Advertisment

ಕೇವಲ 6 ಸಾವಿರದಲ್ಲಿ ವಿದೇಶಕ್ಕೆ ಹೋಗಬಹುದು: ಭಾರತೀಯರು ಈ ಆಫರ್ ಮಿಸ್ ಮಾಡಲೇಬೇಡಿ

author-image
Gopal Kulkarni
Updated On
ಕೇವಲ 6 ಸಾವಿರದಲ್ಲಿ ವಿದೇಶಕ್ಕೆ ಹೋಗಬಹುದು: ಭಾರತೀಯರು ಈ ಆಫರ್ ಮಿಸ್ ಮಾಡಲೇಬೇಡಿ
Advertisment
  • ಕೇವಲ 6 ಸಾವಿರ ರೂಪಾಯಿಗಳಲ್ಲಿ ನೀವು ಈ ದೇಶಕ್ಕೆ ಹೋಗಬಹುದು
  • ಭಾರತದ ಹಲವು ನಗರಗಳಿಂದ ತಡೆ ರಹಿತ ವಿಮಾನ ಪ್ರಯಾಣ ವ್ಯವಸ್ಥೆ
  • ಯಾವ ವಿಮಾನಯಾನ ಸಂಸ್ಥೆ ಈ ಬಿಗ್ ಆಫರ್ ನೀಡಿದೆ ಅಂತ ಗೊತ್ತಾ?

ಏರ್ ಅರೇಬಿಯಾ ಅತ್ಯಂತ ಕಡಿಮೆ ದರದಲ್ಲಿ ಸೂಪರ್ ಸೀಟ್ ಸೇಲ್ ಎಂಬ ಆಫರ್​ನ್ನು ಅತ್ಯಂತ ಕಡಿಮೆ ಬೆಲೆಗೆ ಯುನೈಟೆಡ್​ ಅರಬ್ ಎಮಿರೇಟ್ಸ್​​ನ ಹಲವು ನಗರಗಳಿಗೆ ಹೋಗಿ ಬರಲು ನೀಡಿದೆ. ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಸೇರಿ ಅರ್ಲಿ ಬರ್ಡ್ಸ್ ಅನ್ನೋ ಹೆಸರಿನಲ್ಲಿ ಪ್ರಮೋಷನ್ ಮಾಡಲಾಗುತ್ತಿದೆ. ಈ ಒಂದು ಆಫರ್​​ನಿಂದ ಸುಮಾರು 5 ಲಕ್ಷ ಪ್ರಯಾಣಿಕರು ಅರಬ್​ನ ಶರ್ಜಾ, ಅಬುದಾಬಿ ಹಾಗೂ ರಸಲ್​ಖೈಮಾವನ್ನು ತಲುಪಲು ನೀಡಬೇಕಾಗಿದ್ದು ಕೇವಲ 5914 ರೂಪಾಯಿ ಮಾತ್ರ.

Advertisment

ಈ ಒಂದು ಪ್ರಮೋಷನ್​ ತಡೆರಹಿತ ವಿಮಾನಯಾನ ಕಲ್ಪಿಸುವುದರೊಂದಿಗೂ ಶುರುವಾಗಿದೆ. ಭಾರತದಿಂದಲೂ ಕೂಡ ಶಾರ್ಜಾ, ರಸಲ್​ಖೈಮಾ ಹಾಗೂ ಅಬುದಾಬಿಗೆ ನೇರ ವಿಮಾನ ಪ್ರಯಾಣ ಕಲ್ಪಿಸಲಾಗಿದ್ದು ಒಂದು ಸೀಟ್​ಗೆ ಕೇವಲ 5,914 ರೂಪಾಯಿಯ ಬಂಪರ್ ಆಫರ್ ನೀಡಲಾಗಿದೆ. ಭಾರತದ ಜೊತೆಗೆ ಜಾಗತಿಕ ಜನಪ್ರಿಯ ನಗರಗಳಾದ ಮಿಲಾನ್, ವಿಯನ್ನಾ, ಕೈರೋ, ಕ್ರ್ಯಾಕೊವ್​, ಅಥೆನ್ಸ್, ಮಾಸ್ಕೋವ್​, ಬಾಕು, ನೈರೋಬಿಯಾ ಮತ್ತು ಇತರ ನಗರಗಳಿಂದ ಪ್ರಯಾಣಿಕರನ್ನು ಸೆಳೆಯಲು ಈ ಆಫರ್​ನ್ನು ನೀಡಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ದ್ವೀಪ.. ಲ್ಯಾಂಬೊರ್ಗಿನಿ, ಫೆರಾರಿ ಕಾರುಗಳು ಓಡುತ್ತಿದ್ದ ಐಲ್ಯಾಂಡ್​ ಈಗ ದಿವಾಳಿ ಆಗಿದ್ದು ಹೇಗೆ?

ಈ ಆಫರ್ ಅತ್ಯಂತ ಕಡಿಮೆ ಅವಧಿಗೆ ನಿಗದಿಗೊಳಿಸಲಾಗಿದೆ. ಫೆಬ್ರವರಿ 17 ರಿಂದ ಅಂದ್ರೆ ಇಂದಿನಿಂದ ಮಾರ್ಚ್​ 2ರವರೆಗೆ ಈ ಒಂದು ಆಫರ್ ಚಾಲ್ತಿಯಲ್ಲಿರಲಿದೆ. ಮತ್ತೆ ಇದನ್ನು ಸೆಪ್ಟೆಂಬರ್ 1, 2025 ರಿಂದ 28 ಮಾರ್ಚ್​ 2026ರವರೆಗೆ ವಿಸ್ತರಿಸಲು ಕೂಡ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

Advertisment

ಇದನ್ನೂ ಓದಿ:13ನೇ ಮಗುವಿಗೆ ತಂದೆಯಾದ ವಿವಾದದಲ್ಲಿ ಮಸ್ಕ್​; ಕೊನೆಗೂ ಮೌನ ಮುರಿದ ಟೆಸ್ಲಾ CEO

ಭಾರತದಲ್ಲಿ ಕೇವಲ 5914 ರೂಪಾಯಿ ನೀಡುವ ಮೂಲಕ ನೀವು ಮುಂಬೈ, ದೆಹಲಿ, ಅಹ್ಮದಾಬಾದ್, ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಕೊಲ್ಕತ್ತಾ, ಜೈಪುರ್, ನಾಗಪುರ್​, ಗೋವಾ, ತಿರುವನಂತಪುರ, ಕೊಚ್ಚಿ, ಕೊಯಮುತ್ತೂರು ಹಾಗೂ ಕೊಜಿಕೊಡ್​​ನಿಂದ ತಡೆರಹಿತ ವಿಮಾನಗಳು ಯುಎಇಗೆ ಪ್ರಯಾಣ ಬೆಳೆಸಲಿವೆ.
ಒಟ್ಟು ಇನ್ನೂರು ಮಾರ್ಗಗಳ ಮೂಲಕ 5 ಲಕ್ಷ ಪ್ರಯಾಣಿಕರನ್ನು ಯುಎಇಗೆ ಕರೆದುಕೊಂಡು ಬರುವ ಗುರಿಯನ್ನು ಏರ್ ಅರೇಬಿಯಾ ಹೊಂದಿದೆ. ವಿಮಾನಯಾನ ಉದ್ಯಮದಲ್ಲಿ ತನ್ನ ಪಾರುಪತ್ಯ ಸಾಧಿಸುವ ಉದ್ದೇಶದಿಂದ ಏರ್ ಅರೇಬಿಯಾ ಇಂತಹ ಹಲವು ಆಫರ್​ಗಳನ್ಉ ನೀಡಿ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment