newsfirstkannada.com

ವಾವ್ಹ್​! ಬಾಲಕನಿಗೆ ರಾಮಲಲ್ಲಾ ಮೂರ್ತಿಯಂತೆ ಮೇಕಪ್​! ಬಾಲ ರಾಮನಂತೆ ಕಂಡ 9 ವರ್ಷದ ಪೋರ!

Share :

Published March 20, 2024 at 1:38pm

Update March 20, 2024 at 1:43pm

    ಕಲಾವಿದನ ಅದ್ಭುತ ಕೈಚಳವಿದು.. ಬಾಲಕ ಬಾಲರಾಮನಾದ!

    9 ವರ್ಷದ ಪೋರನಿಗೆ ಬಾಲರಾಮನಂತೆ ಮೇಕಪ್​ ಮಾಡಿದ ಆರ್ಟಿಸ್ಟ್​​

    ಮೇಕಪ್​ ಆರ್ಟಿಸ್ಟ್​ ರಾಮಲಲ್ಲಾನಿಗೆ ಗೌರವ ನೀಡಿದ ಬಗೆ ಹೀಗೆ..

ಕಲಾವಿದರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ. ಅವರ ಕೈ ಚಳಕದಿಂದ ಕಲ್ಲೊಂದು ಮೂರ್ತಿಯಾಗಿ ಜನ್ಮ ತಾಳುವ ಸಾಮರ್ಥ್ಯ ಅವರಿಗಿದೆ. ಅದಕ್ಕೆ ನಿದರ್ಶನವೇ ಆಯೋಧ್ಯೆಯ ರಾಮಲಲ್ಲಾನ ಮೂರ್ತಿ. ಮೈಸೂರಿನ ಕಲ್ಲು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯಾಗಿ ಇಂದು ಆರಾಧ್ಯಗೊಳ್ಳುತ್ತಿದ್ದಾನೆ ಎಂದರೆ ನಂಬಲು ಅಸಾಧ್ಯ. ಅದರೆ ವಿಚಾರ ಅದಲ್ಲ, ಇಲ್ಲೊಬ್ಬ ಕಲಾವಿದರ ತಮ್ಮ ಕೈಚಳದ ಮೂಲಕ ಬಾಲಕನಿಗೆ ಮೇಕಪ್​ ಮಾಡುವ ಮೂಲಕ ಭಗವಾನ್​ ರಾಮಲಲ್ಲಾ ಮೂರ್ತಿಯಂತೇ ಕಂಗೊಳಿಸುವಂತೆ ಮಾಡಿದ್ದಾರೆ. ಇದನ್ನು ಕಂಡಾಗ ಸಾಮ್ಯತೆ ಗೊತ್ತಾಗದಂತಿದೆ.

ಹೌದು. ಇಂತಹದೊಂದು ಅಚ್ಚರಿಯ ಘಟನೆ ಕಂಡುಬಂದಿರೋದು ಪಶ್ಚಿಮ ಬಂಗಾಳದಲ್ಲಿ. ಅಸನ್ಸೋಲ್​​ನ ಅಶಿಶ್​​ ಕುಂದು ಅವರು ಮೇಕಪ್​ ಮೂಲಕ ಬಾಲಕನನ್ನು ರಾಮಲಲ್ಲನನ್ನಾಗಿ ಪರಿವರ್ತಿಸಿದ್ದಾರೆ. ಇವರ ಪತ್ನಿ ರೂಬಿ ಸಹಾಯ ಪಡೆದುಕೊಂಡು 9 ವರ್ಷದ ಬಾಲಕ ಅಬೀರ್​​​​ನನ್ನು ಅಯೋಧ್ಯೆಯಲ್ಲಿ ಇರಿಸಲಾದ ಬಾಲ ರಾಮನ ಮೂರ್ತಿಯಂತೆ ಮೇಕಪ್​ ಮೂಲಕ ಪರಿವರ್ತಿಸಿದ್ದಾರೆ.

ಏನಾದ್ರು ಮಾಡಬೇಕಲ್ಲ

ಜನವರಿ 22 ರಾಮ ಮಂದಿರ ಪ್ರತಿಷ್ಠಾಪನೆ ಆದಾಗಿನಿಂದ ರಾಮಲಲ್ಲಾ ಹೋಲುವ ವಿಗ್ರಹವನ್ನು ರಚಿಸಬೇಕು ಎಂಬ ಮನದಾಸೆ ಇತ್ತಂತೆ. ಆದರೆ ಅನಿರೀಕ್ಷಿತ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ರಾಮಲಲ್ಲಾನಿಗೆ ಗೌರವಾರ್ಥವಾಗಿ ಏನಾದರು ಮಾಡಬೇಕು ಎಂದು ಅನ್ವೇಷಣೆಯಲ್ಲಿ ತೊಡಗಿಕೊಂಡರು. ಈ ವೇಳೆ ಅಶಿಶ್​​ ಕುಂದು ಬಾಲಕನನ್ನು ಬಳಸಿಕೊಂಡು ಮೇಕಪ್​ ಮೂಲಕ ಆತನನ್ನು ರಾಮಲಲ್ಲಾ ಮೂರ್ತಿಯಂತೇ ಹೋಲುವಂತೆ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾಲಕನನ್ನು ರಾಮಲಲ್ಲಾನನ್ನಾಗಿ ಮೇಕಪ್​ ಮಾಡಿಸಿದ ಫೋಟೋ ಹರಿದಾಡುತ್ತಿದೆ. ಅನೇಕರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾವ್ಹ್​! ಬಾಲಕನಿಗೆ ರಾಮಲಲ್ಲಾ ಮೂರ್ತಿಯಂತೆ ಮೇಕಪ್​! ಬಾಲ ರಾಮನಂತೆ ಕಂಡ 9 ವರ್ಷದ ಪೋರ!

https://newsfirstlive.com/wp-content/uploads/2024/03/ramlalla.jpg

Load More