/newsfirstlive-kannada/media/post_attachments/wp-content/uploads/2025/05/vasuki4.jpg)
ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಡ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಅವರು ಗುಡ್ನ್ಯೂಸ್ ಕೊಟ್ಟಿದ್ದರು.
ಇದನ್ನೂ ಓದಿ:ಚೈತ್ರಾ ಕುಂದಾಪುರ ಮತ್ತು ಆಕೆಯ ಪತಿ ಇಬ್ಬರು ಕಳ್ಳರು.. ಮದುವೆ ಬೆನ್ನಲ್ಲೇ ತಂದೆಯಿಂದ ಸ್ಫೋಟಕ ಹೇಳಿಕೆ
ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವನ್ನು ವಾಸುಕಿ ವೈಭವ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದರು. ವಿಶೇಷ ಎಂದರೆ ಖ್ಯಾತ ಕಲಾವಿದ ಅರುಣ್ ಸಾಗರ್ ಮನೆಯಲ್ಲಿ ವಾಸುಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರ ಬೇಬಿ ಬಂಪ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ.
ಇನ್ನೂ, ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಬೃಂದಾ ವಿಕ್ರಮ್ ಹಾಗೂ ವಾಸುಕಿ ವೈಭವ್ ಅವರಿಗೆ ನಟ ಅರುಣ್ ಸಾಗರ್ ದಂಪತಿ ಕ್ಯೂಟ್ ಸರ್ಪ್ರೈಸ್ ನೀಡಿದ್ದಾರೆ. ದಂಪತಿಯನ್ನು ಮನೆಗೆ ಕರೆಸಿ ಅತಿಥಿ ಸತ್ಕಾರ ಮಾಡಿದ್ದಾರೆ. ಆಗ ನೆನಪಿಗಾಗಿ ಫೋಟೋಗನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಬಗ್ಗೆ ಖುದ್ದು ವಾಸುಕಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿಮ್ಮ ಖಾಸಾ ಜಾಗದಲ್ಲಿ ಈ ಸ್ಮರಣೀಯ ದಿನವನ್ನು ನೀಡಿದ್ದಕ್ಕಾಗಿ ಮೀರಾ ಅಕ್ಕಾ ಮತ್ತು ಅರುಣ್ ಸಾಗರ್ ಅವರಿಗೆ ಧನ್ಯವಾದಗಳು, ಅದರ ಪ್ರತಿಯೊಂದು ಭಾಗವೂ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.
View this post on Instagram
ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು 2023 ನವೆಂಬರ್ 16ರಂದು ಗುರು-ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ವಾಸುಕಿ ವೈಭವ್ ಪತ್ನಿ ಬೃಂದಾ ಅವರು ಮೂಲತಃ ರಂಗಭೂಮಿ ಕಲಾವಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ಸ್ಟೇಜ್ಗಳಲ್ಲಿ ಶೋ ಪರ್ಫಾಮ್ ಮಾಡಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕೆಲಸ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ