newsfirstkannada.com

ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್

Share :

Published July 1, 2024 at 3:28pm

  ಬಿಗ್​ಬಾಸ್​ ಮನೆಗೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದ ಅರ್ಮಾನ್ ಮಲಿಕ್ ದಂಪತಿ

  ಮೊದಲ ವಾರವೇ ಬಿಗ್​ಬಾಸ್​ನಿಂದ ಆಚೆ ಬಂದ ಅರ್ಮಾನ್ ಮಲಿಕ್ ಹೆಂಡತಿ

  ’ನಾನು ನೀವು ಹಾಕಿದ ವೋಟಿಂಗ್​ನಿಂದ ಆಚೆ ಬಂದಿಲ್ಲ‘ ಪಾಯಲ್ ಹೇಳಿದ್ದೇನು?

ಬಹುನಿರೀಕ್ಷಿತ ರಿಯಾಲಿಟಿ ಶೋ ಹಿಂದಿಯ ಬಿಗ್​​ಬಾಸ್ ಒಟಿಟಿ ಸೀಸನ್​​ 3 ಆರಂಭವಾಗಿ ಒಂದು ವಾರ ಮುಕ್ತಾಯಗೊಂಡಿದೆ. ಈ ಶೋ ಶುರುವಾಗೋ ಮೊದಲಿನಿಂದಲೂ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.​ ಜೂನ್​ 21ನೇ ತಾರೀಖಿನಂದು ಬಿಗ್​ಬಾಸ್​​ ಒಟಿಟಿ ಸೀಸನ್ 3 ಪ್ರಾರಂಭಗೊಂಡಿತ್ತು. ಇನ್ನು, ಈ ಬಾರೀ ಬಿಗ್​ಬಾಸ್‌ ಓಟಿಟಿ ಸೀಸನ್ 3ರ ಸಾರಥ್ಯವನ್ನು ಸಲ್ಮಾನ್ ಖಾನ ಬದಲು ಅನಿಲ್ ಕಪೂರ್ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಇಬ್ಬರು ಹೆಂಡತಿಯರ ಜೊತೆ ಎಂಟ್ರಿ ಕೊಟ್ಟ ಮುದ್ದಿನ ಗಂಡ; ಉಳಿದ ಸ್ಪರ್ಧಿಗಳು ಯಾರು?

ಸದ್ಯ ಬಿಗ್​ಬಾಸ್​​ ಶುರುವಾಗಿ ಒಂದು ವಾರ ಕಳೆದಿದೆ. ಶುರುವಾದ ಒಂದೇ ವಾರದಲ್ಲಿ ಬಿಗ್​ಬಾಸ್​​ ಮನೆಯಿಂದ ಆಚೆ ಬಂದಿರುವ ಸ್ಪರ್ಧಿ ಹೆಸರು ರಿವೀಲ್​ ಆಗಿದೆ. ಹೌದು, ಈ ಬಾರಿಯ ಬಿಗ್​ಬಾಸ್​ನಲ್ಲಿ ಯೂಟ್ಯೂಬರ್ ಅರ್ಮಾನ್ ಮಲಿಕ್ ಹಾಗೂ ಅವರ ಇಬ್ಬರು ಪತ್ನಿಯರಾದ ಕೃತಿಕಾ ಮಲಿಕ್ ಮತ್ತು ಪಾಯಲ್ ಮಲಿಕ್ ಎಂಟ್ರಿ ಕೊಟ್ಟಿದ್ದರು. ಈ ಮೂಲಕ ಈ ಬಾರೀ ಸಾಮಾಜಿಕ ಜಾಲತಾಣದಲ್ಲಿ ಈ ಮೂವರ ಬಗ್ಗೆ ಚರ್ಚೆ ಜೋರಾಗಿತ್ತು. ಬಳಿಕ ಮೂವರ ಬಳಿಕ ಇದೀಗ ಬಿಗ್​ಬಾಸ್ ಮನೆಯಿಂದ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್ ಮಲಿಕ್ ಆಚೆ ಬಂದಿದ್ದಾರೆ.

ಇನ್ನು, ಅನಿಲ್ ಕಪೂರ್ ಅವರು ಅರ್ಮಾನ್ ಮಲಿಕ್ ಅವರ ಮೊದಲ ಪತ್ನಿ ಹೆಸರು ಹೇಳುತ್ತಿದ್ದಂತೆ ಪಾಯಲ್ ಮಲಿಕ್ ಬೇಸರಗೊಂಡು ಎಲ್ಲಿರೂ ಬಾಯ್​ ಅಂತ ಹೇಳಿದ್ದಾರೆ. ಆದರೆ ಪಾಯಲ್ ಮಲಿಕ್ ಅವರ ಪತಿ ಅರ್ಮಾನ್ ಮಲಿಕ್ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಯಲ್​ಗಾಗಿ ಮುಖ್ಯ ದ್ವಾರದಿಂದ ಹೋಗುತ್ತಿದ್ದಂತೆ ಅರ್ಮಾನ್ ನಗುತ್ತಾ ಪರವಾಗಿಲ್ಲ ಎಂದು ಹೇಳಿದ್ದಾರೆ. ಇನ್ನು, ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ನನಗೆ ಒಂದು ವಾರ ಬಿಗ್​ಬಾಸ್​ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಹಾಗೂ ನಾನು ನೀವು ಹಾಕಿದ ವೋಟಿಂಗ್​ನಿಂದ ಆಚೆ ಬಂದಿಲ್ಲ. ಬದಲಾಗಿ ಬಿಗ್​ಬಾಸ್​ ಮನೆಯಲ್ಲಿ ಇರುವ ಸಹ ಸ್ಪರ್ಧಿಗಳು ನನಗೆ ನಾಮಿನೇಟ್ ಮಾಡಿದ್ದರಿಂದ ಆಚೆ ಬಂದಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

View this post on Instagram

A post shared by Payal Malik (@payal_malik_53)

ಯೂಟ್ಯೂಬರ್ ಅರ್ಮಾನ್ ಮಲಿಕ್, ಅವರ ನಿಜವಾದ ಹೆಸರು ಸಂದೀಪ್ ಸಿಂಗ್. ಅರ್ಮಾನ್ ಮಲಿಕ್ ಅವರು ಯೂಟ್ಯೂಬ್​ನಲ್ಲಿ 7.67M ಫಾಲೋವರ್ಸ್​ ಅನ್ನು ಹೊಂದಿದ್ದಾರೆ. ಈ ಅರ್ಮಾನ್​ ಮಲಿಕ್​ ಕೇವಲ ಎರಡೂವರೆ ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು, ಅವರಿಗೆ ಚಿರಾಯು ಮಲಿಕ್ ಎಂಬ ಮಗು ಇದೆ. ಇದಾದ ಬಳಿಕ 2018ರಲ್ಲಿ ಅರ್ಮಾನ್ ಮಲಿಕ್ ಪತ್ನಿ ಪಾಯಲ್ ಅವರ ಆತ್ಮೀಯ ಸ್ನೇಹಿತೆ ಕೃತಿಕಾ ಮಲಿಕ್ ಮದುವೆಯಾದರು. ಮೊದ ಮೊದಲು ಪಾಯಲ್ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಪಾಯಲ್ ಅರ್ಮಾನ್‌ನೊಂದಿಗೆ ರಾಜಿ ಮಾಡಿಕೊಂಡರು ಮತ್ತು ಕೃತಿಕಾ ಅವರನ್ನು ಕುಟುಂಬಕ್ಕೆ ವೆಲ್​ಕಮ್​ ಮಾಡಿ ಸುಖ ಸಂಸಾರ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್

https://newsfirstlive.com/wp-content/uploads/2024/07/bigg-boss.jpg

Load More