/newsfirstlive-kannada/media/post_attachments/wp-content/uploads/2025/02/ARVIND.jpg)
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ಭಾರೀ ಮುಖಭಂಗ ಆಗಿದೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ.
ಬಿಜೆಪಿಯಿಂದ ನವದೆಹಲಿ ವಿಧಾನಸಭಾ ಕ್ಷೇತ್ರಕ್ಕೆ ಪರ್ವೇಶ್ ವರ್ಮಾ ಕಣಕ್ಕಿಳಿದಿದ್ದರು. ವರ್ಮಾ ವಿರುದ್ಧ ಕೇಜ್ರಿವಾಲ್ 3182 ಮತಗಳಿಂದ ಸೋತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಅನುಭವಿಸಿದೆ. 70 ಕ್ಷೇತ್ರಗಳ ಪೈಕಿ ಕೇವಲ 23 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಮುನ್ನಡೆ ಸಾಧಿಸಿದೆ. ಇನ್ನು ಪ್ರತಿಸ್ಪರ್ಧಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದೆ.
ಸದ್ಯದ ವರದಿಗಳನ್ನು ಗಮನಿಸಿದ್ರೆ ಬಿಜೆಪಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೆ ಬರೋದು ಪಕ್ಕಾ ಆಗ್ತಿದೆ. ಸರ್ಕಾರ ರಚನೆಗೆ 36 ಮ್ಯಾಜಿಕ್ ನಂಬರ್. ಈ ಸಂಖ್ಯೆಯನ್ನು ಬಿಜೆಪಿ ಈಗಾಗಲೇ ಕ್ರಾಸ್ ಮಾಡಿ ಮುನ್ನುಗ್ಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಬಿಜೆಪಿ ದರ್ಬಾರ್ ಮತ್ತೆ ಆರಂಭವಾಗಲಿದೆ.
ಕೇಜ್ರಿವಾಲ್ರನ್ನ ಸೋಲಿಸಿದ ವರ್ಮಾ ಯಾರು..?
ಅರವಿಂದ್ ಕೇಜ್ರಿವಾಲ್ಗೆ ಟಕ್ಕರ್ ಕೊಟ್ಟಿರುವ ಪರ್ವೇಶ್ ವರ್ಮಾ, ಈ ಹಿಂದೆ ಎರಡು ಬಾರಿ ಸಂಸದರಾಗಿದ್ದಾರೆ. ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಈ ಪರ್ವೇಶ್ ವರ್ಮಾ. ಮೊದಲಿನಿಂದಲೂ ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡು ಬಂದಿರುವ ವ್ಯಕ್ತಿ. 2014ರಲ್ಲಿ ಪಶ್ಚಿಮ ದೆಹಲಿ ಕ್ಷೇತತ್ರದಿಂದ 2014ರಲ್ಲಿ 5.78 ಮತಗಳನ್ನು ಪಡೆದು ಕಾಂಗ್ರೆಸ್ನ ಮಹಾಬಲ ಮಿಶ್ರಾ ಅವರನ್ನು ಸೋಲಿಸಿ ಲೋಕಸಭೆಗೆ ಎಂಟ್ರಿ ಪಡೆದಿದ್ದರು.
2019ರಲ್ಲಿ ಲೋಕಸಭಾ ಟಿಕೆಟ್ ನೀಡಲು ಪಕ್ಷ ನಿರಾಕರಿಸಿತ್ತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯರಾಗಿ ಪರ್ವೇಶ್ ಸೇವೆ ಸಲ್ಲಿಸಿದರು. 2013ರಲ್ಲಿ ದೆಹಲಿ ಚುನಾವಣಾ ಸಮಿತಿಯ ಸದಸ್ಯರಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಶಾಹಿನ್ ಭಾಗ್ನಲ್ಲಿ ಸಿಎಎ ವಿರುದ್ಧದ ಹೋರಾಟದಲ್ಲಿ ವಿರೋಧಿಗಳಿಗೆ ಧಮ್ಕಿ ಹಾಕಿದ ಆರೋಪವು ಕೂಡ ಪರ್ವೇಶ ಮೇಲೆ ಇದೆ. ದೆಹಲಿಯಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಂದೇ ಗಂಟೆಯಲ್ಲಿ ಎಲ್ಲರನ್ನು ಹೊಡೆದು ಹಾಕುತ್ತೇವೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: DelhiElectionResults: ಎಎಪಿಗೆ ಆಘಾತದ ಮೇಲೆ ಆಘಾತ; ಕೇಜ್ರಿವಾಲ್ ಗೆಲ್ಲುವ ಸಾಧ್ಯತೆ ಎಷ್ಟಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ