/newsfirstlive-kannada/media/post_attachments/wp-content/uploads/2025/05/NF_KASHMIRA_1.jpg)
ನಿನ್ನೆ ಪುಲ್ವಾಮಾದ ಟ್ರಾಲ್ನಲ್ಲಿ ಭಾರತೀಯ ಸೇನೆ ಮೂವರು ಉಗ್ರರ ಬೇಟೆಯಾಡಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಸಂಹಾರ ಆಗಿದೆ. ಸೇನೆಯ ಕಾರ್ಯಾಚರಣೆ ರಣರೋಚಕ ಆಗಿತ್ತು. ಉಳಿದ ಉಗ್ರರ ಬೇಟೆಗೆ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.
11 ಗಂಟೆ.. ಉಗ್ರರು ಫಿನೀಶ್..
ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಕೆಲ್ಲರ್ ಆಪರೇಷನ್ ಮೂಲಕ ಕಿಲ್ಲಿಂಗ್ ಕಾರ್ಯ ಮುಂದುವರಿಸಿದೆ. ನಿನ್ನೆ ಜೈಷ್-ಎ-ಮೊಹ್ಮದ್ನ ಮೂವರು ಉಗ್ರರನ್ನು ರಣರೋಚಕ ರೀತಿಯಲ್ಲಿ ಶಿಕಾರಿ ಮಾಡಿದೆ. ಉಗ್ರ ಕೃತ್ಯವನ್ನು ಬೆಂಬಲಿಸುತ್ತಾ ದೇಶದ್ರೋಹಿಗಳಾಗಿರುವವರನ್ನು ಹೆಡೆಮುರಿ ಕಟ್ಟುತ್ತಿದೆ. ನಿನ್ನೆ ಪುಲ್ವಾಮಾದ ಟ್ರಾಲ್ನ ನಾದಿರ್ ಗ್ರಾಮದ ಮನೆಯೊಂದರಲ್ಲಿ ಮೂವರು ಅಡಗಿ ಕುಳಿತಿದ್ದ ಗುಪ್ತಚರ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತುವರಿದಿದ್ದ ಸೇನೆ ಸುಮಾರು 11 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಅಸುರರನ್ನು ಹೊಸಕಿ ಹಾಕಿದೆ.
‘ಆಪರೇಷನ್ ಕೆಲ್ಲರ್’!
ನಾದಿರ್ ಗ್ರಾಮ ಸುತ್ತುವರಿದಿದ್ದ CRPF ಬೆಟಾಲಿಯನ್ನ 110 ಪಡೆ ಮೊದಲಿಗೆ 200ಕ್ಕೂ ಹೆಚ್ಚು ಯೋಧರ ತಂಡ ಗ್ರಾಮವನ್ನ ಸುತ್ತುವರಿದಿತ್ತು. ನಂತರ ನಾದಿರ್ಗೆ ಎಂಟ್ರಿ ಕೊಟ್ಟಿದ್ದ ರಾಷ್ಟ್ರೀಯ ರೈಫಲ್ಸ್ನ ಸೈನಿಕರು ಸೇರಿ 250ಕ್ಕೂ ಹೆಚ್ಚು ಸೈನಿಕರು ಫ್ರಂಟ್ಲೈನ್ನಲ್ಲಿ ನಿಂತು ಕಾರ್ಯಾಚರಣೆ ನಡೆಸಿದ್ದರು. ರಾಷ್ಟ್ರೀಯ ರೈಫಲ್ಸ್ಗೆ ಜಮ್ಮುಕಾಶ್ಮೀರ್ ಸ್ಪೆಷಲ್ ಆಪರೇಷನ್ ಗ್ರೂಪ್ ಸಾಥ್ ನೀಡಿತ್ತು. ಸ್ಪೆಷಲ್ ಆಪರೇಷನ್ ಗ್ರೂಪ್ನಲ್ಲಿ 2,300 ಸ್ಪೆಷಲ್ ಟ್ರೇನ್ಡ್ ಪೊಲೀಸರಿದ್ದು 1 ಲಕ್ಷ ಪೊಲೀಸರ ನಡುವೆ ಈ 2,300 ಮಂದಿಯನ್ನ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಬೆಳ್ಳಿ ಬಳೆಗಳಿಗಾಗಿ ತಾಯಿಯ ಚಿತೆ ಮೇಲೆ ಮಲಗಿದ ಮಗ.. ದುಃಖದ ಮಡುವಿನಲ್ಲಿ ಸುಪುತ್ರನ ವಿಲಕ್ಷಣ ವರ್ತನೆ..
ಹಿಟ್ಲಿಸ್ಟ್ನಲ್ಲಿ 14 ಉಗ್ರರ ಪೈಕಜಿ 6 ಉಗ್ರರನ್ನು ಸೇನೆ ಫಿನಿಶ್ ಮಾಡಿದೆ. ಉಳಿದ 8 ಉಗ್ರರಿಗಾಗಿ ಆಪರೇಷನ್ ಮುಂದುವರಿಸಿದೆ. ಉಳಿದ 8 ಉಗ್ರರದ್ದು ಡೆಡ್ಲಿ ಹಿಸ್ಟರಿಯಾಗಿದ್ದು ಸೇನೆ 8 ಉಗ್ರರಿಗಾಗಿ ತಲಾಷ್ ಮುಂದುವರಿಸಿದೆ
6 ಉಗ್ರರು ಫಿನೀಶ್.. 8 ಬಾಕಿ!
1.ಆದಿಲ್ ರೆಹಮಾನ್ ಡೆಂಟು, LET ಕಮಾಂಡರ್
2. ಈಶನ್ ಅಹ್ಮದ್ ಶೇಖ್, ಎಲ್ಇಟಿ ಉಗ್ರ
3. ಹ್ಯಾರಿಸ್ ನಜೀರ್, ಎಲ್ಇಟಿ ಉಗ್ರ
4. ನಾಸೀರ್ ಅಹ್ಮದ್ ವಾನಿ, ಎಲ್ಇಟಿ ಉಗ್ರ
5. ಅಮೀರ್ ಅಹ್ಮದ್ ಧರ್, ಎಲ್ಇಟಿ ಉಗ್ರ
6. ಜುಬೈರ್ ಅಹ್ಮದ್ ವಾನಿ, ಹಿಜ್ಬುಲ್ ಕಮಾಂಡರ್
7. ಹರೂನ್ ರಶೀದ್ ಘನಿ , ಹಿಜ್ಬುಲ್ ಅದಸ್ಯ
8. ಜಾಕೀರ್ ಅಹ್ಮದ್ ಘನಿ, ಎಲ್ಇಟಿ, TRF ನಂಟು
ಭಾರತೀಯ ಸೇನೆ ಆಪರೇಷ್ ಕೆಲ್ಲರ್ ಬಗ್ಗೆ ಸೇನಾಧಿಕಾರಿ ಧನಂಜಯ ಜೋಷಿ ಪ್ರತಿಕ್ರಿಯಿಸಿದ್ದು ಎರಡು ಆಪರೇಷನ್ಗಳಲ್ಲಿ 6 ಉಗ್ರರನ್ನ ಹೊಡೆದುರುಳಿಸಿದ್ದೇವೆ, ಕಾಶ್ಮೀರದಲ್ಲಿ ಭಯೋತ್ಪಾದಕರ ಷಡ್ಯಂತ್ರ ವಿಫಲವಾಗಿದೆ ಎಂದಿದ್ದಾರೆ.
ಮೇ 18ರವರೆಗೆ ಕದನ ವಿರಾಮ ವಿಸ್ತರಣೆ!
ಭಾರತ-ಪಾಕಿಸ್ತಾನ ನಡುವೆ ಮೇ 18ರವರೆಗೆ ಕದನ ವಿರಾಮ ವಿಸ್ತರಣೆ ಆಗಿದೆ. ಎರಡೂ ದೇಶಗಳ ಡಿಜಿಎಂಓಗಳ ಸಭೆಯಲ್ಲಿ ನಿರ್ಧಾರ ಆಗಿದೆ. ಈ ನಡುವೆ ಕಣಿವೆನಾಡು ಶಾಂತಗೊಂಡಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನದ ದಾಳಿಯಿಂದ ಹಲವು ಡ್ಯಾಮೇಜ್, ಕೆಲವು ದಿನಗಳ ಹಿಂದೆ ದಾಳಿ ನಡೆದಿದ್ದು, ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಇದೀಗ ತಮ್ಮ ತಮ್ಮ ಮನೆಗಳಿಗೆ ನಿವಾಸಿಗಳು ವಾಪಸ್ ಆಗ್ತಿದ್ದಾರೆ.
ಒಟ್ಟಾರೆ ಭಾರತೀಯ ಸೇನೆ ಜಮ್ಮುಕಾಶ್ಮೀರದಲ್ಲಿರುವ ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತಿದೆ. ಸೇನೆಯಿಂದ ಆಪರೇಷನ್ನಿಂದ ಸದ್ಯ 8 ಮಂದಿ ಉಗ್ರರಿಗೆ ಶಾಕ್ ಶುರುವಾಗಿದೆ. ಅನಂತ್ನಾಗ್, ಕುಲ್ಗಾಮ್, ಪುಲ್ವಾಮಾ, ಶೋಪಿಯಾನ್ ಜಿಲ್ಲೆಗಳೇ ಉಗ್ರರ ನೆಲೆಗಳಾಗಿವೆ. ಈ ಜಿಲ್ಲೆಗಳು ಕಣಿವೆ ಭಾಗದ ಜಿಲ್ಲೆಗಳಾಗಿವೆ. ಇಲ್ಲಿ ಉಗ್ರ ಚಟುವಟಿಕೆಗೆ ಹೇಳಿ ಮಾಡಿಸಿದ ಭೌಗೋಳಿಕ ಪ್ರದೇಶವಿದೆ. ಹಾಗಾಗಿ ಈ ಭಾಗವನ್ನೇ ಉಗ್ರರು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸೇನೆ ಉಗ್ರರ ಚಳಿ ಬಿಡಿಸುತ್ತಿದೆ.
ಇದನ್ನೂ ಓದಿ: ಕೆಕೆಆರ್ ವಿರುದ್ಧ ನಾಳೆ ಬಲಿಷ್ಠ ಟೀಂ ಕಣಕ್ಕೆ.. ಆರ್ಸಿಬಿ ತಂಡದಲ್ಲಿ ಯಾರೆಲ್ಲ ಇರ್ತಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ