/newsfirstlive-kannada/media/post_attachments/wp-content/uploads/2024/04/Arshia_Goswami.jpg)
ನವದೆಹಲಿ: 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಅವರು ಬರೋಬ್ಬರಿ 75 ಕೆಜಿ ಭಾರ ಎತ್ತುವ ಮೂಲಕ ದಾಖಲೆ ಮಾಡಿದ್ದಾರೆ. ಸದ್ಯ ಇವರು ಡೆಡ್​ಲಿಫ್ಟಿಂಗ್ ಮಾಡುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದ್ದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹರಿಯಾಣದ ಪಂಚಕುಲ ಮೂಲದ ಬಾಲಕಿ ಅರ್ಷಿಯಾ ಗೋಸ್ವಾಮಿಗೆ ಸದ್ಯ ಇದೀಗ ಕೇವಲ 9 ವರ್ಷಗಳು. ಆದರೆ ಬಾಲಕಿ ಈ ವಯಸ್ಸಿಗೆ 75 ಕೆ.ಜಿ ಅನ್ನು ಡೆಡ್​ಲಿಫ್ಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈಕೆಯ ಸಾಧನೆ ಮಾತ್ರ ಈಗ ಎಲ್ಲರು ಕೊಂಡಾಡುತ್ತಿದ್ದಾರೆ. ಇಂಡಿಯಾದ ಯಂಗೆಸ್ಟ್​ ಡೆಡ್​ಲಿಫ್ಟರ್​ ಎಂದು ಎಲ್ಲರೂ ಗುಣಗಾನ ಮಾಡುತ್ತಿದ್ದಾರೆ ಎನ್ನಲಾಗಿದೆ.
Arshia Goswami, India's 'youngest deadlifter' who can lift 75 kg (165 lbs) and is just 9 years old.
[📹 fit_arshia]https://t.co/jv4kze4vv2— Massimo (@Rainmaker1973) April 8, 2024
ಬಾಲಕಿ ಸಾಧನೆ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ, ಈ ಹಿಂದೆ ಅಂದರೆ 2021ರಲ್ಲಿ ತನ್ನ 6ನೇ ವಯಸ್ಸಿನಲ್ಲಿ 45 ಕೆ.ಜಿ ಡೆಡ್​ಲಿಫ್ಟ್​ ಮಾಡುವ ಮೂಲಕ ದಾಖಲೆ ಮಾಡಿದ್ದರು. ಇದೀಗ ಮತ್ತೆ ದಾಖಲೆ ಬರೆದಿರುವ ಬಾಲಕಿ ಈ ಸಲ ಬರೋಬ್ಬರಿ 75 ಕೆ.ಜಿ ಭಾರ ಎತ್ತುವ ಮೂಲಕ ಭಾರತದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us