newsfirstkannada.com

ಚಿನ್ನ ಗೆದ್ದ ನದೀಮ್​​ಗೆ ಸ್ವಂತ ಮಾವನಿಂದಲೇ ಎಮ್ಮೆ ಗಿಫ್ಟ್; ಪಾಕ್​​ನಲ್ಲಿ ಭಾರೀ ಚರ್ಚೆ.. ಅದಕ್ಕೂ ಇದೆ ಒಂದು ಕಾರಣ..!

Share :

Published August 12, 2024 at 9:02am

    ಜಾವೆಲಿನ್ ಸ್ಪರ್ಧಿ ಅರ್ಷದ್​ ನದೀಮ್​ಗೆ ಬಫೆಲೋ ಕೊಟ್ಟಿದ್ಯಾರು?

    ಅರ್ಷದ್ ನದೀಮ್​​ರನ್ನ ಹುಡುಕಿ ಬರ್ತಿವೆ ಸಾಕಷ್ಟು ಉಡುಗೊರೆಗಳು

    ಎಮ್ಮೆಯನ್ನು ಬಹುಮಾನವಾಗಿ ಕೊಟ್ಟು ಆ ವ್ಯಕ್ತಿ ಹೇಳಿರುವುದೇನು?

ಪ್ಯಾರಿಸ್​ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಗೋಲ್ಡ್​​ ಮೆಡಲ್ ಗೆಲ್ಲುವ ಮೂಲಕ ಅರ್ಷದ್​ ನದೀಮ್​ ಪಾಕಿಸ್ತಾನಕ್ಕೆ ಸ್ಟಾರ್ ಆಗಿದ್ದಾರೆ. ದೇಶವು ಸಂಭ್ರಮಾಚರಣೆಯಲ್ಲಿ ಮುಳುಗಿದ್ದು ಅರ್ಷದ್​ ನದೀಮ್​ರನ್ನ ಹುಡುಕಿಕೊಂಡು ಸಾಕಷ್ಟು ನಗದು ಬಹುಮಾನಗಳು, ಪ್ರಶಸ್ತಿಗಳು ಹಾಗೂ ಅಮೂಲ್ಯ ಉಡುಗೊರೆಗಳು ಬರುತ್ತಿವೆ. ಬೆನ್ನಲ್ಲೇ ಅರ್ಷದ್​ ನದೀಮ್​ಗೆ ಎಮ್ಮೆಯೊಂದು ಗಿಫ್ಟ್​ ಆಗಿ ಬಂದಿರುವುದು ಎಲ್ಲರನ್ನ ಆಶ್ಚರ್ಯ ಉಂಟುಮಾಡಿದೆ.

ಇದನ್ನೂ ಓದಿ: ದರ್ಶನ್​ಗಾಗಿ ಕನ್ನಡ ಇಂಡಸ್ಟ್ರಿ ಹೋಮ ಮಾಡಿಸ್ತಿದೆಯಾ..? ಅನುಮಾನಗಳಿಗೆ ಡೈರೆಕ್ಟರ್ ರಾಕ್​ಲೈನ್ ಸ್ಪಷ್ಟನೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅರ್ಷದ್ ನದೀಮ್​ ಸಾಧನೆ ಗುರುತಿಸಿ ಅಲ್ಲಿನ ಸರ್ಕಾರ, ಕ್ರೀಡಾ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸುತ್ತಿವೆ. ಅರ್ಷದ್ ನದೀಮ್​​ಗೆ ಅವರ ಮಾವನೇ ಎಮ್ಮೆಯನ್ನು ಬಹುಮಾನವಾಗಿ ಕೊಟ್ಟಿದ್ದಾರೆ. ಇದೇನು ಅವಮಾನವಲ್ಲ, ಎಮ್ಮೆಯನ್ನು ನೀಡಿರುವುದು ತಮಾಷೆಯಾಗಿ ಕಾಣಿಸಿದರೂ ಇದು ಪಾಕಿಸ್ತಾನದ ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯವಾಗಿದೆ. ಹಾಲು ಹಾಗೂ ಇತರ ಉತ್ಪನ್ನಗಳ ಆದಾಯ ಮೂಲವಾಗಿರುವ ಎಮ್ಮೆಯನ್ನ ನೀಡುವುದು ಅಲ್ಲಿನ ಪದ್ಧತಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತಾಯಿ ಜೊತೆ ಹೋಟೆಲ್​ಗೆ ಬಂದಿದ್ದ ರೌಡಿಶೀಟರ್​.. ಊಟ ಮುಗಿಸಿ ಬರ್ತಿದ್ದಂತೆ ಅಟ್ಟಾಡಿಸಿ ಕಡಿದ ಗ್ಯಾಂಗ್ 

ಈ ಬಗ್ಗೆ ಮಾತನಾಡಿದ ಅರ್ಷದ್ ನದೀಮ್ ಅವರ ಸೋದರ ಮಾವ ಮೊಹಮ್ಮದ್ ನವಾಜ್, ಇಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಗೌರವಾನ್ವಿತ, ಮೌಲ್ಯಯುತವಾಗಿದೆ. ನದೀಮ್ ಒಳ್ಳೆಯ ಹುಡುಗ. ನಮ್ಮ ಮನೆಗೆ ಬಂದರೆ ಯಾವುದಕ್ಕೂ ಹೆಸರಿಡದೇ ಮನೆಯಲ್ಲಿ ಏನಿದಿಯೋ ಅದನ್ನ ಊಟ ಮಾಡ್ತಾನೆ. ಜಾವೆಲಿನ್​ ಎಂದರೆ ತುಂಬಾ ಇಷ್ಟ, ಮನೆ, ಹೊಲದ ಬಳಿ ಅಭ್ಯಾಸ ಮಾಡುತ್ತಿದ್ದ. ಆವಾಗ ನಮ್ಮಲ್ಲಿ ಸಾಮಾನ್ಯ ಎನಿಸಿದ್ದ ನದೀಮ್​ ಈಗ ದೊಡ್ಡ ಸ್ಥಾನಕ್ಕೆ ಬೆಳೆದ. ನನಗೆ 4 ಗಂಡು ಮಕ್ಕಳು, ಮೂವರು ಹೆಣ್ಮಕ್ಕಳಿದ್ದಾರೆ. 6 ವರ್ಷಗಳ ಹಿಂದೆಯೇ ನನ್ನ ಮಗಳು ಆಯೇಷಾಳನ್ನು ನದೀಮ್​ಗೆ ಕೊಟ್ಟು ಮದುವೆ ಮಾಡುವುದಾಗಿ ನಿಶ್ಚಯ ಮಾಡಲಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಿನ್ನ ಗೆದ್ದ ನದೀಮ್​​ಗೆ ಸ್ವಂತ ಮಾವನಿಂದಲೇ ಎಮ್ಮೆ ಗಿಫ್ಟ್; ಪಾಕ್​​ನಲ್ಲಿ ಭಾರೀ ಚರ್ಚೆ.. ಅದಕ್ಕೂ ಇದೆ ಒಂದು ಕಾರಣ..!

https://newsfirstlive.com/wp-content/uploads/2024/08/Arshad_Nadeem.jpg

Load More