/newsfirstlive-kannada/media/post_attachments/wp-content/uploads/2024/07/Shirur-6.jpg)
ಮಾನವ ಮೂಳೆ ಮಾಂಸದ ತಡಿಕೆ. ಇಂದು ಹುಟ್ಟಿದವ ನಾಳೆ ಸಾಯಲೇಬೇಕು. ಆದರೆ ಹುಟ್ಟು-ಸಾವಿನ ನಡುವೆ ಬಂದು ಹೋಗುವ ಸಮಯ ಮಾತ್ರ ಶಾಶ್ವತ. ಅದು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಅದರಲ್ಲೂ ಆತ್ಮೀಯರನ್ನು ಕಳೆದುಕೊಂಡಾಗ ಆಗುವ ನೋವು ಮಾತ್ರ ಅಷ್ಟಿಷ್ಟಲ್ಲ. ಒಂದಲ್ಲಾ ಒಂದು ದಿನ ಪ್ರತಿಯೊಬ್ಬರು ಮಣ್ಣನ್ನು ಸೇರುವುದಿದೆ. ಆದರೆ ಅದನ್ನು ಭಗವಂತ ನಿರ್ಣಯಿಸುತ್ತಾನೆ ಎಂಬುದು ಜನರ ನಂಬಿಕೆ. ಆದರೆ ಮಣ್ಣು ಸೇರಿದ ದೇಹ ಕೊಳೆಯುತ್ತದೆ. ಮೃತದೇಹ ಕೊಳೆಯಲು ಎಷ್ಟು ದಿನ ಬೇಕಾಗುತ್ತದೆ ಗೊತ್ತಾ? ಈ ಕುರಿತಾಗಿ ಕುತೂಹಲಕಾರಿಯಾದ ಮಾಹಿತಿ ಇಲ್ಲಿದೆ.
ಸತ್ತ ವ್ಯಕ್ತಿಯ ದೇಹವನ್ನು ಮೂರರಿಂದ ನಾಲ್ಕು ದಿನಗಳವರೆಗೆ ಮಾತ್ರ ಇಡಬಹುದಾಗಿದೆ. ಆದರೆ 4ರಿಂದ 10ಗಳಲ್ಲಿ ಆಟೋಲಿಸಿಸ್ (ಸ್ವಯಂ ಜೀರ್ಣಕ್ರಿಯೆ)​ ಆಗುತ್ತದೆ. ವಾಸನೆ ಬರಲು ಪ್ರಾರಂಭವಾಗುತ್ತದೆ. ಬಣ್ಣವು ಬದಲಾಗುತ್ತದೆ.
/newsfirstlive-kannada/media/post_attachments/wp-content/uploads/2024/07/Shirur-4.jpg)
ಮೃತ ವ್ಯಕ್ತಿಯ ದೇಹ 4ರಿಂದ 10 ದಿನಗಳಲ್ಲಿ ಉಬ್ಬಲು ಪ್ರಾರಂಭವಾಗುತ್ತದೆ. ಹೊಟ್ಟೆಯಲ್ಲಿ ಅನಿಲ ಸಂಗ್ರಹವಾಗುತ್ತದೆ. 10 ರಿಂದ 20 ದಿನದಲ್ಲಿ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಉಬ್ಬಿದ ದೇಹವು ಸಡಿಲವಾಗುತ್ತದೆ. ದೇಹದಿಂದ ದ್ರವಗಳು ಸುರಿಯಲಾರಂಭಿಸುತ್ತವೆ.
ಮಣ್ಣು ಸೇರಿದ ದೇಹಗಳಿಗೆ ಹುಳುಗಳು ಆಕ್ರಮಿಸಿಕೊಳ್ಳುತ್ತವೆ. ದೇಹವನ್ನೆಲ್ಲಾ ಪೂರ್ತಿಯಾಗಿ ತಿಂದು ಕೊನೆಗೆ ಅಸ್ಥಿಪಂಜರವನ್ನು ಉಳಿಸಿಬಿಡುತ್ತವೆ. ಇನ್ನು ನೀರು ಮತ್ತು ಮಣ್ಣು ಸೇರಿದ ದೇಹ ಸಂಪೂರ್ಣ ವಿಕಾರವಾಗುತ್ತದೆ.
/newsfirstlive-kannada/media/post_attachments/wp-content/uploads/2024/07/Shirur-1.jpg)
ಇದನ್ನೂ ಓದಿ: ಕಾಣೆಯಾದ ಲಾರಿಯನ್ನು ಈ 4 ತಂತ್ರಜ್ಞಾನಗಳ ಮೂಲಕ ಹುಡುಕಬಹುದು! ಇಲ್ಲಿದೆ ಮಾಹಿತಿ
ಶವಪೆಟ್ಟಿಗೆಯಲ್ಲಿಟ್ಟ ಮೃತದೇಹವು ಸರಿಯಾಗಿ ಕೊಳೆತು ಅಸ್ಥಿಪಂಜರ ಮಾತ್ರ ಉಳಿಯಲು ಒಂದು ವರ್ಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಭೂಕುಸಿತ ಪ್ರಕರಣ ಇಂದು ನಿನ್ನೆಯದಲ್ಲ.. ಇದಕ್ಕೆ ಯಾಕೆ ಸರ್ಕಾರ ಗಮನಹರಿಸುತ್ತಿಲ್ಲ..?
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 7 ಜನ ಸಾವನ್ನಪ್ಪಿದ್ದು, 3 ಜನರಿಗಾಗಿ ಹುಡುಕಾಟ ಮುಂದುವರೆದಿದೆ. ಅಂದಹಾಗೆಯೇ ಈ ಘಟನೆ ಜುಲೈ 16ಕ್ಕೆ ಸಂಭವಿಸಿದೆ. ಇಂದಿಗೆ 11 ದಿನಗಳಾಗಿದೆ. ಅದರಲ್ಲೂ ಲಾರಿ ಮತ್ತು ಚಾಲಕನ ಮೃತದೇಹ ನೀರಿನಡಿಯಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ. ಕಾರ್ಯಾಚರಣೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us