newsfirstkannada.com

ಬಾಲರಾಮನ ಮೂರ್ತಿ ಕೆತ್ತಿದ್ದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್.. ಈ ಬಗ್ಗೆ ಏನಂದ್ರು?

Share :

Published January 24, 2024 at 8:44pm

Update January 24, 2024 at 8:46pm

    ರಾಮಲಲ್ಲಾ ಮೂರ್ತಿ ಬಗ್ಗೆ ಭರಪೂರ ಮೆಚ್ಚುಗೆ

    ತಪಸ್ಸಿನಂತೆ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್​​ ವಾಪಸ್​​

    ಆರೇಳು ತಿಂಗಳಿಂದ ಮನೆಯಿಂದ ದೂರವಿದ್ದ ಶಿಲ್ಪಿ

ಬೆಂಗಳೂರು: ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರೋ ರಾಮಲಲ್ಲಾ ಮೂರ್ತಿ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಾಗರೋಪಾದಿಯಲ್ಲಿ ಭಕ್ತರು ಬಾಲರಾಮನ ದರ್ಶನ ಪಡೆದು ಭಕ್ತಿಯಲ್ಲಿ ತಲ್ಲೀನರಾಗ್ತಿದ್ದಾರೆ. ಈ ನಡುವೆ ಇಂದು ಶಿಲ್ಪಿ ಅರುಣ್ ಯೋಗಿರಾಜ್ ತವರಿಗೆ ವಾಪಸ್ಸಾಗಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಭಕ್ತರ ಮೇಲೆ ಸದಾ ಕೃಪಾ ದೃಷ್ಟಿ ಬೀರುತ್ತಿರುವ ಆ ನಯನಗಳು.. ಹಸನ್ಮುಖಿಯಾಗಿ ನಿಂತಿರುವ ರಾಮಲಲ್ಲಾ.. ನೋಡ್ತಿದ್ರೆ ಆ ಬಾಲರಾಮನೇ ಜೀವ ತಳೆದು ಬಂದು ನಿಂತಿದ್ದಾನೇನೋ ಅನ್ನುವಂತೆ ಭಾಸ.. ಜಗತ್ತನ್ನೇ ಮರೆತು ಬಿಡುವಂತೆ ಆ ರಾಮಲಲ್ಲಾ ಭಕ್ತರನ್ನು ಸೆಳೆಯುತ್ತಿದ್ದಾನೆ. ರಾಮಲಲ್ಲಾ ಮೂರ್ತಿ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಕನ ರೂಪದ ಮೂರ್ತಿ ಕಂಡು ಭಕ್ತರು ಭಾವೋನ್ಮಾದಕ್ಕೊಳಗಾಗುತ್ತಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಯೋಧ್ಯೆಗೆ ಭೇಟಿ ಕೊಟ್ಟು ಪುಟ್ಟ ರಾಮನನ್ನ ಕಣ್ತುಂಬಿಕೊಂಡು ಭಕ್ತಭಾವದಲ್ಲಿ ಪರವಶರಾಗ್ತಿದ್ದಾರೆ.

ಬಾಲರಾಮನ ಮೂರ್ತಿ ಕೆತ್ತಿ ಭಕ್ತರ ಮೆಚ್ಚುಗೆ ಗಳಿಸಿದ ಕನ್ನಡಿಗ
ರಾಜ್ಯಕ್ಕೆ ಮರಳಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ರಾಮಲ್ಲಾ ಮೂರ್ತಿಯನ್ನೇ ಅಯೋಧ್ಯೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಬಾಲರಾಮನನ್ನು ಕಂಡು ಲಕ್ಷ ಲಕ್ಷ ರಾಮಭಕ್ತರು ರಾಘವನ ಭಕ್ತಿಯಲ್ಲಿ ಮಿಂದೆಳುತ್ತಿದ್ದಾರೆ. ಮಾತ್ರವಲ್ಲದೇ ಯೋಗಿರಾಜ್ ಕೈಚಳಕಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಮೂರ್ತಿ ಕೆತ್ತಲು ಕಳೆದ ಆರೇಳು ತಿಂಗಳಿಂದ ಮನೆಯಿಂದ ದೂರವಿದ್ದ ಶಿಲ್ಪಿ ಅರುಣ್ ಯೋಗಿರಾಜ್ ತವರೂರಿಗೆ ವಾಪಸ್ಸಾಗಿದ್ದಾರೆ. ಅಯೋಧ್ಯೆಯಿಂದ ವಾಪಸ್ಸಾಗಿದ್ದಾರೆ.

‘ಶಿಲ್ಪಿಗಳ ಪಟ್ಟಿಯಲ್ಲಿ ನನ್ನ ಹೆಸರು ಬೇಕಂತಲೇ ಬಿಡಲಾಗಿತ್ತು’

ಇನ್ನು ಅಯೋಧ್ಯೆಯಿಂದ ಮರಳುತ್ತಿರುವ ಅರುಣ್ ಯೋಗಿರಾಜ್ ಎಕ್ಸಕ್ಲೂಸೀವ್ ಆಗಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿ ಹಲವು ವಿಚಾರ ಬಿಚ್ಚಿಟ್ಟಿದ್ದಾರೆ. ಮೂರ್ತಿ ಕೆತ್ತುವ ಶಿಲ್ಪಿಗಳ ಪಟ್ಟಿಯಲ್ಲಿ ನನ್ನ ಹೆಸರು ಬಿಟ್ಟೋಗಿತ್ತು. ಆಮೇಲೆ ಸಚ್ಚಿದಾನಂದ ಜೋಶಿ ನನ್ನನ್ನ ಕರೆದು ಅವಕಾಶ ಕೊಟ್ರು. ರಾಮಲಲ್ಲಾ ಮೂರ್ತಿ ಕೆತ್ತನೆ ಸುಲಭದ್ದಲ್ಲ, ತಪಸ್ಸಿನಂತೆ ಕೆತ್ತಿದ್ದೇನೆ ಅಂತ ಯೋಗಿರಾಜ್ ಹೇಳಿದ್ದಾರೆ.

‘ಆರೇಳು ತಿಂಗಳು ಪ್ರಪಂಚದಿಂದನೇ ಡಿಸ್​ಕನೆಕ್ಟ್ ಆಗಿದ್ದೆ’

ಇನ್ನು ಅರುಣ್, ಬಾಲರಾಮನ ಮೂರ್ತಿ ಕೆತ್ತುವಾಗ ಆರೇಳು ತಿಂಗಳು ಮೊಬೈಲ್ ಸೈಡಿಗಿಟ್ಟು ಮನೆಯವರ ಜೊತೆನೂ ಸಂಪರ್ಕ ಕಡಿದುಕೊಂಡಿದ್ದರು. ಹೀಗೆ ತಪಸ್ಸಿನಿಂದ ಮೂರ್ತಿ ಕೆತ್ತಿರುವುದಾಗಿ ಯೋಗಿರಾಜ್ ಹೇಳಿಕೊಂಡಿದ್ದಾರೆ.

ಉಳಿದ ಎರಡು ರಾಮನ ಮೂರ್ತಿಗಳ ಚಿತ್ರಗಳು ಅನಾವರಣ

ಇನ್ನು ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಠೆಯಾದ ಬಾಲರಾಮನ ಮೂರ್ತಿಯನ್ನು ಕಂಡು ಎಲ್ಲರು ಭಕ್ತಭಾವದಲ್ಲಿ ಮುಳುಗಿದ್ದಾರೆ. ಮೊದಲೇ ಹೇಳಿದಂತೆ ಮೂವರು ಶಿಲ್ಪಿಗಳು ಮೂರು ರಾಮನ ಮೂರ್ತಿಗಳನ್ನು ಕೆತ್ತಿದ್ದರು. ಸದ್ಯ ಅವುಗಳ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿದ್ದ ರಾಮಲಲ್ಲಾ ಮೂರ್ತಿಯ ಚಿತ್ರವನ್ನು ನಿನ್ನೆ ಅನಾವರಣಗೊಳಿಸಲಾಗಿತ್ತು. ಅದು ಅಮೃತಶಿಲೆಯಲ್ಲಿ ಮೂಡಿಬಂದಿತ್ತು. ಇಂದು ಮತ್ತೊಬ್ಬ ಕನ್ನಡಿಗ ಶಿಲ್ಪಿ ಕೆತ್ತಿದ ರಾಮಲಲ್ಲಾನ ಮೂರ್ತಿಯ ಚಿತ್ರಗಳು ಬಿಡುಗಡೆಯಾಗಿವೆ. ಇದು ಕೂಡ ಕೃಷ್ಣಶಿಲೆಯಲ್ಲಿ ಮೂಡಿ ಬಂದಿದೆ.

ಒಟ್ಟಾರೆ ಬಾಲರಾಮನ ಮೂರ್ತಿಯನ್ನು ಕಂಡು ಶತಕೋಟಿ ಭಕ್ತರು ಕಳೆದೋಗಿದ್ದಾರೆ. ಸದ್ಯ ಲಕ್ಷ ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಮೂರ್ತಿ ಕೆತ್ತಿರುವ ಅರುಣ್​ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು ವಿಶ್ವಕರ್ಮರೇ ನಿನ್ನ ಕೈಯಲ್ಲಿ ಕುಳಿತಿದ್ದಾರೆಂದು ಕೊಂಡಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲರಾಮನ ಮೂರ್ತಿ ಕೆತ್ತಿದ್ದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್.. ಈ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/01/Arun.jpg

Load More