Advertisment

ಉಗ್ರರ ಜತೆ ಅರ್ಷದ್ ನದೀಮ್; ಚಿನ್ನದ ಪದಕ ಗೆದ್ದ ಅತ್ಲೀಟ್​​ಗೆ ಸಿಕ್ಕ ಬಹುಮಾನ ಏನು..?

author-image
Gopal Kulkarni
Updated On
ಉಗ್ರರ ಜತೆ ಅರ್ಷದ್ ನದೀಮ್; ಚಿನ್ನದ ಪದಕ ಗೆದ್ದ ಅತ್ಲೀಟ್​​ಗೆ ಸಿಕ್ಕ ಬಹುಮಾನ ಏನು..?
Advertisment
  • ಪ್ಯಾರಿಸ್​​ನಲ್ಲಿ ಚಿನ್ನದ ಬೇಟೆಯಾಡಿದ ಪಾಕ್​ ಕ್ರೀಡಾಳು ಉಗ್ರನ ಜೊತೆ ಪೋಸ್
  • UN ಮೋಸ್ಟ್ ವಾಟೆಂಡ್ ಎಂದು ಗುರುತಿಸಿದ ಭಯೋತ್ಪಕನೊಂದಿಗೆ ಅರ್ಷದ್
  • ಜಾಗತಿಕವಾಗಿ ಸದ್ದು ಮಾಡಿದ ಅರ್ಷದ್ ಮತ್ತು ಹರೀಸ್ ಧಾರ್​ ವಿಡಿಯೋ

ಇಸ್ಲಾಮಾಬಾದ್​: ಒಲಿಂಪಿಕ್ಸ್ ಅಂಗಳದಲ್ಲಿ ದಶಕಗಳ ಕಾಲ ಎದುರಾಳಿಯಾಗಿದ್ದ ನೀರಜ್ ಚೋಪ್ರಾರನ್ನೇ ಹಿಂದಿಕ್ಕಿ ಜಾವಲಿನ್​ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದ ಅರ್ಷದ್ ನದೀಮ್​, ಈಗ ಬೇರೆ ಕಾರಣಕ್ಕೆನೇ ಸುದ್ದಿಯಾಗ್ತಿದ್ದಾರೆ. ಅರ್ಷದ್ ನದೀಮ್​ನ ಒಂದು ಫೋಟೋ ಹಾಗೂ ವಿಡಿಯೋಗಳು ಈಗ ಸೋಷಿಯಲ್ ಮಿಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

Advertisment

ಭಯೋತ್ಪಾಕದನೊಂದಿಗೆ ಕಂಡ ಅರ್ಷದ್ ನದೀಮ್

ಯುನೈಟೈಡ್ ನೇಷನ್ ಪಟ್ಟಿಯಲ್ಲಿ ಮೋಸ್ಟ್ ವಾಟೆಂಡ್​ ಉಗ್ರ ಎಂದು ಗುರುತಿಸಲ್ಪಟ್ಟ ಲಷ್ಕರ್ ಇ ತೊಯ್ಬಾದ ಹರೀಸ್ ಧಾರ್ ಅನ್ನೋ ವ್ಯಕ್ತಿಯೊಂದಿಗೆ ಅರ್ಷದ್ ನದೀಮ್ ಗುರುತಿಸಿಕೊಂಡಿದ್ದಾರೆ. ಇದು ಈಗ ಜಾಗತಿಕವಾಗಿ ದೊಡ್ಡ ಚರ್ಚೆಗೆ ಕಾರಣವಾಗ್ತಿದೆ.

ಇದನ್ನೂ ಓದಿ:ಇಶಾನ್​ ಕಿಶನ್​​ಗೆ ಕ್ಯಾಪ್ಟನ್ಸಿ ಪಟ್ಟ.. ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​​​ ಸುವರ್ಣಾವಕಾಶ!

ಅರ್ಷದ್​ ನದೀಮ್ ಬಂಗಾರ ಪದಕ ಗೆದ್ದುಕೊಂಡು ಪಾಕಿಸ್ತಾನಕ್ಕೆ ಬಂದಾಗ ದೊಡ್ಡ ವಿಜಯೋತ್ಸವ ಆಚರಿಸಲಾಯ್ತು. ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಿಕೆಆರ್ ಕೂಡ ನೀಡಿ ಗೌರವಿಸಲಾಯ್ತು. 15 ಕೋಟಿ ಪಾಕಿಸ್ತಾನಿ ರೂಪಾಯಿ ನೀಡಿ ಗೌರವಿಸಲಾಯ್ತು ಇದೆಲ್ಲದರ ಮಧ್ಯೆಯೂ ಕೂಡ ಈಗ ಅವರು ಮೋಸ್ಟ್ ವಾಟೆಂಡ್ ಉಗ್ರನೊಂದಿಗೆ ಗುರುತಿಸಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ

Advertisment

ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಬಾಕರ್ ಮದುವೆ ಆಗ್ತಾರಾ? ಆತ್ಮೀಯ ಮಾತುಕತೆಯ ವಿಡಿಯೋ ವೈರಲ್!

publive-image
ಜಾವಲಿನ್ ಎಸೆದ ಪಾಯಿಂಟ್​ ನಂಬರ್​ನ ಕಾರು ಉಡುಗೊರೆ

ಅರ್ಷದ್ ನದೀಮ್​ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದುಕೊಂಡು ಪಾಕಿಸ್ತಾನಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ರೀತಿಯ ಉಡುಗೊರೆಗಳು ಹರಿದು ಬರುತ್ತಿವೆ. ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಎಂ ಆಗಿರುವ ಮರ್ಯಮ್ ನವಾಜ್ ಅರ್ಷದ್​ರನ್ನು ಭೇಟಿಯಾಗಿ, ಅವರು ಜಾವಲಿನ್ ಎಸೆದ ದೂರದ 92.97 ಮೀಟರ್ ನಂಬರ್ ಇರುವ ಕಾರನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಹೊಂಡಾ ಸಿವಕ್​ ಕಂಪನಿಯ ಕಾರು ನೀಡಿದ್ದು ಅದರ ನಂಬರ್ ಪಿಎಕೆ 92.97 ಎಂದೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment