ನಿಜಕ್ಕೂ ಇದು ‘ವಂಡರ್‘​ಲಾ.. ವಿಸ್ಮಯ ಜಗತ್ತಿನೊಂದಿಗೆ ತೆರೆದುಕೊಂಡ ಪಾರ್ಕ್​..ಬಾಹ್ಯಾಕಾಶ ಸೃಷ್ಟಿ!

author-image
Gopal Kulkarni
Updated On
ನಿಜಕ್ಕೂ ಇದು ‘ವಂಡರ್‘​ಲಾ.. ವಿಸ್ಮಯ ಜಗತ್ತಿನೊಂದಿಗೆ ತೆರೆದುಕೊಂಡ ಪಾರ್ಕ್​..ಬಾಹ್ಯಾಕಾಶ ಸೃಷ್ಟಿ!
Advertisment
  • 35 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ಮಯ ಲೋಕ
  • ಕೃತಕ ಸ್ಪೇಸ್ ಅನುಭವ ಪಡೆದ ಜನರು ಫುಲ್ ಖುಷ್
  • ಸ್ಕ್ರೀನ್ ಥಿಯೇಟರ್ ಉದ್ಘಾಟಿಸಿದ ಆಶಿಕಾ ಏನಂದ್ರು?

ಬೆಂಗಳೂರಿನ ವಂಡರ್ ಲಾದಲ್ಲಿ ಇದೀಗ ವಂಡರ್ ಫುಲ್ ಆಗಿರುವ ಹೊಸ ಸಾಮ್ಯಾಜ್ಯನೇ ಸೃಷ್ಟಿಯಾಗಿದೆ. ಭೂಮಿ,ಆಕಾಶ ,ಪಾತಾಳ, ಮರುಭೂಮಿ ಹೀಗೆ ಎಲ್ಲಾ ಕಡೆಗೆ ನೀವೂ ಕೇವಲ 4 ನಿಮಿಷದಲ್ಲಿ ಹೋಗಿ ಬರುವ ರೀತಿಯ ವಿಸ್ಮಯ ಜಗತ್ತು ತೆರೆದುಕೊಂಡಿದೆ. ಅಷ್ಟಕ್ಕೂ ಈ ಕೃತಕ ಬಾಹ್ಯಾಕಾಶ ಸೃಷ್ಟಿಯಾಗಿದೆಲ್ಲಿ? ಹೇಗಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

publive-image

ವಿಸ್ಮಯ, ನಿಜಕ್ಕೂ ವಿಸ್ಮಯ.ವಿಡಿಯೋ ನೋಡ್ತಿದ್ದಂಗೆ ಮೈಯಲ್ಲಾ ರೋಮಾಂಚನ. ಶರವೇಗದ ಸಂಚಲನ.ಈ ವಿಡಿಯೋ ನೋಡ್ತಿದ್ದಂಗೆ ಇದ್ಹೇನೂ ಅಂತರಿಕ್ಷನಾ? ನಾವೇನೂ ಬಾಹ್ಯಾಕಾಶದಲ್ಲಿದ್ದೇವಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟುಕೊಳ್ಳೋದು ಕಾಮನ್.ಇಂತಹ ವಿಸ್ಮಯ ಜಗತ್ತು ತೆರೆದುಕೊಂಡಿದ್ದು ಬೇರೆಲ್ಲೂ ಅಲ್ಲ.ಬಿಡದಿಯ ವಂಡರ್ಲಾದಲ್ಲಿ.

publive-image

ವಂಡರ್ ಲಾ ವಾಟರ್ ಪಾರ್ಕ್ ನಲ್ಲಿ ನೂತನ ಥೀಮ್ ಗಿಂದು ಚಾಲನೆ ಸಿಕ್ಕಿದೆ."ಮಿಷನ್ ಇಂಟರ್ ಸ್ಟೆಲ್ಲರ್" ಎಂಬ ಅತಿದೊಡ್ಡ ಎಲ್ಇಡಿ ಸ್ಕ್ರೀನ್ ಥಿಯೇಟರ್ ರನ್ನ ಚಲನಚಿತ್ರ ನಟಿ ಅಶಿಕಾ ರಂಗನಾಥ್ ಇಂದು ಉದ್ಘಾಟನೆ ಮಾಡಿದ್ದಾರೆ.ಭಾರತದ ಅತಿದೊಡ್ಡ ಎಲ್ಇಡಿ ಸ್ಟ್ರೀನ್ ಥಿಯೇಟರ್ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣಗೊಂಡಿದ್ದು,ವಂಡರ್ ಲಾ ವಾಟರ್ ಪಾರ್ಕ್ ಗೆ ಬರುವ ಪ್ರವಾಸಿಗರಿಗೆ ಮನರಂಜನೆ ನೀಡಲಿದೆ. ನೂತನ ಸ್ಕ್ರೀನ್‌ಥಿಯೃಲೇಟರ್ ಉದ್ಘಾಟನೆ ಮಾಡಿ ಮಾತನಾಡಿದ ನಟಿ ಆಶಿಕಾ ರಂಗನಾಥ್ ನಿಜಕ್ಕೂ ನನಗೆ ಒಮ್ಮೆ ಅಂತರಿಕ್ಷ ಪ್ರಯಾಣಿಸಿದ ಅನುಭವ ಆಯ್ತೆಂದು ತಮ್ಮ ಎಕ್ಸ್ ಅನುಭವವನ್ನು ಶೇರ್ ಮಾಡಿಕೊಂಡರು

ಇದನ್ನೂ ಓದಿ:ಇವತ್ತು ಸೂರ್ಯ ಗ್ರಹಣ.. ಯುಗಾದಿ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ಭಾರೀ ಮಹತ್ವ..!

publive-image

ಒಂದು ಬಾರಿಗೆ 60 ಮಂದಿ ಕೂತು ವೀಕ್ಷಣೆ ಮಾಡಬಹುದಾದ ಹೈಡ್ರಾಲಿಕ್ ಲಿಫ್ಟ್ ಚೇರ್, ಇಟಲಿ ಮೂಲದ ಅತ್ಯಾಧುನಿಕ ಸೌಂಡ್ ಸಿಸ್ಟಮ್, ಹೈಟೆಕ್ ಲೇಸರ್ ಪ್ರೊಜೆಕ್ಷನ್ ವ್ಯವಸ್ಥೆ ಹೊಂದಿದೆ. ಎಲ್ ಡಿ ಅಂತರಿಕ್ಷ ಅನುಭವ ಪಡೆಯಲು ಜನರು ಹೆಚ್ಚಿನ ಹಣ ಪಾವತಿ ಮಾಡಬೇಕಿಲ್ಲ.ಈಗಿರುವ ದರದಲ್ಲಿಯೇ ಕೃತಕ ಅಂತರಿಕ್ಷದ ಅನುಭವ ಪಡೆಯಬಹುದು.40 ಫೀಟ್ ಎತ್ತರಕ್ಕೆ ಹೋಗಿ ಈ ರೀತಿಯ ಅನುಭವ ಪಡೆಯುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮಲ್ಟಿಬೆಲ್ಟ್, ಸೆನ್ಸಾರ್ ಸೇರಿದಂತೆ ಎಲ್ಲಾ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಹನಿಟ್ರ್ಯಾಪ್ ಆಗಿಲ್ಲ, ಸುಪಾರಿ ಪಡೆದು ಕೊಲೆಯತ್ನ -ಪೆನ್​ಡ್ರೈ ಸಮೇತ ದೂರು ಕೊಟ್ಟ ರಾಜಣ್ಣ ಪುತ್ರ

ಜನರು ಕೂಡ ವಂಡರ್ಲಾ ಬಂದೂ ಈ ವಿಸ್ಮಯ ಲೋಕದ ಅನುಭವ ಪಡೆಯಬಹುದಾಗಿದೆ. ಇನ್ನೂ ಎಲ್ ಡಿ ಸ್ಕ್ರೀನ್ ಥಿಯೇಟರ್ ಉದ್ಘಾಟನೆ & ಪ್ರೆಸ್ ಮೀಟ್ ನಲ್ಲಿ ಸಿಓಓ ಧೀರನ್ ಚೌಧರಿ, ವಂಡರ್ ಲಾ ಬೆಂಗಳೂರು ಪಾರ್ಕ್ ಮುಖ್ಯಸ್ಥ ರುದ್ರೇಶ್ ಉಪಸ್ಥಿತರಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment