Advertisment

VIDEO: ರಾಜ್ ಕಪೂರ್ 100ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಣಬೀರ್​-ಸೈಫ್ ಕಿತ್ತಾಡಿಕೊಂಡಿದ್ದೇಕೆ?

author-image
Gopal Kulkarni
Updated On
VIDEO: ರಾಜ್ ಕಪೂರ್ 100ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಣಬೀರ್​-ಸೈಫ್ ಕಿತ್ತಾಡಿಕೊಂಡಿದ್ದೇಕೆ?
Advertisment
  • ರಾಜ್​ ಕಪೂರ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಕಿತ್ತಾಡಿಕೊಂಡ್ರಾ ಸೈಫ್- ರಣಬೀರ್?
  • ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತಿದೆ ಉಭಯ ನಟರ ನಡುವಿನ ಕಿತ್ತಾಟ
  • ಏನಾಯ್ತು ಇಬ್ಬರ ನಡುವೆ ಎಂಬ ಕುತೂಹಲದಲ್ಲಿ ನೆಟ್ಟಿಗರ ಹಲವು ಕಮೆಂಟ್

ರಾಜ್ ಕಪೂರ್​, ಹಿಂದಿ ಸಿನಿಮಾ ಜಗತ್ತು ಎಂದೂ ಮರೆಯದ ಹೆಸರು. ಬಾಲಿವುಡ್​​ನ್ನು ಬೇರೆಯದ್ದೇ ಎತ್ತರಕ್ಕೆ ತೆಗೆದುಕೊಂಡು ಹೋದ ಶ್ರೇಯ ರಾಜ್​ ಕಪೂರ್​ ಅವರಿಗೆ ಸಲ್ಲುತ್ತದೆ​. ಇದೇ ಡಿಸೆಂಬರ್ 14ಕ್ಕೆ ರಾಜ್​ ಕಪೂರ್​​ ಅವರ 100ನೇ ಜನ್ಮ ದಿನದ ಸಡಗರ. ಕಪೂರ್ ಕುಟುಂಬ ಇದನ್ನು ಡಿಸೆಂಬರ್ 14 ರಿಂದ 19ವರೆಗೆ ಅಂದ್ರೆ ಒಟ್ಟು ಐದು ದಿನ ಸಂಭ್ರಮದಿಂದ ಆಚರಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಸದ್ಯ ಇದೇ ಸಂಭ್ರಮದಲ್ಲಿ ಸುದ್ದಿಯೊಂದು ದೊಡ್ಡದಾಗಿ ಹರಿದಾಡುತ್ತಿದ್ದಾರೆ. ಈ ಒಂದು ಇವೆಂಟ್​ನಲ್ಲಿ ರಾಜ್ ಕಪೂರ್ ಮೊಮ್ಮಗ ರಣಬೀರ್ ಕಪೂರ್ ಹಾಗೂ ಸೈಫ್ ಅಲಿಖಾನ್ ಕಿತ್ತಾಡಿಕೊಂಡಿದ್ದಾರೆ ಎನ್ನುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisment

ಇದನ್ನೂ ಓದಿ:50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿ ಯಾರು? ದೀಪಿಕಾ ಅಲ್ಲ, ಆಲಿಯಾ ಅಲ್ಲ!

ಮುಂಬೈನಲ್ಲಿ ಆಯೋಜಿಸಲಾದ ರಾಜ್ ಕಪೂರ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಬಾಲಿವುಡ್​ ನಟರಾದ ಸೈಫ್ ಅಲಿಖಾನ್ ಮತ್ತು ರಣಬೀರ್​ ಕಪೂರ್ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿರುವ ವಿಡಿಯೋವೊಂದು ಸದ್ಯ ದೊಡ್ಡ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಸೈಫ್ ಅಲಿಖಾನ್ ಸ್ವಲ್ಪ ಕೋಪಗೊಂಡಂತೆ ಕಾಣುತ್ತಿದ್ದು, ರಣಬೀರ್ ಕಪೂರ್ ಅವರಿಗೆ ಕೋಪದಲ್ಲಿಯೇ ಏನೋ ತಿಳಿಸಿ ಹೇಳುತ್ತಿರುವಂತ ದೃಶ್ಯಾವಳಿಗಳು ಇವೆ.

Advertisment


ವಿಡಿಯೋದಲ್ಲಿ ಸೈಫ್ ಅಲಿಖಾನ್ ಏನೋ ಕಿರಿಕಿರಿ ಮಾಡಿದಂತೆ, ಅದನ್ನು ರಣಬೀರ್ ಕಪೂರ್ ಅವರಿಗೆ ಹೇಳುತ್ತಿರುವಂತೆ ಅದಕ್ಕೆ ಸೈಫ್ ಒಕೆ ಎಂದು ಸೂಚನೆ ನೀಡುವಂತಹ ಹಾವಭಾವಗಳು ಈ ಇಬ್ಬರ ನಡುವೆ ಕಂಡು ಬಂದಿವೆ. ಇದು ಸದ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ತಹರೇವಾರಿ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ:ದೇವಾಲಯದ ಗರ್ಭಗುಡಿ ಪ್ರವೇಶಿಸದಂತೆ ತಡೆ.. ಸಂಗೀತ ಮಾಂತ್ರಿಕ ಇಳಯರಾಜಗೆ ಅಪಮಾನ ಆರೋಪ

ಈ ಒಂದು ವಿಡಿಯೋ ಸದ್ಯ ನೆಟ್ಟಿಗರಲ್ಲಿ ವಿಪರೀತ ಕುತೂಹಲವನ್ನು ಮೂಡಿಸುತ್ತಿದೆ. ಅಸಲಿಗೆ ಈ ಇಬ್ಬರು ನಟರ ಮಧ್ಯೆ ನಡೆದಿದ್ದೇನು. ಯಾಕೆ ಹೀಗೆ ವಾಗ್ವಾದ ಮಾಡಿಕೊಂಡಿದ್ದಾರೆ ಎಂಬ ಕುತೂಹಲ ಜೊತೆಗೆ ಹಲವು ರೀತಿಯ ಕಮೆಂಟ್​ಗಳು ಕೂಡ ಹರಿದು ಬರುತ್ತಿವೆ. ಸೈಫ್ ನಿಜಕ್ಕೂ ಒಬ್ಬ ಜಂಟಲ್​ಮನ್ ಅವರನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ ರಣಬೀರ್ ಮಾತನಾಡುತ್ತಿರುವ ಹಾಗೆ ಅವರೊಂದಿಗೆ ಯಾರು ಕೂಡ ಮಾತನಾಡಿಲ್ಲ ಎಂದು ಹೇಳಿದರೆ. ಮತ್ತೊಬ್ಬರು ರಣಬೀರ್ ಜೊತೆ ಸೈಪ್ ಎಷ್ಟು ಗೌರವಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ, ರಾಜ್​ ಕಪೂರ್ ನೂರನೇ ವರ್ಷದ ಹುಟ್ಟು ಹಬ್ಬ, ಆದರೆ ಏನು ಉಪಯೋಗ ಇವರು 2-3 ವರ್ಷದ ಹಿಂದೆ ಅವರ ಸ್ಟುಡಿಯೋವನ್ನೇ ಮಾರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment