newsfirstkannada.com

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್‌ ಸರ್ಜಾ ಪುತ್ರಿ ನಟಿ ಐಶ್ವರ್ಯ

Share :

Published June 12, 2024 at 6:20am

  ಪ್ರೀತಿಸಿದ ಹುಡುಗನ ಕೈ ಹಿಡಿದ ನಟಿ ಐಶ್ವರ್ಯಾ ಸರ್ಜಾ

  ಸಿನಿಮಾ ನಟನನ್ನು ಅಳಿಯ ಮಾಡಿಕೊಂಡರು ಅರ್ಜುನ್ ಸರ್ಜಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಮದುವೆ ಫೋಟೋಸ್​

ಸ್ಯಾಂಡಲ್​ವುಡ್​ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರ ಜೊತೆ ಚೆನ್ನೈನ ಗೇರುಗಂಬಾಕ್ಕಂನಲ್ಲಿರುವ ಶ್ರೀ ಯೋಗಾ ಆಂಜನೇಯ ದೇವಸ್ಥಾನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ‘ದರ್ಶನ್​​ಗೆ ಯಾವುದೇ ತೊಂದರೆ ಆಗಲ್ಲ, ಯಾಕೆಂದರೆ..’ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?

ಮೊನ್ನೆ ಮೊನ್ನೆಯಷ್ಟೇ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅವರ ಹಳದಿ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮದ ಫೋಟೋಗಳು ಕೂಡ ವೈರಲ್​ ಆಗಿದ್ದವು.  ಇನ್ನು, ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಮದುವೆಗೆ ಕನ್ನಡ, ತೆಲುಗು ಸಿನಿಮಾ ನಟ ಹಾಗೂ ನಟಿಯರು ಭಾಗಿಯಾಗಿದ್ದರು.

View this post on Instagram

A post shared by Aishwarya Arjun (@aishwaryaarjun)

ಅದರಲ್ಲೂ ನಟ ವಿಶಾಲ್, ಕಾರ್ತಿ, ಧ್ರುವ ಸರ್ಜಾ, ಜಗಪತಿ ಬಾಬು, ಸಮುದ್ರಕನಿ, ವಿಜಯಕುಮಾರ್, ಕೆಎಸ್ ರವಿಕುಮಾರ್, ಜಿಕೆ ರೆಡ್ಡಿ, ಎಸ್‌ಆರ್ ಪ್ರಭು ಮತ್ತು ಕೆಇ ಜ್ಞಾನವೇಲ್ ರಾಜಾ ಕೂಡ ಭಾಗವಹಿಸಿದ್ದರು. ಇನ್ನು, ಮದುವೆಯ ಸುಂದರವಾದ ಫೋಟೋಗಳನ್ನು ನಟಿ ಐಶ್ವರ್ಯಾ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟಿಯ ಮದುವೆ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ದಂಪತಿಯ ಆರತಕ್ಷತೆತಯೂ ಜೂನ್ 14ರಂದು ಜನಪ್ರಿಯ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್‌ ಸರ್ಜಾ ಪುತ್ರಿ ನಟಿ ಐಶ್ವರ್ಯ

https://newsfirstlive.com/wp-content/uploads/2024/06/sarja1.jpg

Load More