/newsfirstlive-kannada/media/post_attachments/wp-content/uploads/2025/05/operation-sindoor20.jpg)
ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ ಸಿಂಧೂರ್ ನಡೆಸುತ್ತಿದೆ. ಪಾಕಿಸ್ತಾನ ಡ್ರೋಣ್ ದಾಳಿಗೆ ಯತ್ನಿಸಿದ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕರು ಇರುವ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಹೊಸ ವಿಡಿಯೋವನ್ನು ಹಂಚಿಕೊಂಡಿದೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
ಮೇ 08 ಮತ್ತು 09ರ ರಾತ್ರಿ, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಜಮ್ಮು, ಪಠಾಣ್‌ಕೋಟ್, ಜೈಸಲ್ಮೇರ್ ಸೇರಿದಂತೆ ಹಲವಾರು ಪ್ರದೇಶಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಭಾರತದ S-400 ರಕ್ಷಣಾ ವ್ಯವಸ್ಥೆಯಿಂದ ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿದೆ.
ಆಪರೇಷನ್ ಸಿಂಧೂರ್ನಿಂದ ಕಂಗೆಟ್ಟಿರುವ ಪಾಕಿಸ್ತಾನ, ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಲು ಪ್ರಯತ್ನಿಸಿದೆ. ಆದರೆ ಭಾರತೀಯ ಪಡೆಗಳು ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಿವೆ. ಗುರುವಾರ ರಾತ್ರಿ 8 ರಿಂದ 10 ಗಂಟೆಯ ನಡುವೆ ಪಾಕಿಸ್ತಾನವು ಯುದ್ಧ ವಿಮಾನಗಳು, ಡ್ರೋನ್‌ಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ಜಮ್ಮು, ಪಠಾಣ್‌ಕೋಟ್, ಫಿರೋಜ್‌ಪುರ, ಕಪುರ್ತಲಾ, ಜಲಂಧರ್ ಮತ್ತು ಜೈಸಲ್ಮೇರ್‌ಗಳಲ್ಲಿನ ಸೇನಾ ನೆಲೆಗಳು ಮತ್ತು ಶಸ್ತ್ರಾಸ್ತ್ರ ಕೇಂದ್ರಗಳ ಮೇಲೆ ದಾಳಿಗೆ ಯತ್ನಿಸಿತ್ತು. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿ, ಅದರ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿದೆ.
OPERATION SINDOOR
Indian Army Pulverizes Terrorist Launchpads
As a response to Pakistan's misadventures of attempted drone strikes on the night of 08 and 09 May 2025 in multiple cities of Jammu & Kashmir and Punjab, the #Indian Army conducted a coordinated fire assault on… pic.twitter.com/2i5xa3K7uk
— ADG PI - INDIAN ARMY (@adgpi)
OPERATION SINDOOR
Indian Army Pulverizes Terrorist Launchpads
As a response to Pakistan's misadventures of attempted drone strikes on the night of 08 and 09 May 2025 in multiple cities of Jammu & Kashmir and Punjab, the #Indian Army conducted a coordinated fire assault on… pic.twitter.com/2i5xa3K7uk— ADG PI - INDIAN ARMY (@adgpi) May 10, 2025
">May 10, 2025
ಜಮ್ಮು-ಕಾಶ್ಮೀರ ಮತ್ತು ಪಂಜಾಬ್‌ನ ಹಲವು ನಗರಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದಕ್ಕೆ ಪ್ರತಿಯಾಗಿ, ಮೇ 8 ಮತ್ತು ಮೇ 9ರ ಮಧ್ಯರಾತ್ರಿಯಲ್ಲಿ ಭಾರತೀಯ ಸೇನೆಯು ನಿಯಂತ್ರಣ ರೇಖೆಯ ಬಳಿಯ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಪುಡಿಪುಡಿ ಮಾಡಿದೆ ಎಂದು ಸೇನೆ ತಿಳಿಸಿದೆ.
ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಉಡಾವಣಾ ನೆಲೆಗಳು, ಹಿಂದೆ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಹಾಗೂ ಕಾರ್ಯಗತಗೊಳಿಸುವ ಕೇಂದ್ರವಾಗಿತ್ತು. ಇನ್ನೂ ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್ ಲಾಂಚ್‌ಪ್ಯಾಡನ್ನೇ ಉಡೀಸ್ ಮಾಡಿದೆ ಎಂದು ಫೋಟೋ ಮತ್ತು ವಿಡಿಯೋ ಸಮೇತ ವಿವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ