ಐಪಿಎಲ್​ ಮೆಗಾ ಹರಾಜು; ಬರೋಬ್ಬರಿ 18 ಕೋಟಿಗೆ ಪಂಜಾಬ್​ ಪಾಲಾದ ಅರ್ಷದೀಪ್ ಸಿಂಗ್

author-image
Ganesh Nachikethu
Updated On
Mega Auction 2025; ಭಾರತೀಯ ಆಟಗಾರರಿಗೆ ಫುಲ್ ಡಿಮ್ಯಾಂಡ್; ಯಾರು ಎಷ್ಟು ಕೋಟಿ ಪಡೆದುಕೊಂಡಿದ್ದಾರೆ?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್..​!
  • ಆರ್​ಟಿಎಂ ಮೂಲಕ ಹರ್ಷದೀಪ್​ ಖರೀದಿಸಿದ ಪಂಜಾಬ್​ ಕಿಂಗ್ಸ್​
  • ಪಂಜಾಬ್​​ ಕಿಂಗ್ಸ್​​​ ತಂಡದ ಪಾಲಾದ ಸ್ಟಾರ್​ ಬೌಲರ್​ ಹರ್ಷದೀಪ್​​

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಈಗಾಗಲೇ ಶುರುವಾಗಿದೆ. ಮೆಗಾ ಹರಾಜಿನಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​​ ಅರ್ಷದೀಪ್ ಸಿಂಗ್​​ ಪಂಜಾಬ್​​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. ಆರ್​ಟಿಎಂ ಬಳಸುವ ಮೂಲಕ ಬರೋಬ್ಬರಿ 18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಖರೀದಿ ಮಾಡಲಾಗಿದೆ.

ಹರ್ಷದೀಪ್​ ಸಿಂಗ್​​​ ಬೇಸ್​ ಪ್ರೈಸ್​​ 2 ಕೋಟಿ. ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಮೊದಲು ಅರ್ಷದೀಪ್ ಸಿಂಗ್​​ ಬಿಡ್​ ಮಾಡಿತು. ಇವರಿಗಾಗಿ ಗುಜರಾತ್​ ಟೈಟನ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​​, ಆರ್​​ಸಿಬಿ, ರಾಜಸ್ಥಾನ್​ ರಾಯಲ್ಸ್​​ ಸೇರಿದಂತೆ ಪೈಪೋಟಿಗಿಳಿದವು. ಕೊನೆಗೂ ಅರ್ಷದೀಪ್ ಸಿಂಗ್​​ ಪಂಜಾಬ್ ಪಾಲಾದ್ರು.

ಹರ್ಷ್​​ದೀಪ್​ ಸಿಂಗ್​​ ಐಪಿಎಲ್​ ಸಾಧನೆ

ಇತ್ತೀಚೆಗಷ್ಟೇ ಪಂಜಾಬ್​ ಕಿಂಗ್ಸ್​​ ತಂಡ ಅರ್ಷದೀಪ್ ಸಿಂಗ್ ಅವರನ್ನು ರಿಲೀಸ್​ ಮಾಡಿತ್ತು. ಇವರು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಬರೋಬ್ಬರಿ 65 ಪಂದ್ಯ ಆಡಿದ್ದು, ಸುಮಾರು 76 ವಿಕೆಟ್​ ಪಡೆದಿದ್ದಾರೆ. ಇವರು ವಿಕೆಟ್​ ಟೇಕರ್​​ ಮತ್ತು ಡೆತ್​ ಬೌಲರ್​​. ಈಗ ಮತ್ತೆ ಆರ್​ಟಿಎಂ ಮೂಲಕ ಖರೀದಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment