newsfirstkannada.com

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್​​

Share :

Published January 26, 2024 at 5:45pm

    ಮೊಹಮ್ಮದ್ ಗೌಸ್ ನಜೀರ್ ಶೇಖ, ಕರೆಪ್ಪ ಕೋಳಿ ಆರೋಪಿಗಳು

    ಸುಮಾರು 7 ಟನ್ ಗೋಮಾಂಸ ವಶಕ್ಕೆ ಪಡೆದ ಪೊಲೀಸರು

    ಬೆಳಗಾವಿ ಕೊಂಡಸಕೊಪ್ಪ ಗ್ರಾಮದ ಬಳಿ ಪೊಲೀಸರ ದಾಳಿ

ಬೆಳಗಾವಿ: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೊಂಡಸಕೊಪ್ಪ ಗ್ರಾಮದ ಬಳಿ ಹೋಗುತ್ತಿದ್ದ ಲಾರಿ ಮೇಲೆ ದಾಳಿ ಮಾಡಿ ಸುಮಾರು 7 ಟನ್ ಗೋಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ಗೌಸ್ ನಜೀರ್ ಶೇಖ ಹಾಗೂ ಕರೆಪ್ಪ ಕೋಳಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಲಾರಿಯೂ ಗೋಮಾಂಸವನ್ನು ಹೊತ್ತುಕೊಂಡು ಬೆಳಗಾವಿಯಿಂದ ಧಾರವಾಡಕ್ಕೆ ಹೊರಟಿತ್ತು. ಇದೇ ವೇಳೆ ಲಾರಿಯಲ್ಲಿ ಸುಮಾರು 5,60,000 ಸಾವಿರ ಬೆಲೆಯ ಗೋಮಾಂಸವನ್ನು ವಶ ಪಡೆದುಕೊಂಡಿದ್ದಾರೆ.

ಸದ್ಯ ಲಾರಿ ಸಮೇತ ಗೋಮಾಂಸ ವಶಕ್ಕೆ ಪಡೆದು ಪೊಲೀಸರಿಂದ ಸ್ವಯಂ ಪ್ರೇರಿದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಘಟನೆ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್​​

https://newsfirstlive.com/wp-content/uploads/2024/01/police-12.jpg

Load More