/newsfirstlive-kannada/media/post_attachments/wp-content/uploads/2023/11/Delhi-Cm-Aravind-Kejriwal.jpg)
ನವದೆಹಲಿ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇನ್ನು 2 ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಇನ್ನು ಎರಡು ದಿಗಗಳಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಬಳಿಗೆ ಹೋಗುತ್ತೇನೆ. ಮತದಾರರು ತೀರ್ಪು ಪ್ರಕಟಿಸುವವರೆಗೂ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ. ದೆಹಲಿ ಎಲೆಕ್ಷನ್ 2025ರ ಫೆಬ್ರುವರಿಯಲ್ಲಿ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿಯೇ ಎಲೆಕ್ಷನ್ ನಡೆಸಬೇಕು. ಮಹಾರಾಷ್ಟ್ರದ ಎಲೆಕ್ಷನ್ ಜೊತೆಗೆ ದೆಹಲಿ ಚುನಾವಣೆ ನಡೆಸಬೇಕು. ಕೇಜ್ರಿವಾಲ್ ನಿರಪರಾಧಿ ಅಥವಾ ಅಪರಾಧಿಯೇ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ನಾನು ಕೆಲಸ ಮಾಡಿದ್ದರೆ ಜನರು ನನಗೆ ಮತ ನೀಡುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:SBIನಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಕಾಲ್ಫಾರ್ಮ್.. ಬ್ಯಾಂಕ್ನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ