/newsfirstlive-kannada/media/post_attachments/wp-content/uploads/2025/01/Army_Vehicle.jpg)
ಶ್ರೀನಗರ: ಕಳೆದ ವಾರವಷ್ಟೇ ಭಾರತೀಯ ಸೇನಾ ವಾಹನ ಕಂದಕಕ್ಕೆ ಉರುಳಿ ಕರ್ನಾಟಕದ ನಾಲ್ವರು ಯೋಧರು ಸೇರಿ ಐವರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಸೇನಾ ವಾಹನ 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಮತ್ತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಾದರ್‌ಕೋಟೆ ಪಯೀನ್ ಪ್ರದೇಶದಲ್ಲಿ ಸೇನಾ ವಾಹನ ರಸ್ತೆಯಿಂದ ಸ್ಕಿಡ್ ಆಗಿ 500 ಮೀಟರ್ ಆಳದ ಕಮರಿಗೆ ಬಿದ್ದಿದೆ. ಇರದ ಪರಿಣಾಮ ನಾಲ್ವರು ಯೋಧರು ಜೀವ ಕಳೆದುಕೊಂಡಿದ್ದು ಇನ್ನಿಬ್ಬರು ಗಂಭೀರವಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಬಂಡಿಪೋರಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಇದರಲ್ಲಿ ಇಬ್ಬರು ಯೋಧರ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಮತ್ತೆ ಪ್ರಸಿದ್ಧ್ ಕೃಷ್ಣ ಕಮಾಲ್; ಟೀಮ್ ಇಂಡಿಯಾ ಗೆಲುವಿಗೆ ಬೇಕಾಗಿದೆ ಕನ್ನಡಿಗನ ಅಭಯ
ಗಡಿ ಕಾಯುವ ಕಾರ್ಯದ ನಿಮಿತ್ತ 6 ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎತ್ತರದ ಪ್ರದೇಶದಲ್ಲಿ ಸೇನಾ ವಾಹನದಲ್ಲಿ ಪ್ರಯಾಣಿಸುವಾಗ ರಸ್ತೆಯಲ್ಲಿ ಸ್ಕಿಡ್ ಆಗಿದೆ. ಇದರಿಂದ ವಾಹನ 500 ಮೀಟರ್ ಆಳದಷ್ಟು ಕಳೆಗೆ ಬಿದ್ದಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಅಪಘಾತಕ್ಕೆ ಮೂಲ ಕಾರಣ ಅಲ್ಲಿನ ಹವಾಮಾನ ಎಂದು ಹೇಳಲಾಗುತ್ತಿದೆ. ಹೆಚ್ಚಾಗಿ ಮಂಜು ಬೀಳುತ್ತಿರುವ ಕಾರಣ ರಸ್ತೆಯಲ್ಲಿ ಯಾವ ಕಡೆ ಪ್ರಯಾಣ ಮಾಡುತ್ತಿದ್ದೇವೆ ಎಂದು ತಿಳಿಯದೇ ಹೋದಾಗ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಹೇಳಲಾಗಿದೆ.
ವಾಹನ ಬಿದ್ದು ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗಕ್ಕೆ ನಮ್ಮ ರಾಷ್ಟ್ರವು ಎಂದೆಂದಿಗೂ ಕೃತಜ್ಞವಾಗಿರುತ್ತದೆ. ಅವರ ಕುಟುಂಬಗಳ ಜೊತೆ ನಾವು ಇದ್ದೇವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ