/newsfirstlive-kannada/media/post_attachments/wp-content/uploads/2024/03/KEJRIWAL-3.jpg)
2025ರ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ರೋಚಕವಾಗಿದ್ದು, ಇಡೀ ದೇಶವೇ ಬೆರಗಾಗುವಂತೆ ಮಾಡಿದೆ. ದಿಲ್ಲಿ ಮತದಾರರು ಕೊಟ್ಟ ತೀರ್ಪು ಬಿಜೆಪಿ ಖುಷಿಯಲ್ಲಿ ತೇಲುವಂತೆ ಮಾಡಿದ್ರೆ ಆಮ್ ಆದ್ಮಿ ಪಕ್ಷಕ್ಕೆ ಮರ್ಮಾಘಾತವನ್ನು ಉಂಟು ಮಾಡಿದೆ. ಅರವಿಂದ್ ಕೇಜ್ರಿವಾಲ್ ಹೀನಾಯ ಸೋಲು ಎಎಪಿ ಬೆಂಬಲಿಗರು ಚಿಂತಾಕ್ರಾಂತವನ್ನಾಗಿಸಿದೆ.
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎದುರಾಳಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಭರ್ಜರಿ ಮುನ್ನಡೆ ಕಾಯ್ದುಕೊಂಡರು. ಕೇಜ್ರಿವಾಲ್ ವಿರುದ್ಧ 3865 ಮತಗಳಿಂದ ಮುನ್ನಡೆ ಸಾಧಿಸಿ ಗೆಲುವು ಖಚಿತ ಪಡಿಸಿಕೊಂಡರು.
ಪರ್ವೇಶ್ ವರ್ಮಾ ಹಾಗೂ ಕೇಜ್ರಿವಾಲ್ ಅವರ ಈ ಜಿದ್ದಾಜಿದ್ದಿಯಲ್ಲಿ ಈ ಲೆಕ್ಕಾಚಾರ ಬಹಳ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ರೆ ಕೇಜ್ರಿವಾಲ್ ಸೋಲು ತಪ್ಪುತ್ತಿತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
ಯಾಕಂದ್ರೆ ಅರವಿಂದ್ ಕೇಜ್ರಿವಾಲ್ ಸೋಲಿನ ಅಂತರ ನೋಡಿದ್ರೆ ಈ ಮಾತು ನಿಜ ಎನ್ನಿಸುತ್ತೆ. ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಆಪ್ ಮತ ಸೇರಿದ್ರೆ ಬಿಜೆಪಿಯ ಮತ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಅವರು 3873 ಮತ ಪಡೆದಿದ್ದು, ಅರವಿಂದ್ ಕೇಜ್ರಿವಾಲ್ 3182 ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತಿದ್ದಾರೆ.
ಇದನ್ನೂ ಓದಿ: ದೆಹಲಿ ಚುನಾವಣೆಗೆ ಮೆಗಾ ಟ್ವಿಸ್ಟ್.. ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ಟ ಪರ್ವೇಶ್ ವರ್ಮಾ ಯಾರು? ಸಿಎಂ ಆಗ್ತಾರಾ?
ಕೇಜ್ರಿವಾಲ್ ಸೋಲಿಗೆ 10 ಕಾರಣ
1. ದೆಹಲಿಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವರ್ಚಸ್ಸು ಕಡಿಮೆಯಾಗಿದ್ದು
2. 10 ವರ್ಷದಲ್ಲಿ ಆಪ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
3. ಸಿಎಂ ಆಗಿದ್ದ ಕೇಜ್ರಿವಾಲ್ ಜೈಲಿನಿಂದ ಅಧಿಕಾರ ನಡೆಸಿದ್ದರು
4. ಭ್ರಷ್ಟಾಚಾರದಲ್ಲಿ ಮಿಂದೆದ್ದಿದ್ದ ಆಪ್ ಸಚಿವರಾದ ಸಿಸೋಡಿಯಾ, ಸತ್ತೇಂದ್ರ ಜೈನ್ ಮತ್ತು ಕೇಜ್ರಿವಾಲ್
5. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ಮತ್ತು ಮೋದಿಯನ್ನ ದೂಷಿಸುವುದು
6. SC, ST ಓಬಿಸಿ ಮತಗಳು ಬಿಜೆಪಿಗೆ ಕೈ ಹಿಡಿದಿದ್ದು
7. ಜಾಟ್, ಗುಜ್ಜರ್ ಮತ್ತು ಪೂರ್ವಾಂಚಲದ ಜನರ ಮತ ಬಿಜೆಪಿಗೆ ಬಂದದ್ದು
8. ನುಡಿದಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂಬ ಕೇಜ್ರಿವಾಲ್ ಮೇಲಿನ ಬೇಸರ
9. ಮಹಿಳಾ ಮತ್ತು ಮಧ್ಯಮವರ್ಗದ ಮತದಾರರು ಬಿಜೆಪಿಗೆ ಮಣೆ ಹಾಕಿದ್ದು
10. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರ ವರ್ಗ ಬಿಜೆಪಿಯತ್ತ ವಾಲಿರೋದು ಬಿಜೆಪಿಗೆ ಪ್ಲಸ್, ಎಎಪಿಗೆ ಬಹುದೊಡ್ಡ ಮೈನಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ