newsfirstkannada.com

ಕೇಜ್ರಿವಾಲ್ CM ಆಗಿಯೇ ಉಳಿಯಬಹುದು; ಜೈಲಿನಲ್ಲಿದ್ದು ಸರ್ಕಾರ ನಡೆಸಬಹುದಾ? ರೂಲ್ಸ್ ಏನ್ ಹೇಳ್ತದೆ?

Share :

Published March 22, 2024 at 9:29am

Update March 22, 2024 at 10:34am

    ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಬಂಧನ ಆಗಿದೆ

    ದೆಹಲಿ ಜೈಲಿನ ನಿಯಮಗಳು ಏನು ಹೇಳುತ್ತಿವೆ ಗೊತ್ತಾ ನಿಮಗೆ?

    ಇಂಥ ಪ್ರಕರಣದಲ್ಲಿ ಯಾರಿಗೆಲ್ಲ ಬಂಧನದಿಂದ ವಿಶೇಷ ರಕ್ಷಣೆ ಇದೆ?

ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಆಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಸಿಎಂ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ? ಇಲ್ಲ, ಜೈಲಿನಲ್ಲಿಯೇ ಅಧಿಕಾರ ನಡೆಸ್ತಾರಾ ಎಂಬ ಶುರುವಾಗಿದೆ.

ಆಮ್​​ ಆದ್ಮಿ ಪಕ್ಷದ ನಾಯಕರು ನೀಡಿರುವ ಮಾಹಿತಿಗಳ ಪ್ರಕಾರ ಕೇಜ್ರಿವಾಲ್, ಜೈಲಿನಲ್ಲಿಯೇ ಇದ್ದುಕೊಂಡು ಸರ್ಕಾರ ನಡೆಸಲು ತೀರ್ಮಾನಿಸಿದ್ದಾರೆ. ಕೇಜ್ರಿವಾಲ್ ಎಲ್ಲಿ ಇರುತ್ತಾರೋ ಅಲ್ಲಿಂದಲೇ ಸರ್ಕಾರ ನಡೆಸುತ್ತಾರೆ ಎಂದು ದೆಹಲಿ ಎಎಪಿ ಶಾಸಕ ದಿಲೀಪ್ ಪಾಂಡೆ ಹೇಳಿದ್ದಾರೆ. ಇದನ್ನೇ ಹಣಕಾಸು ಸಚಿವೆ ಅತಿಶಿ ಕೂಡ ಪುನರ್​ ಉಚ್ಚರಿಸಿದ್ದಾರೆ.

ಜೈಲಿನಲ್ಲಿ ಸರ್ಕಾರ ನಡೆಸಬಹುದಾ?
ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೈಲಿನಲ್ಲಿದ್ದುಕೊಂಡು ಸರ್ಕಾರ ನಡೆಸುವ ಅವಕಾಶ ಇದೆಯಾ ಎಂಬ ಪ್ರಶ್ನೆ ಕಾಡಿದೆ. ಕ್ರೇಜ್ರಿವಾಲ್​​ ಅವರನ್ನು ED ಅಧಿಕಾರಿಗಳು ಕೆಲವೇ ಹೊತ್ತಿನಲ್ಲಿ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ. ತನಿಖಾ ಸಂಸ್ಥೆಯ ಅಧಿಕಾರಿಗಳು ಎಲ್ಲವೂ ಅಂದುಕೊಂಡಂತೆ ನಡೆದರೆ, ಕೇಜ್ರಿವಾಲ್​ ತಿಹಾರ್ ಜೈಲಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಮಾಹಿತಿ ಇದೆ. ತಿಹಾರ್ ಜೈಲಿನಲ್ಲಿ ಇರುವ ಕೈಪಿಡಿ ನಿಯಮಗಳ ಪ್ರಕಾರ ಜೈಲಿನಲ್ಲಿದ್ದುಕೊಂಡು ಸರ್ಕಾರವನ್ನು ನಡೆಸುವ ಅವಕಾಶ ಇಲ್ಲ.

ದೆಹಲಿ ಜೈಲು ಕೈಪಿಡಿಯ (Prison Rules) ಪ್ರಕಾರ.. ದೆಹಲಿ ಜೈಲುಗಳಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಅಪರಾಧಿ ಅಥವಾ ಆರೋಪಿಗಳ ಭೇಟಿಗೆ ಅವಕಾಶ ಇರುತ್ತದೆ. ಜೈಲಿಗೆ ಬಂದ ತಕ್ಷಣ, ಆತ ಯಾರನ್ನು ಭೇಟಿಯಾಗಲು ಬಯಸುತ್ತಾನೋ ಅವರ ಹೆಸರನ್ನು ಹೇಳಬೇಕು. 10 ಜನರ ಹೆಸರನ್ನು ಹೇಳಬೇಕು, 10 ಜನರಲ್ಲಿ ಒಬ್ಬರು ಮಾತ್ರ ಜೈಲಿಗೆ ದೂರವಾಣಿ ಕರೆ ಮಾಡಬೇಕಾಗುತ್ತದೆ. ಇದನ್ನು ‘ಟೆಲಿ ಬುಕಿಂಗ್’ ಎಂದು ಕರೆಯಲಾಗುತ್ತದೆ. ಕರೆ ಮಾಡುವವರು ಖೈದಿಯನ್ನು ಭೇಟಿಯಾಗಲು ಯಾವ ದಿನ ಬರಲು ಬಯಸುತ್ತಾರೆ ಅನ್ನೋದನ್ನು ತಿಳಿಸುತ್ತಾರೆ. ಆಗ ಜೈಲು ನಿರ್ವಹಣಾಧಿಕಾರಿ, ಅವರಿಗೆ ಅನುಕೂಲ ಆಗುವ ದಿನ ಬರುವಂತೆ ಸೂಚನೆ ನೀಡುತ್ತಾರೆ.

ಎಷ್ಟು ಜನ ಭೇಟಿ ಆಗಬಹುದು..?

ಒಂದು ಭೇಟಿಯಲ್ಲಿ ಮೂವರು ಸಂದರ್ಶಕರಿಗೆ ಮಾತ್ರ ಅವಕಾಶ ಇರುತ್ತದೆ. ಏಕಕಾಲದಲ್ಲಿ ಮೂವರು ಬಂದು ಮಾತುಕತೆ ನಡೆಸಬಹುದು. ಈ ವೇಳೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಜೈಲಿನಲ್ಲಿ ಕೈದಿಗಳನ್ನು ಭೇಟಿ ಮಾಡುವ ಸಮಯ ಬೆಳಗ್ಗೆ 9:30 ರಿಂದ ಆರಂಭವಾಗಿ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇದೆ. ಮೂಲಗಳ ಪ್ರಕಾರ.. ಯಾರಿಗೆ, ಯಾವಾಗ ಭೇಟಿ ಮಾಡಲು ಅವಕಾಶ ನೀಡಬೇಕು ಎಂಬ ಅಧಿಕಾರ ಜೈಲು ಅಧೀಕ್ಷಕರಿಗೆ ಇರುತ್ತದೆ. ಅವರೇ ಯಾರು ಎಷ್ಟೊತ್ತಿಗೆ ಬರಬೇಕು ಎಂದು ತಿಳಿಸುತ್ತಾರೆ. ಯಾರಿಗಾದರೂ ಭದ್ರತಾ ಬೆದರಿಕೆ, ವಿಐಪಿಯಾಗಿದ್ದರೆ ಭೇಟಿಯಾಗಲು ವಿಶೇಷ ವ್ಯವಸ್ಥೆಗಳನ್ನೂ ಮಾಡುವ ಅಧಿಕಾರ ಇದೆ.

ಆದರೆ ಜೈಲಿನಿಂದ ಕಡತಗಳಿಗೆ ಯಾವು ಸಹಿ ಹಾಕುವಂತಿಲ್ಲ. ಯಾವುದೇ ಪ್ರಮುಖ ಕಡತಕ್ಕೆ ಸಹಿ ಮಾಡಬೇಕಾದರೆ ಜೈಲು ಅಧೀಕ್ಷಕರು ಅನುಮತಿ ನೀಡಬೇಕು. ಅದು ಅಧೀಕ್ಷಕರಿಗೆ ಬಿಟ್ಟಿರುವ ವಿಚಾರ ಆಗಿರುತ್ತದೆ. ಸರ್ಕಾರವನ್ನೂ ನಡೆಸುವಂತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇಂಥ ಪ್ರಕರಣದಲ್ಲಿ ದೇಶದ ಸಂವಿಧಾನದಲ್ಲಿ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಮಾತ್ರ ಬಂಧನದಿಂದ ರಕ್ಷಣೆ ನೀಡಲಾಗಿದೆ.
ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಯಾವುದೇ ಅವಕಾಶ ನೀಡಿಲ್ಲ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8, 8A, 9, 9A, 10, 10A, 11, ಮತ್ತು 11A ಪ್ರಕಾರ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ತೆಗೆದುಹಾಕಬಹುದು.

ಸದ್ಯ ಇದೇ ಪ್ರಕರಣದಲ್ಲಿ ಸತ್ಯೇಂದ್ರ ಜೈನ್, ಮನಿಷ್ ಸಿಸೋಡಿಯಾ ಬಂಧನಕ್ಕೆ ಒಳಗಾಗಿದ್ದಾರೆ. ಬಂಧನದ ಬಳಿಕ ಅವರ ಬಳಿಯಿದ್ದ ಖಾತೆಗಳನ್ನು ಕೇಜ್ರಿವಾಲ್ ಬೇರೆಯವರಿಗೆ ವರ್ಗಾಯಿಸಿದ್ದಾರೆ. ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಹಾಗೂ ಸಿಸೋಡಿಯಾ ಸಚಿವರಾಗಿದ್ದರೂ ಯಾವುದೇ ಜಾವಾಬ್ದಾರಿಗಳಿಲ್ಲ. ಆದರೆ ಕೇಜ್ರಿವಾಲ್ ವಿಚಾರದಲ್ಲಿ ಏನಾಗಲಿದೆ ಅನ್ನೋದು ಕಾದು ನೋಡಬೇಕು.

ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಜ್ರಿವಾಲ್ CM ಆಗಿಯೇ ಉಳಿಯಬಹುದು; ಜೈಲಿನಲ್ಲಿದ್ದು ಸರ್ಕಾರ ನಡೆಸಬಹುದಾ? ರೂಲ್ಸ್ ಏನ್ ಹೇಳ್ತದೆ?

https://newsfirstlive.com/wp-content/uploads/2024/03/KEJRIWAL-6-1.jpg

Load More