newsfirstkannada.com

ಅಯೋಧ್ಯೆಗೆ ಭೇಟಿ ಕೊಟ್ಟ ರಾಮ, ಸೀತೆ, ಲಕ್ಷ್ಮಣ; ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಜನ..!

Share :

Published January 18, 2024 at 9:06am

Update January 18, 2024 at 9:12am

  ರಮಾನಂದ್ ಸಾಗರ್ ಅವರ ರಾಮಾಯಣ ಟಿವಿ ಶೋ

  ಅಯೋಧ್ಯೆಯಲ್ಲಿ ರಾಮ, ಲಕ್ಷ್ಮಣ, ಸೀತಾ ಪಾತ್ರದಾರಿಗಳು

  ಜನವರಿ 22 ರಂದು ಉದ್ಘಾಟನೆ ಆಗಲಿರುವ ಮಂದಿರ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ವಿಶೇಷ ಸಮಾರಂಭಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ದೇಶದ ಗಣ್ಯರು, ರಾಮನ ಭಕ್ತರು ಅಯೋಧ್ಯೆಯತ್ತ ಹೊರಟಿದ್ದಾರೆ. ಅಂತೆಯೇ ಜನಪ್ರಿಯ ಟಿವಿ ಶೋ ರಮಾನಂದ್ ಸಾಗರ್ ಅವರ ‘ರಾಮಾಯಣ’ದ ತಾರಾಗಣ ಅಯೋಧ್ಯೆಯನ್ನು ತಲುಪಿದೆ. ನಟರಾದ ಅರುಣ್ ಗೋವಿಲ್, ದೀಪಿಕಾ ಚಿಖಾಲಿಯಾ, ಸುನಿಲ್ ಲಾಹಿರಿ ನಿನ್ನೆ ಅಯೋಧ್ಯೆ ತಲುಪಿದ್ದಾರೆ. ಇವರು ರಾಮಾಯಣ ಶೋನಲ್ಲಿ ರಾಮ-ಸೀತೆ ಮತ್ತು ಲಕ್ಷ್ಮಣ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇಂದಿಗೂ ಕೂಡ ಅದೆಷ್ಟೋ ಜನ ಇವರನ್ನು ದೇವರ ರೂಪದಲ್ಲಿ ಕಾಣುತ್ತಾರೆ.

ಯಾರು ಯಾವ ಪಾತ್ರ ಮಾಡಿದ್ದರು..?

ರಮಾನಂದ್ ಸಾಗರ್ ಅವರ ‘ರಾಮಾಯಣ’ ಶೋನ ಮೊದಲ ಎಪಿಸೋಡ್ 1987, ಜನವರಿ 25 ರಂದು ಪ್ರಸಾರವಾಗಿತ್ತು. ದೂರದರ್ಶನ್ ಮತ್ತು ಡಿಡಿ ನ್ಯಾಷನಲ್​​ನಲ್ಲಿ ಪ್ರಸಾರವಾಗುತ್ತಿತ್ತು. ಇದು ಬರೋಬ್ಬರಿ 78 ಎಪಿಸೋಡ್​​ಗಳನ್ನು ಯಶಸ್ವಿಯಾಗಿ ಪೂರೈಸಿ ದೊಡ್ಡ ಹೆಸರು ಮಾಡಿತ್ತು. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ತಲೆ ಎತ್ತಿ ನಿಂತಿರುವ ಸಂದರ್ಭದಲ್ಲಿ ರಾಮಜನ್ಮ ಭೂಮಿ ಟ್ರಸ್ಟ್, ಅಂದಿನ ‘ರಾಮಯಾಣ ಶೋ’ನ ಪಾತ್ರಧಾರಿಗಳನ್ನು ಶುಭ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಅಂತೆಯೇ ಈ ಬಾಲಿವುಡ್​ ತಾರೆಯರು ಅಯೋಧ್ಯೆಯನ್ನು ಈಗಾಗಲೇ ತಲುಪಿದ್ದಾರೆ.

ಅಯೋಧ್ಯೆಗೆ ಆಗಮಿಸಿದ್ದ ಅರುಣ್ ಗೋವಿಲ್​ಗೆ ಅಭಿಮಾನಿಗಳು ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಜೊತೆಗೆ ಅದೆಷ್ಟೋ ಜನ ಅವರ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದರು. ಯಾಕಂದರೆ ಟಿವಿ ಶೋನಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣದಲ್ಲಿ ಅರುಣ್ ಗೋವಿಲ್ ರಾಮನ ಪಾತ್ರ ಮಾಡುತ್ತಿದ್ದರು. ಇಂದಿಗೂ ಕೂಡ ಅದೆಷ್ಟೋ ಮಂದಿ ಅವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಇನ್ನು ದೀಪಿಕಾ ಚಿಖಿಲಾ ಸೀತಾ ಪಾತ್ರದಲ್ಲಿ ನಟಿಸಿದ್ದರೆ, ಸುನಿಲ್ ಲಾಹಿರಿ ಲಕ್ಷಣನ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದರು.

ಅರುಣ್ ಗೋವಿಲ್ ಅಯೋಧ್ಯೆ ತಲುಪಿದ ನಂತರ ಪ್ರಸಾದವಾಗಿ ಖಿಚಡಿ ತಿಂದರು. ಅಯೋಧ್ಯೆ ಭೇಟಿಗೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಎಕ್ಸ್ (ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು.. ಅಯೋಧ್ಯೆಯ ರಾಮಮಂದಿರ ನಮ್ಮ ರಾಷ್ಟ್ರೀಯ ಮಂದಿರ ಅನ್ನೋದನ್ನು ಸಾಬೀತುಪಡಿಸುತ್ತದೆ. ಮಸುಕಾಗಿದ್ದ ನಮ್ಮ ಸಂಸ್ಕೃತಿಯು ಈ ದೇವಾಲಯದ ಗಟ್ಟಿಗೊಳ್ಳುತ್ತದೆ. ಇದು ನಮ್ಮ ಪರಂಪರೆ. ಇಂದು ಇಡೀ ಜಗತ್ತಿಗೆ ತಿಳಿಯುತ್ತಿದೆ. ಈ ದೇವಾಲಯವು ನಮ್ಮ ನಂಬಿಕೆಯ ಕೇಂದ್ರ. ಭಗವಾನ್ ರಾಮನ ಮಂದಿರ ನಿರ್ಮಾಣ ಆಗಲಿದೆ ಎಂದು ನನಗೆ ತಿಳಿದಿತ್ತು. ಆದರೆ ಈ ರೀತಿಯಾಗಿ ನನ್ನ ಜೀವನ ಪಾವನ ಆಗುತ್ತದೆ ಎಂದು ಭಾವಿಸಿರಲಿಲ್ಲ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ.

ಕೆಲವರಿಗೆ ರಾಮ ಏನೆಂದು ತಿಳಿದಿಲ್ಲ

ಸುನೀಲ್ ಲಾಹಿರಿ ಮಾತನಾಡಿ.. ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಳ್ತಿರುವುದು ನನ್ನ ಅದೃಷ್ಟ. ನಾನಿಲ್ಲಿಗೆ ಬರಲು ಹಲವು ದಿನಗಳಿಂದ ಯೋಚಿಸ್ತಿದ್ದೆ. ದೇಶದಲ್ಲಿ ಈಗ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ. ಅದು ಉತ್ತಮವಾಗಿದೆ. ಯಾರು ರಾಮನನ್ನು ನಿರಾಕರಿಸುತ್ತಾ ಬಂದಿದ್ದಾರೆ, ಅವರಿಗೆ ರಾಮ ಏನೆಂದು ತಿಳಿದಿಲ್ಲ. ಯಾರಿಗೂ ರಾಮಾಯಣವನ್ನು ಓದದ ಹೊರತು ರಾಮ ಏನೆಂದು ಅರ್ಥ ಆಗಲ್ಲ. ಮರ್ಯಾದಾ ಪುರುಷೋತ್ತಮ ಸಮಾಜದಲ್ಲಿ ಹೇಗೆ ಗೌರವದಿಂದ ಬದುಕಬೇಕು ಎಂಬುವುದನ್ನು ಕಲಿಸುತ್ತಾನೆ. ರಾಮನ ಅಸ್ತಿತ್ವವನ್ನು ನಿರಾಕರಿಸೋರಿಗೆ ಈ ಶಿಕ್ಷಣ ಸಿಗಲ್ಲ ಎಂದಿದ್ದಾರೆ.

ದೀಪಿಕಾ ಚಿಖಾಲಿಯಾ ಮಾತನಾಡಿ.. ನಮ್ಮ ಚಿತ್ರವು ಜನರ ಹೃದಯದಲ್ಲಿ ಇಂದಿಗೂ ನೆಲೆಸಿದೆ. ರಾಮಮಂದಿರ ನಿರ್ಮಾಣದ ನಂತರವೂ ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಭಾವಿಸುತ್ತೇನೆ. ಈ ರೀತಿಯ ಪ್ರೀತಿಯನ್ನು ನಾವು ಯಾವಾಗಲೂ ಸ್ವೀಕರಿಸುತ್ತೇವೆ ಎಂದರು.

ಬಾಲಿವುಡ್​ನ ಈ ತಾರೆಯರು ಅಯೋಧ್ಯೆಗೆ ಆಗಮಿಸಿರುವ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮನು ವಿಮಾನವನ್ನು ಹತ್ತುವ ಮೂಲಕ ಅಯೋಧ್ಯೆಯನ್ನು ತಲುಪಿದ್ದಾನೆ ಎಂದು ಓರ್ವ ಬರೆದರೆ, ಮತ್ತೋರ್ವ ಇಂದಿಗೂ ಜನರು ನಿಮ್ಮಲ್ಲಿ ಶ್ರೀರಾಮನನ್ನು ಕಾಣುತ್ತಾರೆ. ರಾಮ ಎಂದು ಹೆಸರು ಬಂದಾಗ ನೆನಪು ಆಗೋದೇ ನಿಮ್ಮ ಮುಖ ಎಂದು ಕಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಗೆ ಭೇಟಿ ಕೊಟ್ಟ ರಾಮ, ಸೀತೆ, ಲಕ್ಷ್ಮಣ; ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಜನ..!

https://newsfirstlive.com/wp-content/uploads/2024/01/AYODHYE-1.jpg

Load More