newsfirstkannada.com

ಗಂಡ-ಹೆಂಡತಿ ನಡುವೆ ಗಲಾಟೆ.. ಮಧ್ಯ ಪ್ರವೇಶಿಸಿದ ಬಾಮೈದುನನಿಗೆ ಚಾಕು ಇರಿದು ಕೊಲೆ

Share :

Published April 10, 2024 at 7:13am

Update April 10, 2024 at 9:56am

  ಆಗಾಗ ಮನೆಯಲ್ಲಿ ಕೌಟುಂಬಿಕ ಗಲಾಟೆ ನಡೆಯುತ್ತಿತ್ತು

  ಗಂಡ-ಹೆಂಡತಿ ನಡುವಿನ ಗಲಾಟೆ ಬಿಡಿಸಲು ಬಂದ ಬಾಮೈದ

  ಬಾಮೈದುನನಿಗೆ ಚಾಕು ಇರಿದ ಬಾವ.. ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರು: ಫ್ಯಾಮಿಲಿಯಲ್ಲಿ ನಡೆದ ಗಲಾಟೆಯಲ್ಲಿ ಬಾವ ತನ್ನ ಬಾಮೈದನಿಗೆ ಚಾಕು ಚುಚ್ಚಿ ಕೊಲೆ ಮಾಡಿದ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ ಕುಮಾರ್( 32) ಕೊಲೆಯಾದ ವ್ಯಕ್ತಿ.

ಬಾವ ಲಕ್ಷ್ಮಣ್ ಎಂಬಾತನಿಂದ ಕಿರಣ್​ ಕುಮಾರ್​ನ ಹತ್ಯೆಯಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿರೋ ಘಟನೆ ಇದಾಗಿದೆ.

ಆಗಾಗ ಮನೆಯಲ್ಲಿ ಕೌಟುಂಬಿಕ ಗಲಾಟೆ ನಡೆಯುತ್ತಿತ್ತು. ಆರೋಪಿ ಲಕ್ಷ್ಮಣ್ ಹಾಗೂ ಪತ್ನಿ ಮದ್ಯೆ ಜಗಳ ಆಗುತ್ತಿತ್ತು.ಈ ವಿಚಾರಕ್ಕೆ ಬಾವ-ಬಾಮೈದನ ಮಧ್ಯೆ ಜಗಳ ನಡೆದಿದೆ. ಈ ವೇಳೆ ಚಾಕುವಿನಿಂದ ಕಿರಣ್ ಬೆನ್ನಿಗೆ ಬಾವ ಲಕ್ಷ್ಮಣ್ ಇರಿದ್ದಿದ್ದಾನೆ.

ಇದನ್ನೂ ಓದಿ: ಇಂದು 2nd PUC ರಿಸಲ್ಟ್.. ಫಲಿತಾಂಶ ಎಷ್ಟು ಗಂಟೆಗೆ ಪ್ರಕಟ? ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

ತೀವ್ರ ಗಾಯಗೊಂಡು ಬಾಮೈದನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 302 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ-ಹೆಂಡತಿ ನಡುವೆ ಗಲಾಟೆ.. ಮಧ್ಯ ಪ್ರವೇಶಿಸಿದ ಬಾಮೈದುನನಿಗೆ ಚಾಕು ಇರಿದು ಕೊಲೆ

https://newsfirstlive.com/wp-content/uploads/2024/04/K-J-Halli.jpg

Load More