newsfirstkannada.com

CID ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಹೆದರಿಸಿ ಹಣ ವಸೂಲಿ; ಖತರ್ನಾಕ್‌ ಕಿಲಾಡಿಗಳ ಬಂಧನ

Share :

Published April 23, 2024 at 1:52pm

    ಸಿಐಡಿ ಕ್ರೈಂ ಬ್ರ್ಯಾಂಚ್‌ನ ಅಧಿಕಾರಿಗಳು ಎಂದು ಫೀಲ್ಡಿಗಿಳಿದ ಸ್ನೇಹಿತರು

    ಮಹಿಳೆಗೆ ಹೆದರಿಸಿ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳು

    ನಕಲಿ ಸಿಐಡಿ ಪೊಲೀಸರ ಅಸಲಿ ಮುಖ ಅನಾವರಣ ಮಾಡಿದ ಪೊಲೀಸರು

ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳು ಎಂದು ಮಹಿಳೆಗೆ ಹೆದರಿಸಿ ಹಣ ವಸೂಲಿ ಮಾಡಿದ್ದ ಮೂವರು ಖತರ್ನಾಕ್‌ ಆಸಾಮಿಗಳನ್ನ ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿರುವ ಖಾಕಿ ಪಡೆ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.

ಮೂವರು ಸ್ನೇಹಿತರು ಸಿಐಡಿ ಕ್ರೈಂ ಬ್ರ್ಯಾಂಚ್‌ನ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದಾರೆ. ಚೈತನ್ಯ ನಗರದ ನಿವಾಸಿ ಯಶೋಧಾ ಮದುಗಲ್ ಎಂಬ ಮಹಿಳೆಗೆ ಹೆದರಿಸಿ ಹಣ ವಸೂಲಿ ಮಾಡಿದ್ದರು. ಮೋಸ ಹೋದ ಮಹಿಳೆ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅತಿಥಿ ಶಿಕ್ಷಕಿ ಕಿಡ್ನ್ಯಾಪ್ ಆರೋಪ; ಹುಬ್ಬಳ್ಳಿಯಲ್ಲಿ ದೂರು ದಾಖಲು

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಹಳೇ ಹುಬ್ಬಳ್ಳಿಯ ಪೊಲೀಸರು ಕೃಷ್ಣಾಪೂರ ಓಣಿಯ ನಿವಾಸಿ ಚೇತನ ಹಡಪದ (39), ಲಿಂಗಸೂರನ ಪರಶುರಾಮಗೌಡ ಪಾಟೀಲ್ (45), ಗಂಗಾವತಿಯ ಕಾರಟಗಿಯ ಮಧು ಎಮ್ (35) ಎಂಬ ಮೂವರು ನಕಲಿ ಸಿಐಡಿ ಪೊಲೀಸರ ಬಂಧಿಸಿದ್ದಾರೆ.

ನಕಲಿ ಸಿಐಡಿ ಪೊಲೀಸರ ಮುಖವಾಡವನ್ನು ಕಳಚಿ ಹಾಕಿರುವ ಹಳೇ ಹುಬ್ಬಳ್ಳಿ ಪೊಲೀಸರು, ಎರಡು ಮೊಬೈಲ್ ಹಾಗೂ ಒಂದು ಬುಲೆಟ್ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CID ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಹೆದರಿಸಿ ಹಣ ವಸೂಲಿ; ಖತರ್ನಾಕ್‌ ಕಿಲಾಡಿಗಳ ಬಂಧನ

https://newsfirstlive.com/wp-content/uploads/2024/04/Hubbali-Fake-CID.jpg

Load More