newsfirstkannada.com

Arvind Kejriwal: ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲ; ಜೈಲಿನಲ್ಲೇ ಕುಳಿತು ಸರ್ಕಾರ ನಡೆಸಲು ನಿರ್ಧಾರ

Share :

Published March 22, 2024 at 8:26am

Update March 22, 2024 at 8:27am

    ಜೈಲಿನಲ್ಲೇ ಸರ್ಕಾರ ನಡೆಸುವ ಬಗ್ಗೆ ಸುಳಿವು ಕೊಟ್ಟ ಸಚಿವೆ ಅತಿಶಿ

    AAPಗೆ ಕೇಜ್ರಿವಾಲ್ ಬಂಧನದ ಸುಳಿವು ಮೊದಲೇ ಸಿಕ್ಕಿತ್ತಾ?

    ಆಮ್​ ಆದ್ಮಿ ಈಗಾಗಲೇ ದೆಹಲಿ ಜನರ ಬಳಿ ಅಭಿಪ್ರಾಯ ಸಂಗ್ರಹಿಸಿದೆ

ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ಜೈಲಿನಲ್ಲೇ ಕುಳಿತು ಅಧಿಕಾರ ನಡೆಸಲು ದೆಹಲಿ ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ, ಆಮ್​​ ಆದ್ಮಿ ಪಕ್ಷದ ನಾಯಕರಿಗೆ ಕೇಜ್ರಿವಾಲ್ ಬಂಧನದ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಮುಂದಿನ ಹೋರಾಟ, ರೂಪುರೇಷೆ ಹಾಗೂ ಸರ್ಕಾರ ನಡೆಸೋದು ಹೇಗೆ ಅನ್ನೋದ್ರ ಬಗ್ಗೆ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿಸ್ವತಂತ್ರ ಭಾರತದ ಇತಿಹಾಸದಲ್ಲೇ ಬಂಧನಕ್ಕೊಳಗಾದ ಮೊದಲ Sitting CM ಅರವಿಂದ್ ಕೇಜ್ರಿವಾಲ್

ಈ ಬಗ್ಗೆ ದೆಹಲಿ ಜನರಿಂದ ಆಮ್​​ ಆದ್ಮಿ ಪಕ್ಷ ಅಭಿಪ್ರಾಯ ಕೂಡ ಸಂಗ್ರಹಿಸಿದೆ. ಆ ಮೂಲಕ ಜೈಲಿನಲ್ಲೇ ಕುಳಿತು ಸರ್ಕಾರ ನಡೆಸಲು ತೀರ್ಮಾನ ಆಗಿದೆ. ಜೈಲಿಗೆ ಹೋದರೆ ಸಿಎಂ ರಾಜಿನಾಮೆ ಕೊಡುವ ಅವಶ್ಯಕತೆ ಕಾನೂನಿನಲ್ಲಿ ಇಲ್ಲ ಎಂದು ಸಚಿವೆ ಆತಿಶಿ ಮರ್ಲೇನಾ ಹೇಳಿದ್ದಾರೆ. ಅವರ ಹೇಳಿಕೆಯಿಂದ ಕೇಜ್ರಿವಾಲ್ ಜೈಲಿನಲ್ಲೇ ಕುಳಿತು ಸರ್ಕಾರ ನಡೆಸೋದು ಖಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Arvind Kejriwal: ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲ; ಜೈಲಿನಲ್ಲೇ ಕುಳಿತು ಸರ್ಕಾರ ನಡೆಸಲು ನಿರ್ಧಾರ

https://newsfirstlive.com/wp-content/uploads/2024/03/KEJRIWAL-3.jpg

Load More