newsfirstkannada.com

ಚೀನಾಕ್ಕೆ ಮತ್ತೊಂದು ಟಕ್ಕರ್​.. 1962ರಲ್ಲಿ ಖಾಲಿಯಾಗಿದ್ದ ಗ್ರಾಮಗಳಿಗೆ ಹೊಸ ಚೈತನ್ಯ ನೀಡಲು ಮೆಗಾ ಪ್ಲಾನ್..!

Share :

Published February 12, 2024 at 10:38am

    LACಯಲ್ಲಿ ಮತ್ತೆ ‘ರೋಮಾಂಚಕ ಹಳ್ಳಿ’ಗಳ ವಸಾಹತು!

    ‘ಆಪರೇಷನ್ ಸದ್ಭಾವನಾ’ ಪ್ರಾಜೆಕ್ಟ್ ಅಡಿಯಲ್ಲಿ ಅದ್ಭುತ

    ‘ಹುಟ್ಟಿದ ಊರಿಗೆ ಮತ್ತೆ ಮರಳುವ ಆಸೆ ಚಿಗುರಿಸಿದ ಸೇನೆ

ಚೀನಾ ಗಡಿ ಭಾಗದಲ್ಲಿರುವ ಉತ್ತರಾಖಂಡ್​ನ ಗ್ರಾಮಗಳ ಪುನರ್ವಸತಿಗೆ ಸಿದ್ಧರಾಗುವಂತೆ ಚೀಫ್ ಆಫ್ ಡಿಫೆನ್ಸ್​ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಸೇನಾ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಸೇನಾ ಮುಖ್ಯಸ್ಥರ ಈ ಸೂಚನೆ ಬೆನ್ನಲ್ಲೇ 1962ರ ಯುದ್ಧದಿಂದ ಖಾಲಿಯಾಗಿದ್ದ ಗ್ರಾಮಗಳಲ್ಲಿ ಹೊಸ ಚೈತನ್ಯ ಕಳೆಗಟ್ಟುವ ಭರವಸೆ ಮೂಡಿದೆ. ಇದರ ಹಿಂದೆ ಭಾರತ ಸರ್ಕಾರದ ಮಾಸ್ಟರ್ ಪ್ಲಾನ್ ಕೂಡ ಇದೆ.

LACಯಲ್ಲಿ ರೋಮಾಂಚನಾಕರಿ ಹಳ್ಳಿ ನಿರ್ಮಾಣ..!
ಚೀನಾ ಗಡಿಗೆ ಹೊಂದಿಕೊಂಡಿರುವ ಅಂದರೆ ಎಲ್​ಎಸಿ (Line of Actual Control) ಉದ್ದಕ್ಕೂ ಇರುವ ಗ್ರಾಮಗಳನ್ನು ಪುನರ್ವಸತಿ ಮಾಡಬೇಕು. ಅದರಲ್ಲೂ ನಮ್ಮ ಆದ್ಯತೆ ಚೀನಾ ಗಡಿಗೆ ಸಮೀಪ ಇರುವ ನೆಲಂಗ್ ಮತ್ತು ಜದುಂಗ್ ಗ್ರಾಮಗಳೇ ಆಗಿರಬೇಕು ಎಂದು ಸಿಬ್ಬಂದಿಗೆ ಚೀಫ್ ಆಫ್ ಡಿಫೆನ್ಸ್ ತಿಳಿಸಿದ್ದಾರೆ.

1962ರ ಯುದ್ಧದ ಸಮಯದಲ್ಲಿ ಈ ಹಳ್ಳಿಗಳಲ್ಲಿದ್ದ ಜನರನ್ನು ಉತ್ತರಕಾಶಿ ಮತ್ತು ಹತ್ತಿರದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಚೀನಾ ಗಡಿಯುದ್ದಕ್ಕೂ ‘ವೈಬ್ರಂಟ್ ಹಳ್ಳಿ’ (vibrant village)ಗಳನ್ನು ನಿರ್ಮಿಸುವ ಉದ್ದೇಶ ಭಾರತ ಸರ್ಕಾರದ್ದಾಗಿದೆ. ಅಂತೆಯೇ ‘ಆಪರೇಷನ್ ಸದ್ಭಾವನಾ’ ಪ್ರಾಜೆಕ್ಟ್ ಅಡಿಯಲ್ಲಿ ಭಾರತೀಯ ಸೇನೆಯು ಗಡಿ ಪ್ರದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿದೆ.

‘ಗಡಿಯಿಂದ ‘ಮೊದಲ ವಸಾಹತು’
ಇತ್ತೀಚೆಗೆ ಅನಿಲ್ ಚೌಹಾಣ್ ಅವರು LAC ತಪಾಸಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಈ ಹಳ್ಳಿಗಳನ್ನು ಪುನರ್ವಸತಿ ಮಾಡಲು ಸೇನೆಗೆ ಒತ್ತಾಯಿಸಿದ್ದಾರೆ. ಇದನ್ನು ಗಡಿಯಿಂದ ‘ಮೊದಲ ವಸಾಹತು’ ಎಂದು ಪರಿಗಣಿಸಲಾಗಿದೆ. ವರದಿಗಳ ಪ್ರಕಾರ ITBP ಸಿಬ್ಬಂದಿ, ಸಿವಿಲ್ ಆಫೀಸರ್ಸ್ ಹಾಗೂ ಸೇನಾ ಸಿಬ್ಬಂದಿಯ ಸಹಾಯದ ಮೂಲಕ ಅಲ್ಲಿದ್ದ ಮೂಲ ನಿವಾಸಿಗಳು ಗ್ರಾಮಕ್ಕೆ ಮರಳಲು ಅನುಕೂಲ ಮಾಡಿಕೊಡುತ್ತಿದೆ.

ಇಲ್ಲೊಂದು ಸಮಸ್ಯೆ ಇದೆ
ಆದಾಗ್ಯೂ ಒಂದು ಸಮಸ್ಯೆ ಎದುರಾಗಿದೆ. 1962ರಲ್ಲಿ ಇಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡ 60 ವರ್ಷಗಳಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ಅಲ್ಲಿಗೆ ಸ್ಥಾಳಂತಗೊಳಿಸಿದರೆ, ಅಲ್ಲಿರುವ ಖಾಲಿ ಭೂಮಿಯ ವಾರಸುದಾರರನ್ನು ಗುರುತಿಸೋದು ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ.

ಪ್ರವಾಸೋದ್ಯಮಕ್ಕೂ ಒತ್ತು..!
ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನ ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ ಅವರ ಹಳ್ಳಿಗಳಲ್ಲಿ ಅವರ ಜೀವನೋಪಾಯವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡಲಿದೆ ಈ ಆಪರೇಷನ್ ಸದ್ಭಾವನಾ. ಹಳ್ಳಿಗಳನ್ನು ಬೆಂಬಲಿಸಲು ಸೇನೆಯು ಮೂಲಸೌಕರ್ಯಗಳನ್ನು ಹೆಚ್ಚಿಸಲಿದೆ. ಈ ಮೂಲಕ ಪ್ರವಾಸೋದ್ಯಮಕ್ಕೂ ಚಿಂತನೆ ನಡೆಸಿದೆ. ಅಂತೆಯೇ ಸ್ಥಳೀಯವಾಗಿ ದೇವಾಲಯಗಳನ್ನು ನಿರ್ಮಿಸೋದು, ಜಾಡ್ ಹಬ್ಬವನ್ನು ಉತ್ತೇಜಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾಕ್ಕೆ ಮತ್ತೊಂದು ಟಕ್ಕರ್​.. 1962ರಲ್ಲಿ ಖಾಲಿಯಾಗಿದ್ದ ಗ್ರಾಮಗಳಿಗೆ ಹೊಸ ಚೈತನ್ಯ ನೀಡಲು ಮೆಗಾ ಪ್ಲಾನ್..!

https://newsfirstlive.com/wp-content/uploads/2024/02/LAC.jpg

Load More