ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಸರ್ಕಾರದ ಈ ನಿರ್ಧಾರದಿಂದ ಫೀಸ್​​ ಡಬಲ್ ಆಗೋ ಸಾಧ್ಯತೆ

author-image
Bheemappa
Updated On
ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಸರ್ಕಾರದ ಈ ನಿರ್ಧಾರದಿಂದ ಫೀಸ್​​ ಡಬಲ್ ಆಗೋ ಸಾಧ್ಯತೆ
Advertisment
  • ಆರ್​ಸಿ, ಕಲಾ ಕಾಲೇಜು ಬೆಂಗಳೂರು ಸಿಟಿ ವಿವಿಗೆ ಸೇರಿಸಲು ಪ್ಲಾನ್
  • ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಾಕ್, ಶುಲ್ಕ ಹೆಚ್ಚಾಗುತ್ತಾ..?
  • ಬೆಂಗಳೂರು ನಗರ ವಿವಿಗೆ ಈ 2 ಕಾಲೇಜು ಸೇರಿಸಿದ್ರೆ ಸಮಸ್ಯೆ ಏನು?

ತನ್ನದೇ ಆದ ಇತಿಹಾಸ ಹೊಂದಿರುವ ನಗರದ ಪ್ರತಿಷ್ಠಿತ ಕಾಲೇಜುಗಳು. ಲಕ್ಷಾಂತರ ಬಡವರ ಕನಸನ್ನು ನನಸು ಮಾಡಿದ ಬಡವರಪರ ಕಾಲೇಜುಗಳು ಅಂತಲೇ ಪ್ರಖ್ಯಾತಿ ಹೊಂದಿರುವ ಕಾಲೇಜುಗಳಿವು. ಆದ್ರೆ ಸರ್ಕಾರ ತೆಗೆದುಕೊಳ್ಳುತ್ತಿರುವ ಈ ಒಂದು ನಿರ್ಧಾರ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೊಳ್ಳಿ ಇಡುತ್ತಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವೇನು? ಆ ಕಾಲೇಜುಗಳ ವಿಚಾರದಲ್ಲಿ ಸರ್ಕಾರದ ನಿರ್ಧಾರವೇನು? ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

publive-image

ಸರ್ಕಾರದ ಅಧೀನದಲ್ಲಿರುವ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಸರ್ಕಾರಿ ರಾಮನಾರಾಯಣ ಚೆಲ್ಲಾರಾಮ್ ಕಾಲೇಜ್ ಅಂದ್ರೆ ಆರ್ಸಿ ಕಾಲೇಜ್. ಇದರೊಂದಿಗೆ ಸರ್ಕಾರಿ ಕಲಾ ಕಾಲೇಜು ಅಂದ್ರೆ GAS ಕಾಲೇಜ್. ಈ ಎರಡು ಸರ್ಕಾರಿ ಕಾಲೇಜುಗಳನ್ನು ಬೆಂಗಳೂರು ನಗರ ಯೂನಿವರ್ಸಿಟಿಗೆ ಸೇರಿಸಲು ಸರ್ಕಾರ ಮುಂದಾಗಿದೆ. ಸದ್ಯ ಸರ್ಕಾರದ ಈ ನಿರ್ಧಾರ ಸಾವಿರಾರು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಎಷ್ಟೇ ಹೋರಾಟ ಮಾಡಿದ್ರೂ ಸರ್ಕಾರ ಮಾತ್ರ ಕಿವಿ ಕೊಡುತ್ತಿಲ್ಲ ಅನ್ನೋದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ.

ಸರ್ಕಾರಿ ಕಾಲೇಜುಗಳನ್ನು ಬೆಂಗಳೂರು ನಗರ ವಿವಿಗೆ ಸೇರಿಸಿದ್ರೆ ಸಮಸ್ಯೆ ಏನು?

ಸರ್ಕಾರಿ ಕಾಲೇಜುಗಳನ್ನು ಬೆಂಗಳೂರು ನಗರ ವಿವಿಯ ಘಟಕ ಕಾಲೇಜುಗಳಾಗಿ ಮಾರ್ಪಟ್ಟರೆ ಕಾಲೇಜಿಗೆ ಬರ್ತಾ ಇರೋ ಸರ್ಕಾರದ ಅನುದಾನ ಕಡಿಮೆ ಆಗುತ್ತದೆ. ಕಾಲೇಜು ನಡೆಸಲು ಬೇಕಾದ ಹಣ ವಿದ್ಯಾರ್ಥಿಗಳ ಫೀಸ್ ಮೂಲಕ ವಸೂಲಿ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಈಗಾಗಲೇ ಸರ್ಕಾರ ಹಣದ ಕೊರತೆ ಉಲ್ಲೇಖಿಸಿ 7 ವಿವಿಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ 2 ಕಾಲೇಜುಗಳನ್ನ ವಿವಿಗೆ ಸೇರಿಸೋದು ಅಂದ್ರೇ ಫೀಸ್ ಡಬಲ್ ಆಗುವುದು ಶತಸಿದ್ಧ ಅನ್ನೋದು ವಿದ್ಯಾರ್ಥಿಗಳ ಆಕ್ರೋಶ. 5 ಸಾವಿರ ಇರುವ ಫೀಸ್ 15 ರಿಂದ 20 ಸಾವಿರ ಆಗಲಿದೆ ಎಂದು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 48,000 ರೂಪಾಯಿ ಸಂಬಳ

publive-image

ತುಮಕೂರು ವಿವಿ ಅಲ್ಲಿ 11,500 ಶುಲ್ಕ

ಫೀಸ್ ಬೇಕಾಬಿಟ್ಟಿ ಏರಿಕೆ ಮಾಡಿದ್ದಾರೆ ಅನ್ನೋದು ವಿದ್ಯಾರ್ಥಿಗಳ ವಿರೋಧಕ್ಕೆ ಪ್ರಮುಖ ಕಾರಣ. ಉದಾಹರಣೆಗೆ ಸರ್ಕಾರಿ ಕಲಾ ಕಾಲೇಜಿನಲ್ಲಿ ಫೀಸ್ 5 ಸಾವಿರ ಇದ್ರೆ, ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ 8,500 ಇದೆ. ಮೈಸೂರು ವಿವಿ ಘಟಕ ಕಾಲೇಜಾದ ಮಹಾರಾಜ ಕಾಲೇಜಿನಲ್ಲಿ ಹಾಗೂ ತುಮಕೂರು ವಿವಿ ಅಲ್ಲಿ 11,500 ಶುಲ್ಕವಿದ್ದು ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ದುಬಾರಿ ಆಗುತ್ತಿದೆ. ಈ ಹಿಂದೆ ಈ ಕಾಲೇಜುಗಳು ಸರ್ಕಾರದ ಅಧೀನದಲ್ಲಿ ಇರುವಾಗ ಕೇವಲ 3 ರಿಂದ 5 ಸಾವಿರ ಫೀಸ್ ಇತ್ತು. ಯಾವಾಗ ವಿವಿ ಘಟಕದ ಕಾಲೇಜುಗಳನ್ನಾಗಿ ಮಾರ್ಪಾಟು ಮಾಡಿದ್ರೋ ಅವಾಗ ಫೀಸ್ ಏಕಾಏಕಿ 10 ಸಾವಿರದಿಂದ 15 ಸಾವಿರಕ್ಕೆ ಏರಿಸಲಾಗಿದೆ ಅನ್ನೋದು ವಿದ್ಯಾರ್ಥಿಗಳ ಆರೋಪ.

ರಾಜ್ಯದ 8 ಸರ್ಕಾರಿ ವಿವಿಗಳಲ್ಲಿ 50 ವರ್ಷಕ್ಕೂ ಹಳೆಯ ಸಿಬ್ಬಂದಿಗೆ ಪಿಂಚಣಿ ನೀಡಲು ಕೂಡ ಹಣ ಇರದ ಪರಿಸ್ಥಿತಿ ಇದೆ. ಒಂದು ಯೂನಿವರ್ಸಿಟಿ ನಡೆಸಲು ಬರೋಬ್ಬರಿ ವಾರ್ಷಿಕ 250 ಕೋಟಿ ಬೇಕಾಗುತ್ತೆ. ಸರ್ಕಾರ ಕೇವಲ 50 ಕೋಟಿ ಹಣ ಬಿಡುಗಡೆ ಮಾಡುತ್ತೆ. ವಿವಿ ನಡೆಸುವುದೇ ದುಸ್ತರವಾಗಿರುವಾಗ ವಿಶ್ವವಿದ್ಯಾಲಯದ ತೆಕ್ಕೆಗೆ ಸೇರಿಸಲ್ಪಡುವ ಕಾಲೇಜುಗಳ ಪರಿಸ್ಥಿತಿ ಏನು? ಎಲ್ಲಿಂದ ಹಣಕಾಸು ಹೊಂದಿಸಲಾಗುತ್ತೆ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆ. ಇದಕ್ಕೆ ಮೌನ ವಹಿಸಿರುವ ಸರ್ಕಾರವೇ ಉತ್ತರ ಕೊಡಬೇಕು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment