ಸೇನಾ ನೇಮಕಾತಿ ಶಿಬಿರ; 340 ಹುದ್ದೆಗಳಿಗೆ 20 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು.. ಲಾಠಿ ಚಾರ್ಜ್!

author-image
Bheemappa
Updated On
ಸೇನಾ ನೇಮಕಾತಿ ಶಿಬಿರ; 340 ಹುದ್ದೆಗಳಿಗೆ 20 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು.. ಲಾಠಿ ಚಾರ್ಜ್!
Advertisment
  • ಉದ್ಯೋಗ ಅಭಿಯಾನಕ್ಕೆ ಭಾರೀ ಸಂಖ್ಯೆಯಲ್ಲಿ ಯುವಕರು ಭಾಗಿ
  • ಬೃಹತ್ ಸಂಖ್ಯೆಯಲ್ಲಿ ಸೇರಿರುವ ಅಭ್ಯರ್ಥಿಗಳ ವಿಡಿಯೋ ವೈರಲ್
  • ದಟ್ಟಣೆ ನಿಂತ್ರಣ ಮಾಡಲು ಲಾಠಿ ಚಾರ್ಜ್ ನಡೆಸಿದ ಪೊಲೀಸರು

ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢನಲ್ಲಿ ಪ್ರಾದೇಶಿಕ ಸೇನಾ ನೇಮಕಾತಿ ಅಭಿಯಾನಕ್ಕೆ ಬೃಹತ್ ಸಂಖ್ಯೆಯಲ್ಲಿ ವಿವಿಧ ರಾಜ್ಯಗಳ ಆಕಾಂಕ್ಷಿಗಳು ಭಾಗವಹಿಸಿದ್ದು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಟೆರಿಟೋರಿಯಲ್ ಆರ್ಮಿ ಅಧಿಕಾರಿಗಳು ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಭಿಯಾನ ಕರೆದಿತ್ತು. ಮೂಲಗಳ ಪ್ರಕಾರ ಕೇವಲ 340 ಹುದ್ದೆಗಳಿಗೆ ಈ ಸೇನಾ ಅಭಿಮಾಯ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ವಿವಿಧ ರಾಜ್ಯಳಿಂದ ಬೃಹತ್ ಸಂಖ್ಯೆಯಲ್ಲಿ ಯುವಕರು ಇದರಲ್ಲಿ ಭಾಗವಹಿಸಲು ಬಂದಿದ್ದರಿಂದ ಸ್ಥಳದಲ್ಲಿ ದಟ್ಟಣೆ ಉಂಟಾಗಿದೆ. ಇದರಿಂದ ನೂಕುನುಗ್ಗಲು ಕೂಡ ಉಂಟಾಗಿದೆ. ಇದನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಿಂದ ಹಲವಾರು ಯುವಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:SAAD ಮುಖ್ಯ ಪರೀಕ್ಷೆಗೆ ಅಧಿಸೂಚನೆ ರಿಲೀಸ್.. ಈ ಉದ್ಯೋಗಗಳಿಗೆ ಯಾರು ಅಪ್ಲೇ ಮಾಡಬಹುದು?

ಮಾಹಿತಿ ಪ್ರಕಾರ ಕೇವಲ 340 ಉದ್ಯೋಗಗಳಿಗಾಗಿ 20 ಸಾವಿರಕ್ಕೂ ಅಧಿಕ ಯುವಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಶಿಬಿರ ನಡೆಯುವುದಕ್ಕೂ ಒಂದು ದಿನ ಮೊದಲೇ ಆಗಮಿಸಿದ್ದ ಆಕಾಂಕ್ಷಿಗಳು ಉಳಿಯಲು ವಸತಿ, ಸ್ಥಳವಿಲ್ಲದೇ ರಸ್ತೆ ಪಕ್ಕದಲ್ಲೇ ರಾತ್ರಿ ಕಳೆದಿದ್ದರು. ಅಲ್ಲದೇ ತಿನ್ನಲು ಕೂಡ ಅಲ್ಲಿ ಆಹಾರ ದೊರೆತಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.


">November 20, 2024

ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಬಿಹಾರ್​ನಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ಅದರಂತೆ ಈಗ ಉತ್ತರಾಖಂಡ್​ನ ಪಿಥೋರಗಢನಲ್ಲಿ ಅಭಿಯಾನ ನಡೆಸಲಾಗುತ್ತಿತ್ತು. ಆದರೆ ಇದಕ್ಕೆ ಬೇರೆ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಯುವಕರು ಆಗಮಿಸಿದ್ದರಿಂದ ಸ್ಥಳದಲ್ಲಿ ಗೊಂದಲ ಏರ್ಪಟ್ಟಿದೆ. ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿರುವ ವಿಡಿಯೋ ಸದ್ಯ ಫುಲ್ ವೈರಲ್ ಆಗಿದೆ. ಇಷ್ಟೊಂದು ಯುವಕರು ನಿರುದ್ಯೋಗಿಗಳಾ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment