/newsfirstlive-kannada/media/post_attachments/wp-content/uploads/2025/03/tmk-jatre7-1.jpg)
ತುಮಕೂರು: ಇಂದು ಜಕ್ಕೇನಹಳ್ಳಿ ಜಾತ್ರೆಯಲ್ಲಿ ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಡೀ ಕುಟುಂಬ ಭಾಗಿಯಾಗಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಬರ್ತ್ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?
ಪತ್ನಿ ಪ್ರೇರಣಾ ಜೊತೆ ಧ್ರುವ ಸಾರ್ಜಾ ಕಾರಿನಲ್ಲಿ ಹೋಗುತ್ತಿದ್ದಾಗ ಕಬ್ಬಿನ ಜ್ಯೂಸ್ ಕೊಡಿಸಿದ್ದಾರೆ. ಹೌದು, ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿ ಗ್ರಾಮಕ್ಕೆ ಇಡೀ ಸರ್ಜಾ ಕುಟುಂಬ ಹೋಗಿದೆ.
ಒಂದು ಕಡೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಜೊತೆಗೆ ಬಂದರೆ, ಅತ್ತ ನಟ ಅರ್ಜುನ್ ಸರ್ಜಾ ಹಾಗೂ ಕುಟುಂಬ ಹುಟ್ಟೂರಿಗೆ ಭೇಟಿ ಕೊಟ್ಟಿದೆ. ಹುಟ್ಟೂರಿನ ಅಹೋಬಲನರಸಿಂಹಸ್ವಾಮಿ ಜಾತ್ರೆಯಲ್ಲಿ ಇಡೀ ಸರ್ಜಾ ಕುಟುಂಬ ಭಾಗಿಯಾಗಿದೆ.
ನಟ ಅರ್ಜುನ್ ಸಾರ್ಜಾ, ಧೃವ ಸರ್ಜಾ ಅವರು ದೇವಸ್ಥಾನದ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರತಿ ವರ್ಷವೂ ಸರ್ಜಾ ಕುಟುಂಬಸ್ಥರು ಈ ಜಾತ್ರೆಗೆ ಬರುತ್ತಾ ಇರುತ್ತಾರೆ. ಅದರಂತೆ ಈ ಬಾರಿಯೂ ಅಹೋಬಲ ನರಸಿಂಹಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿ ರಥ ಎಳೆದು ಪೂಜೆ ಸಲ್ಲಿಸಿದ್ದಾರೆ.
ಇನ್ನೂ ಸರ್ಜಾ ಕುಟುಂಬಸ್ಥರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಆಗ ಅಭಿಮಾನಿಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸರ ಹರಸಾಹಸ ಪಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ