/newsfirstlive-kannada/media/post_attachments/wp-content/uploads/2024/07/arman-malik.jpg)
ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಈ ಸಲ ಭಾರೀ ಸದ್ದು ಮಾಡುತ್ತಿದೆ. ಈ ಬಾರಿಯ ಬಿಗ್​ಬಾಸ್​ ರಿಯಾಲಿಟಿ ಶೋಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಕೃತಿಕಾ ಮತ್ತು ಪಾಯಲ್ ಜೊತೆ ಎಂಟ್ರಿ ಕೊಟ್ಟಿದ್ದರು.
/newsfirstlive-kannada/media/post_attachments/wp-content/uploads/2024/06/bigg-boss-hinddi.jpg)
ಬಿಗ್​ಬಾಸ್​ಗೂ ಬರುವ ಮುನ್ನ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದ ಅರ್ಮಾನ್ ಮಲಿಕ್ ದಂಪತಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಕಳೆದ ವಾರವಷ್ಟೇ ಬಿಗ್​ಬಾಸ್​​​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಹೈಡ್ರಾಮ ನಡೆದಿತ್ತು, ಸಹ ಕಂಟೆಸ್ಟಂಟ್ ಆಗಿರೋ ವಿಶಾಲ್​​​ಗೆ ಅರ್ಮಾನ್ ಮಲಿಕ್ ಕಪಾಳಮೋಕ್ಷ ಮಾಡಿ ಸಖತ್​ ಹಲ್​ಚಲ್​ ಸೃಷ್ಟಿಸಿದ್ದರು. ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್​ ತನ್ನಿಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜತೆ ಬಿಗ್​ಬಾಸ್ ಒಟಿಟಿ ಸೀಸನ್ 3ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಂದ ಮೊದಲ ವಾರಕ್ಕೆ ಪತ್ನಿ ಪಾಯಲ್​ ಮಲಿಕ್​ ಶೋನಿಂದ ಎಲಿಮಿನೇಟ್ ಆಗಿದ್ದರು. ಸದ್ಯ ಅರ್ಮಾನ್ ಮಲಿಕ್ ಜೊತೆಗೆ ಕೃತಿಕಾ ಮಲಿಕ್​ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ.
Maine to kuch nahi dekha ?????#LuvKataria#ElvishYadav#BiggBossOTT3#KritikaMalik#VishalPandey#SanaMakbul#ShivaniKumari#NaezyTheBaa#SanaSultan#ArmaanMalikpic.twitter.com/2sspyXjKXm
— Priya Vatsh (@Priyankavatsh)
Maine to kuch nahi dekha 🫣🫣🫣🤭🤭#LuvKataria#ElvishYadav#BiggBossOTT3#KritikaMalik#VishalPandey#SanaMakbul#ShivaniKumari#NaezyTheBaa#SanaSultan#ArmaanMalikpic.twitter.com/2sspyXjKXm
— Priya Vatsh (@Priyankavatsh) July 13, 2024
">July 13, 2024
ಆದರೆ ಇದರ ಮಧ್ಯೆ ಬಿಗ್​ಬಾಸ್​ ಕ್ಯಾಮೆರಾ ಕಣ್ಣಿಗೆ ವಿಡಿಯೋವೊಂದು ಸೆರೆ ಸಿಕ್ಕಿದೆ. ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್​ ಇಬ್ಬರು ಬೆಡ್​ ಮೇಲೆ ರೊಮ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ವಿಡಿಯೋ ನೋಡಿದ ವೀಕ್ಷಕರು ದಂಪತಿ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಕಳೆದ ರಾತ್ರಿಯ ಸಂಚಿಕೆಯಲ್ಲಿ ಲೈಟ್ಸ್​ ಆಫ್ ಮಾಡಿದ ಬಳಿಕ ಕಂಡು ಬಂದಿದೆ. ಇದೀಗ ಬಿಗ್​ಬಾಸ್​ ಶೋ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us