newsfirstkannada.com

ಅರೆಸ್ಟ್​ ಆಗಿರೋ ಸಿಎಂ ಕೇಜ್ರಿವಾಲ್​ಗೆ ಶಾಕ್​ ಮೇಲೆ ಶಾಕ್;​ ಏನಿದು ಲಿಕ್ಕರ್​ ಪಾಲಿಸಿ ಸ್ಕ್ಯಾಮ್​..​?

Share :

Published March 23, 2024 at 6:23am

  ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಗೆ ಸೂಚನೆ

  ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಕೆ. ಕವಿತಾಗೆ ಶಾಕ್!

  ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಾಪಸ್

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ಗೆ ಅಬಕಾರಿ ಹಗರಣ ಉರುಳಾಗಿದೆ. 9 ಬಾರಿ ಸಮನ್ಸ್ ನೀಡಿದ್ರೂ ಕ್ಯಾರೇ ಎನ್ನದಿದ್ದ ಕೇಜ್ರಿವಾಲ್​ರನ್ನು ಇ.ಡಿ ಅಧಿಕಾರಿಗಳು ತಡರಾತ್ರಿ ಬಂಧಿಸಿದ್ದಾರೆ. ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ನಾಯಕರು ಹೈಡ್ರಾಮಾ ಮಾಡಿದ್ರಾದ್ರೂ ಸಿಎಂ ಜೈಲು ಸೇರೋದು ತಪ್ಪಿಲ್ಲ. ಭಾರತ ಸರ್ಕಾರದ ಮಾಜಿ ಅಧಿಕಾರಿ. ಎಎಪಿ ಸಾರಥಿ. ದೆಹಲಿಯ 7ನೇ ಹಾಗೂ ಹಾಲಿ ಮುಖ್ಯಮಂತ್ರಿ. ಪರಿವರ್ತನ್ ಚಳವಳಿಯ ಹರಿಕಾರ. ಭ್ರಷ್ಟಾಚಾರದ ವಿರೋಧಿ ಹೋರಾಟಗಾರ. ಅಬಕಾರಿ ಹಗರಣದ ಸುಳಿಯೊಳಗೆ ಮಪ್ಲರ್ ಮ್ಯಾನ್.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ಗೆ ‘ಅಬಕಾರಿ’ ಅಂಕುಶ!

ಅಂದು ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಈಗ ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡಿದೆ. ದೆಹಲಿ ಅಬಕಾರಿ ನೀತಿ ಹಗರಣ. ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಕೇಜ್ರಿವಾಲ್​ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಹೈಕೋರ್ಟ್ ಕೂಡ ಈ ಹಂತದಲ್ಲಿ ಬಲವಂತದ ರಕ್ಷಣೆ ನೀಡಲು ನಿರಾಕರಿಸಿತ್ತು. ಈ ಬೆನ್ನಲ್ಲೇ ನಿನ್ನೆ ತಡರಾತ್ರಿ ಇ.ಡಿ ತಂಡ ದಾಳಿ ಮಾಡಿ 2 ಗಂಟೆಗಳ ವಿಚಾರಣೆ ನಡೆಸಿ ಬಳಿಕ ಬಂಧನ ಮಾಡ್ತು. ಕೇಜ್ರಿವಾಲ್ ಬಂಧನಕ್ಕೂ ಮುನ್ನ ಜಾರಿ ನಿರ್ದೇಶನಾಲಯ 9 ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಎಲ್ಲಾ ಸಮನ್ಸ್​​ಗಳಿಗೆ ಕೇಜ್ರಿವಾಲ್ ಡೋಂಟ್​ಕೇರ್ ಎಂದಿದ್ದರು. ಈ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಅವರ ಬಂಧನ ಮಾಡಲಾಗಿದೆ.

ಇ.ಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್!

ತಮ್ಮ ಬಂಧನ ಪ್ರಶ್ನಿಸಿ ನಿನ್ನೆ ರಾತ್ರಿಯೇ ಸಿಎಂ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಇಂದು ಕೋರ್ಟ್ ಮುಂದೆ ವಿಚಾರ ಪ್ರಸ್ತಾಪಿಸಿದ್ರು. ವಿಚಾರಣಾ ನ್ಯಾಯಾಲಯದಲ್ಲಿ ರಿಮ್ಯಾಂಡ್ ಪ್ರಕ್ರಿಯೆಗಳು ನಡೆಯುತ್ತಿರುವ ಕಾರಣ ಇದು ಮುಗಿದ ಬಳಿಕ ಅರ್ಜಿ ಸಲ್ಲಿಸಲು ನಿರ್ಧರಿಸಿ ತಾವು ನಿನ್ನೆ ಸಲ್ಲಿಸಿದ್ದ ಅರ್ಜಿಯನ್ನು ಕೇಜ್ರಿವಾಲ್ ಹಿಂಪಡೆದಿದ್ದಾರೆ.

ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ನಾಯಕರ ಪ್ರತಿಭಟನೆ

ಇನ್ನು ಸಿಎಂ ಕೇಜ್ರಿವಾಲ್ ಬಂಧನಕ್ಕೆ ಆಮ್ ಆದ್ಮಿ ನಾಯಕರು ಹಾಗೂ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಇ.ಡಿ ಕಚೇರಿ ಹಾಗೂ ದೆಹಲಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಆಪ್ ಸಚಿವರಾದ ಅತಿಶಿ, ಸೌರಭ್ ಭಾರಧ್ವಜ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದರು. ಈ ನಡುವೆ ಎಎಪಿ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆ ಹಾಗೂ ಕರಾಳದಿನ ಆಚರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಗೋವಾ ಸೇರಿದಂತೆ ದೇಶದ ಹಲವೆಡೆ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ ಕೆ.ಕವಿತಾಗೆ ಶಾಕ್!

ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್​ಎಸ್ ನಾಯಕಿ ಕವಿತಾಗೂ ಸಂಕಷ್ಟ ಮುಂದುವರಿದಿದೆ. ಕೇಸ್​​ನಲ್ಲಿ ಜಾಮೀನು ಕೋರಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಕಳೆದ ಮಾರ್ಚ್ 15 ರಂದು ಕವಿತಾ ಬಂಧನವಾಗಿದ್ದು ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ನೀಡಿತ್ತು. ಇನ್ನು ಬಂಧನಕ್ಕೊಳಗಾಗಿರುವ ಅರವಿಂದ್ ಕೇಜ್ರಿವಾಲ್​ರನ್ನು ಹೆಚ್ಚಿನ ವಿಚಾರಣೆಗೆ ಇ.ಡಿ ಅಧಿಕಾರಿಗಳು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇಷ್ಟಾದ್ರೂ ಸಿಎಂ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಜೈಲಿನಿಂದಲೇ ಅಧಿಕಾರ ನಡೆಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಒಂದು ರಾತ್ರಿಯನ್ನ ಇಡಿ ವಶದಲ್ಲಿ ಕಳೆದಿರುವ ಕೇಜ್ರಿವಾಲ್‌ಗೆ ಕೋರ್ಟ್‌ನಿಂದ ರಿಲೀಫ್‌ ಸಿಗದೇ ಇದ್ದಲ್ಲಿ ಜೈಲು ಸೇರೋದು ಪಕ್ಕಾ.

ಏನಿದು ಅಬಕಾರಿ ನೀತಿ ಹಗರಣ?

 • 2021ರಲ್ಲಿ ದೆಹಲಿಯಲ್ಲಿ ಹೊಸ ಮದ್ಯ ನೀತಿ ಜಾರಿ
 • ಹೋಲ್​ಸೇಲ್ ಮಾರಾಟಗಾರರ ಕಮಿಷನ್ ದರ ಏರಿಕೆ
 • ಶೇ.5 ರಿಂದ ಶೇ.12ಕ್ಕೆ ಏರಿಕೆ ಮಾಡಿದ್ದ ಆಪ್ ಸರ್ಕಾರ
 • ಹೋಲ್​ಸೇಲ್ ಲಿಕ್ಕರ್ ಮಾರಾಟಗಾರರಿಗೆ ಭಾರಿ ಲಾಭ
 • ಈ ಲಾಭದ ಕಮಿಷನ್‌ ಅನ್ನು ಲಂಚವಾಗಿ ನೀಡಲು ಡೀಲ್
 • ಹೈದ್ರಾಬಾದ್​​ನ ಸೌತ್​ ಗ್ರೂಪ್​ನಿಂದ ಲಿಕ್ಕರ್ ಸೇಲ್ ಗುತ್ತಿಗೆ
 • ಸೌತ್​ಗ್ರೂಪ್ ನಿರ್ವಹಣೆ ಮಾಡ್ತಿದ್ದ ಕೆಸಿಆರ್ ಪುತ್ರಿ ಕವಿತಾ
 • ಕಂಪನಿಯಿಂದ 100 ಕೋಟಿ ಸಂಗ್ರಹಿಸಿ ಎಎಪಿಗೆ ನೀಡಿಕೆ
 • ಸಿಎಂ ಕೇಜ್ರಿವಾಲ್ ಹಾಗೂ ಆಪ್​ ನಾಯಕರಿಗೆ ನೀಡಿದ್ದರು
 • 100 ಕೋಟಿ ಹಣ ವರ್ಗಾವಣೆ ಜಾಡು ಹಿಡಿದು ಇ.ಡಿ ತನಿಖೆ
 • ಚಿಲ್ಲರೆ ಲಿಕ್ಕರ್ ಮಾರಾಟಗಾರರಿಗೆ ಶೇ.185 ರಷ್ಟು ಪ್ರಾಫಿಟ್
 • ಕಮಿಷನ್​​ನಲ್ಲಿ ಶೇ.6 ರಷ್ಟು ಹಣ ಲಂಚವಾಗಿ ನೀಡಿದ್ದರು
 • ಕೇಸಲ್ಲಿ ಈಗಾಗಲೇ ಬಂಧಿತರಾಗಿರುವ ಕೆಸಿಆರ್‌ ಪುತ್ರಿ ಕವಿತಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೆಸ್ಟ್​ ಆಗಿರೋ ಸಿಎಂ ಕೇಜ್ರಿವಾಲ್​ಗೆ ಶಾಕ್​ ಮೇಲೆ ಶಾಕ್;​ ಏನಿದು ಲಿಕ್ಕರ್​ ಪಾಲಿಸಿ ಸ್ಕ್ಯಾಮ್​..​?

https://newsfirstlive.com/wp-content/uploads/2024/03/arvind-kejriwal.jpg

Load More