/newsfirstlive-kannada/media/post_attachments/wp-content/uploads/2025/01/Team-India-11.jpg)
ಟಿ20 ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದ ನಯಾ ಕಿಂಗ್​ ಉದಯವಾಗಿದೆ. ಬ್ಯಾಟ್ಸ್​ಮನ್​ಗಳ ಗೇಮ್​ನಲ್ಲಿ ಬೌಲರ್​​ ಆರ್ಷ್​​ದೀಪ್​ ಸಿಂಗ್​ ಕಿಂಗ್​ ಪಟ್ಟವೇರಿದ್ದಾರೆ. ಈ ಪಂಜಾಬ್​ ಪುತ್ತರ್ ಆರ್ಭಟಕ್ಕೆ ಬ್ಯಾಟ್ಸ್​ಮನ್​ಗಳು ಸೈಲೆಂಟಾಗಿ ಸೈಡ್​ಗೆ ಹೋಗ್ತಿದ್ದಾರೆ. ಪವರ್​​​ ಪ್ಲೇ, ಮಿಡಲ್​ ಓವರ್​, ಡೆತ್​ ಓವರ್​. ಯಾವುದೇ PHASE ಇರಲಿ. ಪವರ್​ಫುಲ್​ ಬೌಲಿಂಗ್​ ಮಾಡೋದ್ರಲ್ಲಿ ಈ ಪಂಜಾಬ್​ ಪುತ್ತರ್​​ ಪಂಟರ್​​​​.
ಟಿ20 ಕ್ರಿಕೆಟ್​. ಇದು ಬ್ಯಾಟ್ಸ್​ಮನ್​ಗಳ ಗೇಮ್​ ಅಂತಲೇ ಫೇಮಸ್​. ಬೌಲರ್​ಗಳ ಮೇಲೆ ನಿರ್ದಯವಾಗಿ ಸವಾರಿ ಮಾಡೋ ಬ್ಯಾಟರ್ಸ್​​, ಬೌಂಡರಿ-ಸಿಕ್ಸರ್​ ಸುರಿಮಳೆ ಸುರಿಸ್ತಾರೆ. ಅದ್ರಲ್ಲೂ ಫೀಲ್ಡ್ ರಿಸ್ಟ್ರಿಕ್ಷನ್​ ಇರೋ ಪವರ್​ ಪ್ಲೇನಲ್ಲಂತೂ ಮೈದಾನದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸ್ತಾರೆ. ಟಿ20 ಫಾರ್ಮೆಟ್​ನಲ್ಲಿ ಬ್ಯಾಟ್ಸ್​ಮನ್​ಗಳ ಆರ್ಭಟದ ಬಗ್ಗೆ ವಿವರಿಸೋದೇ ಬೇಡ ಬಿಡಿ. ಬ್ಯಾಟ್ಸ್​ಮನ್​ಗಳ ಪಾಲಿಗೆ ಸ್ವರ್ಗ ಅನಿಸಿಕೊಂಡಿರೋ ಈ ಫಾರ್ಮೆಟ್​​ನಲ್ಲಿ ಬೌಲರ್​ ಒಬ್ಬ ಕಿಂಗ್​ ಆಗಿ ಹೊರ ಹೊಮ್ಮಿದ್ದಾನೆ. ಈತನ ಬೆಂಕಿ, ಬಿರುಗಾಳಿ ದಾಳಿಗೆ ಬ್ಯಾಟ್ಸ್​ಮನ್​ಗಳು ಭಲ್ಲೇ ಭಲ್ಲೇ ಡ್ಯಾನ್ಸ್​ ಆಡ್ತಿದ್ದಾರೆ.
ಇದನ್ನೂ ಓದಿ: 3ನೇ ಟಿ20 ಪಂದ್ಯ; ಅಭಿಮಾನಿಗಳಿಗೆ ಗುಡ್​ನ್ಯೂಸ್.. ಉಚಿತವಾಗಿ ನೋಡಬಹುದು..!
/newsfirstlive-kannada/media/post_attachments/wp-content/uploads/2023/06/ARSHADEEP.jpg)
ಆಟದಲ್ಲಿ ಬ್ಯಾಟ್ಸ್​ಮನ್​ಗಳೇ ಸೆಂಟರ್​​ ಆಫ್​ ಅಟ್ರಾಕ್ಷನ್​. ಬ್ಯಾಟ್ಸ್​ಮನ್​ಗಳೇ ರಿಯಲ್​ ಮ್ಯಾಚ್​ ವಿನ್ನರ್ಸ್​ ಅನ್ನೋ ಮಾತಿದೆ. ಆ ಮಾತನ್ನು ಟೀಮ್​ ಇಂಡಿಯಾದ ಎಡಗೈ ವೇಗಿ ಆರ್ಷ್​ದೀಪ್​ ಸಿಂಗ್​​ ಸುಳ್ಳಾಗಿಸಿದ್ದಾರೆ.
ಇಂಗ್ಲೆಂಡ್​ ಸಿಂಹಗಳು ಸೈಲೆಂಟ್​.!
ಸದ್ಯ ನಡೀತಿರೋ ಇಂಡೋ-ಇಂಗ್ಲೆಂಡ್​ ಟಿ20 ಸಿರೀಸ್​​ನಲ್ಲಿ ಆರ್ಷ್​​ದೀಪ್​ ಸಿಂಗ್​, ಆಂಗ್ಲರಿಗೆ ಆರಂಭದಲ್ಲೇ ಕಾಟ ಕೊಡ್ತಿದ್ದಾರೆ. ನಡೆದ ಎರಡೂ ಪಂದ್ಯಗಳಲ್ಲಿ ಮೊದಲ ಓವರ್​​ನಲ್ಲೇ ಶಾಕ್​ ಕೊಟ್ಟಿದ್ದಾರೆ. ಪಂಜಾಬ್​ ಪುತ್ತರ್​ ಆರ್ಭಟಕ್ಕೆ ಫಿಲ್​ ಸಾಲ್ಟ್​ ಶರಣಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸರಣಿ ಮಾತ್ರವಲ್ಲ. ಟಿ20 ಗೇಮ್​ನಲ್ಲಿ ಪವರ್​​ ಪ್ಲೇನಲ್ಲಿ ಆರ್ಷ್​​ದೀಪ್ ಬೌಲಿಂಗ್​ ಮಾಡ್ತಿದ್ರೆ, ರನ್​ಗಳಿಸೋದಿರಲಿ, ವಿಕೆಟ್​ ಉಳಿದ್ರೆ ಸಾಕಪ್ಪ ಅಂತಾ ಬ್ಯಾಟ್ಸ್​ಮನ್​ಗಳು ಆಟವಾಡ್ತಿದ್ದಾರೆ. ಮೊದಲ 6 ಓವರ್​ಗಳಲ್ಲಿ ಫೀಲ್ಡ್​​ ರಿಸ್ಟ್ರಿಕ್ಷನ್​ ಇದ್ದರೂ ಅದರ ಲಾಭ ಪಡೆಯೋಕೆ ಬ್ಯಾಟರ್ಸ್​​ ತಿಣುಕಾಡ್ತಾರೆ. ಪವರ್​ ಪ್ಲೇನಲ್ಲಿ ಪವರ್​ಫುಲ್ ಬೌಲಿಂಗ್​​ ಮಾಡೋದ್ರಲ್ಲಿ ಆರ್ಷ್​​ದೀಪ್​​ ಪಂಟರ್​.
ಆರ್ಷ್​​ದೀಪ್​ ಬೌಲಿಂಗ್​
ಈವರೆಗೆ ಟಿ20 ಇಂಟರ್​ನ್ಯಾಷನಲ್​ ಗೇಮ್​ಗಳಲ್ಲಿ 60 ಇನ್ನಿಂಗ್ಸ್​ಗಳಲ್ಲಿ ಆರ್ಷ್​​ದೀಪ್​ ಪವರ್​ ಪ್ಲೇನಲ್ಲಿ ಬೌಲಿಂಗ್​ ಮಾಡಿದ್ದಾರೆ. ಒಟ್ಟು, 666 ಎಸೆತಗಳನ್ನ ಹಾಕಿದ್ದು, ಈ ಪೈಕಿ 369 ಎಸೆತಗಳು ಡಾಟ್​ ಆಗಿವೆ. 43 ವಿಕೆಟ್​ಗಳನ್ನ ಪವರ್​ ಪ್ಲೇನಲ್ಲಿ ಬೇಟೆಯಾಡಿದ್ದು, 7.45ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/01/TEAM_INDIA-3.jpg)
ಆರ್ಷ್​​ದೀಪ್​ ಡೇಂಜರಸ್
ಹೊಸ ಚೆಂಡಿನೊಂದಿಗೆ ಮಾತ್ರವಲ್ಲ. ಬಾಲ್​ ಹಳೆಯದಾದ ಮೇಲೂ ಆರ್ಷ್​​ದೀಪ್​ ಖದರ್​ ಕಡಿಮೆಯಾಗಲ್ಲ. ಡೆತ್​ ಓವರ್​ನಲ್ಲೂ ರಣಭೀಕರ ದಾಳಿ ಸಂಘಟಿಸ್ತಾರೆ. ಡೆತ್​ ಓವರ್​ನಲ್ಲಿ ಈವರೆಗೆ 73.4 ಓವರ್​ ಬೌಲಿಂಗ್​ ಮಾಡಿರೋ ಆರ್ಷ್​ದೀಪ್​ ಸಿಂಗ್​ 46 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ.
ಎರಡೂವರೆ ವರ್ಷಕ್ಕೆ ಎಲ್ಲರೂ ಸೈಡ್​​ಲೈನ್
ಟೀಮ್​ ಇಂಡಿಯಾ ಮೊದಲ ಟಿ20 ಪಂದ್ಯ ಆಡಿದ್ದು 2006ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಬೌಲರ್ಸ್​​ ಭಾರತ ತಂಡಕ್ಕೆ ಬಂದಿದ್ದಾರೆ. ಅವರೆಲ್ಲರಲ್ಲೂ 2022ರಲ್ಲಿ ಡೆಬ್ಯೂ ಮಾಡಿದ ಆರ್ಷ್​​ದೀಪ್​ ಸಿಂಗ್​ ಎರಡೂವರೆ ವರ್ಷಕ್ಕೆ ಸೈಡ್​ಲೈನ್​ ಮಾಡಿದ್ದಾರೆ. ಎಲ್ಲರನ್ನೂ ಹಿಂದಿಕ್ಕಿ ಟಿ20 ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾದ ಹೈಯೆಸ್ಟ್​ ವಿಕೆಟ್​ ಟೇಕರ್​ ಆಗಿ ಹೊರಹೊಮ್ಮಿದ್ದಾರೆ. ಇನ್ನೆರಡು ವಿಕೆಟ್​ ಕಬಳಿಸಿದ್ರೆ, ಸೆಂಚುರಿ ಬಾರಿಸಲಿದ್ದಾರೆ.
T20I ಕ್ರಿಕೆಟ್​ನಲ್ಲಿ ಆರ್ಷ್​​ದೀಪ್
ಟೀಮ್​ ಇಂಡಿಯಾ ಪರ 62 ಟಿ20 ಪಂದ್ಯಗಳನ್ನಾಡಿರುವ ಆರ್ಷ್​ದೀಪ್​ ಸಿಂಗ್​ 98 ವಿಕೆಟ್​​ಗಳನ್ನ ಬೇಟೆಯಾಡಿದ್ದಾರೆ. 8.27ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. 9 ರನ್​ ನೀಡಿ 4 ವಿಕೆಟ್​ ಬೇಟೆಯಾಡಿರೋದು ಈವರೆಗಿನ ಬೆಸ್ಟ್​ ಸಾಧನೆಯಾಗಿದೆ. ಕಳೆದ 2 ವರ್ಷಗಳಿಂದಲೂ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿರೋ ಆರ್ಷ್​ದೀಪ್​ ಸಿಂಗ್​, ಸದ್ಯ ಸೆಂಚುರಿ ವಿಕೆಟ್​ ಬೇಟೆಗೆ ಕಾತುರರಾಗಿದ್ದಾರೆ.
ಇದನ್ನೂ ಓದಿ: ATM ಮೂಲಕ PF ಹಣ ಡ್ರಾ..! ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​..!
ಪರ್ಫಾಮೆನ್ಸ್​ನಿಂದ ಟಿ20 ಫಾರ್ಮೆಟ್​ನ ರಿಯಲ್​ ಕಿಂಗ್​​ ಆಗಿ ಹೊರ ಹೊಮ್ಮಿದ್ದಾರೆ. ಜೊತೆಗೆ 25 ವರ್ಷಕ್ಕೇ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿಕೊಂಡಿದ್ದಾರೆ. ಈ ಸಾಲಿಡ್​ ಪ್ರದರ್ಶನವನ್ನು ಪಂಜಾಬ್​ ಪುತ್ತರ್​​ ಮುಂದೆಯೂ ಮುಂದುವರೆಸಲಿ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us