/newsfirstlive-kannada/media/post_attachments/wp-content/uploads/2024/12/art-of-living-Ravishankar-Gurudev.jpg)
ಬೆಂಗಳೂರು: ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಇದೇ ಶನಿವಾರ ಅಂದ್ರೆ ಡಿಸೆಂಬರ್ 21ರಂದು ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ. ಅದರ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ "ವಿಶ್ವ ಧ್ಯಾನ ದಿನ"ವನ್ನು ಘೋಷಿಸಿ, ಇದನ್ನು ಸರ್ವಾನುಮತದಿಂದ ಅನುಮೋದಿಸಲಾಗುವುದು. ಈ ಐತಿಹಾಸಿಕ ಘಟನೆಯು, ಇನ್ನು ಮುಂದೆ ಪ್ರತಿ ವರ್ಷದ ನಡೆಯಲಿರುವ ಜಾಗತಿಕ ಧ್ಯಾನದ ಆಚರಣೆಯ ಉತ್ಸವಕ್ಕೆ ನಾಂದಿಯಾಗಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕವಾದ ಲಾಭಗಳನ್ನು ಬೀರುವ ಮತ್ತು ಶಾಂತಿ ಹಾಗೂ ಐಕ್ಯತೆಯನ್ನು ಪೋಷಿಸುವ ಧ್ಯಾನದಿಂದ ಆಗುವ ಪ್ರಯೋಜನಗಳನ್ನು ಗುರುತಿಸಿದಂತಾಗುತ್ತದೆ.
ನ್ಯೂಯಾರ್ಕ್‌ನ ವಿಶ್ವ ಸಂಸ್ಥೆಯ 'ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ' ಡಿಸೆಂಬರ್ 21 ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ.
ಈ ಮಹತ್ವ ಪೂರ್ಣ ದಿನದಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ವಿಶ್ವ ಸಂಸ್ಥೆಯಲ್ಲಿ ಮುಖ್ಯ ಭಾಷಣವನ್ನು ನೀಡಲಿದ್ದಾರೆ. ಈ ಪ್ರಮುಖವಾದ ದಿನವನ್ನು "ವಿಶ್ವ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಧ್ಯಾನ" ಎಂದು ಕರೆಯಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು, ವಿಶ್ವ ಸಂಸ್ಥೆಯು ಧ್ಯಾನವನ್ನು ಗುರುತಿಸಿ ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಧ್ಯಾನವು ಆತ್ಮವನ್ನು ಪೋಷಿಸುತ್ತದೆ, ಮನಸ್ಸನ್ನು ಪ್ರಶಾಂತಗೊಳಿಸುತ್ತದೆ, ಆಧುನಿಕತೆಯ ಸವಾಲುಗಳಿಗೆ ಪರಿಹಾರವನ್ನು ನೀಡುತ್ತದೆ ಎಂದರು.
ವಿಶ್ವ ಧ್ಯಾನ ದಿನದ ಪ್ರಮುಖಾಂಶಗಳು:
ವಿಶ್ವ ಸಂಸ್ಥೆಯಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರಿಂದ ಪ್ರಧಾನ ಭಾಷಣ: ಒತ್ತಡ ಮತ್ತು ಸಂಘರ್ಷಗಳ ನಿವಾರಣೆಯಲ್ಲಿ ಪ್ರಖ್ಯಾತರಾಗಿರುವ ರವಿಶಂಕರ್ ಗುರೂಜಿ ಅವರು ಜಾಗತಿಕ ಗಣ್ಯರನ್ನು, ವಿಶ್ವಸಂಸ್ಥೆಯ ಹಿರಿಯ ನಾಯಕರನ್ನು, ರಾಯಭಾರಿಗಳನ್ನು, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಶಾಂತಿ ಹಾಗೂ ಐಕ್ಯತೆಯ ಪೋಷಣೆಯಲ್ಲಿ ಧ್ಯಾನದ ಮುಖ್ಯ ಪಾತ್ರವನ್ನು ವಿವರಿಸಲಿದ್ದಾರೆ.
ಜಾಗತಿಕ ನೇರ ಪ್ರಸಾರ: ಡಿಸೆಂಬರ್ 21ರಂದು ಗುರುದೇವರು ವಿಶ್ವ ಧ್ಯಾನ ದಿನ ಅಂಗವಾಗಿ, ಧ್ಯಾನವನ್ನು ಮಾರ್ಗದರ್ಶಿಸಲಿದ್ದಾರೆ. ಇದು ಜಾಗತಿನಾದ್ಯಂತ ನೇರ ಪ್ರಸಾರಗೊಳಲಿದೆ. ಅಂದು ಧನುರ್ಮಾಸದ ಈ ಪುಣ್ಯಕಾಲವು, ಸ್ವಾಧ್ಯಾಯ ಮತ್ತು ಪುನಶ್ಚೇತನಕ್ಕೆ ಶುಭ ಸಮಯ ಎಂದು ಪರಿಗಣಿಸಲಾಗಿದೆ.
ವಿಶ್ವ ಧ್ಯಾನದ ದಿನ ಏಕೆ ಮುಖ್ಯ?
ಹೆಚ್ಚುತ್ತಿರುವ ಒತ್ತಡ, ಹಿಂಸಾಚಾರ, ಸಮಾಜದಲ್ಲಿ ವಿಶ್ವಾಸದ ಕೊರತೆ, ಇವು ಕೆಲವು ಆಧುನಿಕ ಜಗತ್ತಿನ ಸವಾಲುಗಳಾಗಿವೆ. ಧ್ಯಾನವು, ಆಧುನಿಕತೆಯ ಸವಾಲುಗಳನ್ನು ಎದುರಿಸಲು ಬೇಕಾದ ಸಾಮರ್ಥ್ಯವನ್ನು ನೀಡುವುದೆಂದು ಸಾಬೀತಾತಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಧ್ಯಾನದ ದಿನವನ್ನು ವಿಶ್ವಸಂಸ್ಥೆಯು ಸರ್ವಾನಮತದಿಂದ ಒಪ್ಪಿರುವುದು ಮಹತ್ತರ ಹೆಜ್ಜೆಯಾಗಿದೆ.
ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಕಳೆದ 43 ವರ್ಷಗಳಿಂದ ಧ್ಯಾನದ ಲಾಭಗಳನ್ನು 180 ದೇಶಗಳಲ್ಲಿ ಪಸರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸುದೃಢತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಧ್ಯಾನವೇ ಅತ್ಯುತ್ತಮವಾದ ದಾರಿಯೆಂದು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಜಗತ್ತಿನ ಸಂತೋಷದ ಸೂಚ್ಯಂಕದಲ್ಲಿ ಮಾರಿಷಸ್ಗೆ ಉನ್ನತ ಸ್ಥಾನ ಸಿಗಬೇಕು- ಶ್ರೀ ಶ್ರೀ ರವಿಶಂಕರ್ ಗುರೂಜಿ
ಜಾಗತಿಕ ರಾಜಕೀಯ ಸಂಘರ್ಷಗಳಿರಲಿ, ವೈಯಕ್ತಿಕ ಬಿಕ್ಕಟ್ಟುಗಳಿರಲಿ, ಧ್ಯಾನವು ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ನಂಬಿಕೆಯ ಗಡಿಗಳನ್ನು ಮೀರಿದ ಸಾರ್ವತ್ರಿಕ ಪರಿಹಾರವನ್ನು ನೀಡುತ್ತದೆ. ಬಾಹ್ಯ ಚಟುವಟಿಕೆಯೊಂದಿಗೆ ಆಂತರಿಕ ಶಾಂತಿಯನ್ನು ಸಂಯೋಜಿಸುವ ಮೂಲಕ, ಇದು ಜಾಗತಿಕ ಶಾಂತಿ-ಸ್ಥಾಪನೆಯ ಪ್ರಯತ್ನಗಳಿಗೆ ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ.
"ಗುರುದೇವರೊಡನೆ ಜಗತ್ತು ಧ್ಯಾನ ಮಾಡಲಿದೆ"
ಕಾಲ : ಶನಿವಾರ, ಡಿಸೆಂಬರ್ 21,2024.
ಸಮಯ: ಭಾರತೀಯ ಕಾಲಮಾನ 8.00 ಸಂಜೆ IST
ಸ್ಥಳ : ಡಿಸೆಂಬರ್ 21, "ಗುರುದೇವರೊಂದಿಗೆ ವಿಶ್ವ ಧ್ಯಾನ ದಿನ"
http://wolf.me/world-meditation-day
ವಿಶ್ವ ಧ್ಯಾನದ ದಿನದಂದು ವಿಶ್ವ ಸಂಸ್ಥೆಯಲ್ಲಿ ಮುಖ್ಯ ಭಾಷಣ ಮಾಡಲಿರುವ ಗುರುದೇವ್ ಶ್ರೀ ಶ್ರೀ ರವಿಶಂಕರ್. ಇದರ ನಂತರ ಜಾಗತಿಕ ಧ್ಯಾನವು ನೇರ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ