/newsfirstlive-kannada/media/post_attachments/wp-content/uploads/2023/06/COOL_DRINKS.jpg)
ಚೂಯಿಂಗ್ ಗಮ್ ಸೇರಿದಂತೆ ತಂಪುಪಾನಿಗಳಲ್ಲಿ ಸೇರಿಸಲಾಗುವ ಕೃತಕ ಸಿಹಿಕಾರಕ ಆಸ್ಪರ್ಟೆಮ್. ಇದರಿಂದ ಡೆಡ್ಲಿ ಕ್ಯಾನ್ಸರ್ ಬರುತ್ತದೆ ಎಂದು ಅಮೆರಿಕದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಎಚ್ಚರಿಸಿದೆ.
ಈ ಹಿಂದೆಯೇ ಆಸ್ಪರ್ಟೆಮ್ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ತಂಪುಪಾನಿಗಳಲ್ಲಿರುವ ಕೃತಕ ಸಿಹಿಕಾರಕಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ಹೇಳಿದೆ. 1981 ರಿಂದ ಆಸ್ಪರ್ಟೆಮ್ ಬಳಕೆ ಮಾಡಲಾಗುತ್ತಿದೆ. ಇದನ್ನು 5 ಬಾರಿ ಪರೀಕ್ಷೆ ಮಾಡಿ ಅನುಮೋದನೆ ನೀಡಲಾಗಿತ್ತು. ಹೀಗಾಗಿ ಇದನ್ನು ಭಾರತ ಸೇರಿ 90ಕ್ಕೂ ಹೆಚ್ಚು ದೇಶಗಳಲ್ಲಿ ಈಗಲೂ ಚಾಲನೆಯಲ್ಲಿದೆ.
ಏನಿದು ಆಸ್ಪರ್ಟೆಮ್?
ಆಸ್ಪರ್ಟೆಮ್ ಯಾವುದೇ ಕ್ಯಾಲೊರಿಗಳನ್ನು ಹೊಂದಿಲ್ಲ. ಆದ್ರೂ ಇದು ಟೇಬಲ್ ಸಕ್ಕರೆಗಿಂತ ಸುಮಾರು 200 ಪಟ್ಟು ಸಿಹಿ ಆಗಿರುತ್ತದೆ. 2009ರಲ್ಲಿ ಭಾರತದ FSSAI ಈ ಕೃತಕ ಸಿಹಿಕಾರಕವನ್ನು ಅತಿ ಹೆಚ್ಚು ಸಿಹಿಯಾಗಿದೆ ಎಂದು ಹೇಳಿ ಅನುಮತಿ ನೀಡಿತು. ಈ ವೇಳೆ ಯಾವ್ಯಾವ ವಸ್ತುಗಳನ್ನು ಅದರಲ್ಲಿ ಬಳಕೆ ಮಾಡಲಾಗುತ್ತದೆ? ಇದರ ಬಗ್ಗೆ ವಿವರವನ್ನು ಪ್ರಾಡೆಕ್ಟ್ ಮೇಲೆ ಕಡ್ಡಾಯವಾಗಿ ನಮೂದಿಸಬೇಕು ಎಂದು FSSAI ಹೇಳಿತ್ತು.
ಅಮೆರಿಕದ ಕೋಕಾ-ಕೋಲಾ ಮತ್ತು ಪೆಪ್ಸಿಕೋದಂತ ಕಂಪನಿಗಳು ಸಂಶೋಧನಾ ಸಂಸ್ಥೆಯ ಮಾಹಿತಿಯನ್ನು ನಿರಾಕರಣೆ ಮಾಡಿ ವಿರೋಧ ವ್ಯಕ್ತಪಡಿಸಿವೆ. ಆಸ್ಪರ್ಟೆಮ್ ಸುರಕ್ಷಿತವಾಗಿದೆ ಎಂದು ವೈಜ್ಞಾನಿಕ ಪರಿಶೀಲನೆ ಮಾಡಿದ ಬಳಿಕವೇ ಅದನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲ ಕಂಪನಿಗಳಲ್ಲಿ ಒಮ್ಮತವಿದೆ. ಪ್ರಪಂಚದಾದ್ಯಂತ ಇರುವ ಎಲ್ಲ ಆಹಾರ ಸುರಕ್ಷತಾ ಏಜೆನ್ಸಿಗಳು ಯಾವುದೇ ಸಮಸ್ಯೆ ಇಲ್ಲ. ಹೀಗಿದ್ದೂ ಈ ಆರೋಪ ಮಾಡುವುದು ಸರಿಯಲ್ಲ ಎಂದು ಪಾನೀಯ ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ಕೀನ್ ಹೇಳಿದ್ದಾರೆ.
ಇದರ ಬಗ್ಗೆ ಕಳೆದ ವರ್ಷ ಫ್ರಾನ್ಸ್‌ನಲ್ಲೂ ಸಂಶೋಧನೆ ಮಾಡಲಾಗಿತ್ತು. ಇವರ ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಈ ಕೃತಕ ಸಿಹಿಕಾರಕಗಳನ್ನು ತಿನ್ನುವುದರಿಂದ ಅದರಲ್ಲಿ ವಿಶೇಷವಾಗಿ ಆಸ್ಪರ್ಟೆಮ್ ಮತ್ತು ಅಸೆಸಲ್ಫೇಮ್-ಕೆ, ಜನರಿಗೆ ಕ್ಯಾನ್ಸರ್ ಅಪಾಯ ತಂದೊಡ್ಡುತ್ತದೆ ಎಂದು ಹೇಳಿದೆ.
WHOನ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಜುಲೈನಲ್ಲಿ ಸಭೆ ನಡೆಸಿತ್ತು. ಆಗ ಆಸ್ಪರ್ಟೆಮ್ ಮನುಷ್ಯರಿಗೆ ಕ್ಯಾನ್ಸರ್ ಜನಕ ಎಂದು ಹೇಳಿತ್ತು. ಹೀಗಾಗಿ ಮೇನಲ್ಲಿ WHO ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಕ್ಕರೆಯೇತರ ಸಿಹಿಕಾರಕಗಳು ಅಥವಾ NSS ಅನ್ನು ಬಳಸದಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ