್ಯಾದಿ ತೊಂದರೆಗಳು ಆಗುತ್ತವೆ. ಇಂತಹ ಸಂದರ್ಭದಲ್ಲಿ ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ಆಗಾಗ ನೀರು ಕುಡಿಯುವುದು, ಸರಳವಾದ ವ್ಯಾಯಾಮಗಳನ್ನು ಮಾಡುವುದು ಅಥವಾ ಎದ್ದು ನಡೆದಾಡುವುದು ಮಾಡಿದರೆ ದೇಹದಲ್ಲಿ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ.
/newsfirstlive-kannada/media/post_attachments/wp-content/uploads/2024/06/AC1.jpg)
ಇನ್ನು, ಏರ್ ಕಂಡೀಷನರ್​ನಿಂದ ಪಾರು ಆಗಬೇಕಾದರೆ, ಆಗಾಗ ಎಸಿ ಇರುವ ಜಾಗದಲ್ಲಿ ಹೆಚ್ಚು ಕಾಲ ಕಳೆಯಬೇಡಿ. ಆಗಾಗ ನೈಸರ್ಗಿಕ ಗಾಳಿ ಪಡೆಯಿಸಿ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕಾಂಶಗಳನ್ನು ಆಹಾರಗಳ ಮೂಲಕ ತೆಗೆದುಕೊಳ್ಳಬೇಕು. ಆಗಾಗ ಎಸಿ ವಾತಾವರಣದಿಂದ ಹೊರ ಬಂದರೆ ಒಳ್ಳೆಯದು. ಆಗಾಗ ಎಸಿಯನ್ನು ಕಡಿಮೆ ಮಾಡುತ್ತಾ ಇರಿ ಹೀಗೆ ಮಾಡಿದರೇ ನಿಮ್ಮ ದೇಹದ ಮೇಲೆ ಎಸಿಯಿಂದಾಗುವ ಪರಿಣಾಮದಿಂದ ದೂರ ಇರಬಹುದು.
ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us