newsfirstkannada.com

ದೆಹಲಿ ಮದ್ಯ ನೀತಿ ಹಗರಣ; ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ 6ನೇ ಬಾರಿ ಇಡಿ ನೋಟಿಸ್​​

Share :

Published February 15, 2024 at 6:19am

  ಈಗಾಗಲೇ ಐದು ಸಮನ್ಸ್​ಗಳನ್ನ ಕಡೆಗಣಿಸಿರುವ ದೆಹಲಿ ಸಿಎಂ

  ರಾಜಕೀಯ ಪ್ರೇರಿತವಾಗಿ ಈ ನೋಟಿಸ್​ ನೀಡಲಾಗುತ್ತಿದೆಯಾ?

  ಕೇಜ್ರಿವಾಲ್​ಗೆ ಒಂದಲ್ಲ, ಎರಡಲ್ಲ 6 ಬಾರಿ ಸಮನ್ಸ್ ನೀಡಿದ ಇ.ಡಿ

ನವದೆಹಲಿ: ಅಕ್ರಮ ಮದ್ಯ ನೀತಿ ಹಗರಣದ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ)ವು 6ನೇ ಸಮನ್ಸ್​ ಅನ್ನು ಜಾರಿ ಮಾಡಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಫೆ.17ರಂದು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ನೀಡಲಾಗಿದೆ. ಈಗಾಗಲೇ ಇಡಿಯ 5 ಸಮನ್ಸ್​ಗಳನ್ನು ಕಡೆಗಣಿಸಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ 5 ಸಮನ್ಸ್​ಗಳನ್ನ ಕೇಜ್ರಿವಾಲ್​ರನ್ನ ಅರೆಸ್ಟ್ ಮಾಡಲು ಕಾನೂನುಬಾಹಿರ ಪ್ರಯತ್ನಗಳು ಎಂದು ಇಡಿ ಕರೆದಿದೆ. ಇನ್ನು ಈ ಕುರಿತು ಎಲೆಕ್ಷನ್​ ಕ್ಯಾಂಪೇನ್ ಮಾಡದಂತೆ ತಡೆಯುವ ಉದ್ದೇಶದಿಂದ ಈ ಸಮನ್ಸ್​ಗಳನ್ನ ಇಡಿ ನೀಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ಹಿಂದೆ ಸಿಎಂ ಕೇಜ್ರಿವಾಲ್ ಅವರಿಗೆ ನವೆಂಬರ್ 02, ಡಿಸೆಂಬರ್ 21, ಜನವರಿ 3, 18 ಹಾಗೂ ಫೆ.02 ರಂದು ಸಮನ್ಸ್​ ನೀಡಿತ್ತು. ಇವೆಲ್ಲ ಸುಳ್ಳು ಆರೋಪ ಎಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ಇಡಿ ಕೋರ್ಟ್​ಗೆ ದೂರು ನೀಡಿತ್ತು. ಇದನ್ನು ವಿಚಾರಣೆ ಮಾಡಿದ್ದ ಕೋರ್ಟ್​ ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಈ ಎಲ್ಲ ಆದರೂ ಈಗ ಫೆ.17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ರೂ ಹಾಜರಾಗ್ತಾರೋ, ಇಲ್ವೋ ಎನ್ನುವುದು ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಮದ್ಯ ನೀತಿ ಹಗರಣ; ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ 6ನೇ ಬಾರಿ ಇಡಿ ನೋಟಿಸ್​​

https://newsfirstlive.com/wp-content/uploads/2024/02/DELHI_CM_ED_NOTICE.jpg

Load More