Advertisment

ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್​ಬಾಸ್​ ಖ್ಯಾತಿಯ ಆರ್ಯವರ್ಧನ್ ಗುರೂಜಿ; ಏನಿದೆ ಸ್ಪೆಷಲ್?

author-image
Veena Gangani
Updated On
ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್​ಬಾಸ್​ ಖ್ಯಾತಿಯ ಆರ್ಯವರ್ಧನ್ ಗುರೂಜಿ; ಏನಿದೆ ಸ್ಪೆಷಲ್?
Advertisment
  • ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಯಾರೆಲ್ಲಾ ಸ್ಪರ್ಧಿಗಳು ಬಂದಿದ್ದಾರೆ?
  • ಈ ವೀಕೆಂಡ್​ನಲ್ಲಿ ಭರ್ಜರಿ ಮನರಂಜನೆ ನೀಡುತ್ತಿವೆ ರಿಯಾಲಿಟಿ ಶೋಗಳು
  • ದಿಲ್​ದಾರ್​ ಲುಕ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂಟ್ರಿ!

ಆರ್ಯವರ್ಧನ್ ಗುರೂಜಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿದ್ದ ಆರ್ಯವರ್ಧನ್ ಗುರೂಜಿ ಅಂದಿನಿಂದ ಇಂದಿನವರೆಗೂ ಸುದ್ದಿಯಲ್ಲಿ ಇದ್ದಾರೆ. ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಅಂತ ಹೇಳಿಕೊಳ್ಳುವ ಆರ್ಯವರ್ಧನ್ ಗುರೂಜಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.

Advertisment

publive-image

ಇದನ್ನೂ ಓದಿ:ಆರ್ಯವರ್ಧನ್​ ಗುರೂಜಿ ಅಂದು ಹೇಳಿದ್ದಕ್ಕೆ ಇಂದು ದರ್ಶನ್ ಅರೆಸ್ಟ್​ ಆದ್ರಾ? ಏನಿದು ಭವಿಷ್ಯ!

ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿಯಾಗಿದ್ದ ಆರ್ಯವರ್ಧನ್ ಗುರೂಜಿ ಅವರು ಕಿರುತೆರೆಯ ದೊಟ್ಟ ರಿಯಾಲಿಟಿ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಕಾಲಿಟ್ಟಿದ್ದಾರೆ. ಹೌದು, ಜ್ಹೀ ಕನ್ನಡ ಬ್ರ್ಯಾಂಡ್ ರಿಯಾಲಿಟಿ ಶೋಗಳಲ್ಲಿ ಡಿಕೆಡಿ ಕೂಡ ಒಂದು. ಈ ಶೋ ಇಲ್ಲಿಯವರೆಗೂ ಪ್ಲಾಫ್ ಆಗಿದ್ದೇ ಇಲ್ಲ. ಪ್ರತಿ ಬಾರಿಯೂ ಜನರಿಂದ ಸಿಗೋ ರೆಸ್ಪಾನ್ಸ್‌ ಸಖತ್. ಹಾಗಾಗಿಯೇ ಜ್ಹೀ ಟೀಮ್‌, ಈ ಶೋನ ತುಂಬಾನೇ ಮುತುವರ್ಜಿಯಿಂದ ಮಾಡೋದು. ಈ ಬಾರಿಯ ಸ್ಪೆಷಾಲಿಟಿ ಏನಂತಾ ಈಗಾಗಲೇ ವೀಕ್ಷಕರಿಗೆ ತಿಳಿದಿದೆ. ಆದ್ರೆ, ಕಂಟೆಸ್ಟೆಂಟ್ ಯಾರು ಅನ್ನೋದರ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ನೀಡಲಾಗಿದೆ.

publive-image

ಸದ್ಯ ಡಿಕೆಡಿಯ ಹೊಸ ಪ್ರೋಮೋ ರಿಲೀಸ್ ಆಗಿದೆ. ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪೆಷಾಲಿಟಿಯೇ ಸೆಲೆಬ್ರಿಟಿಗಳು. ಈ ಬಾರಿ ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿಬರಲಿದೆ. ಆದ್ರೆ, ಸೆಲೆಬ್ರಿಟಿಗಳಲ್ಲಿ ಬಹುಪಾಲು ಡ್ಯಾನ್ಸ್‌ ಮಾಡದೇ ಇರೋರು ಈ ಶೋಗೆ ಬರ್ತಿದ್ದಾರೆ. ಈ ಲಿಸ್ಟ್‌ನಲ್ಲಿ ಇರೋ ಮೊದಲ ಹೆಸರೇ ಒಳ್ಳೆ ಹುಡುಗ ಪ್ರಥಮ್‌.

Advertisment

publive-image

ಬಿಗ್​ಬಾಸ್​, ಸಿನಿಮಾ ಈಗ ಡಿಕೆಡಿಗೆ ಒಳ್ಳೆ ಹುಡುಗ ಪ್ರಥಮ್ ಬರ್ತಿದ್ದಾರೆ. ಪ್ರಥಮ್​ ಅವರು ಬರ್ತಾ ಇದ್ದಾರೆ ಅಂದ್ರೆ ಕೇಳ್ಬೇಕಾ. ಅಲ್ಲಿ ಆಟಕ್ಕಿಂತ ಆರ್ಭಟನೇ ಜಾಸ್ತಿ ಇರುತ್ತೆ. ಅಂದ್ರೆ ಇಲ್ಲಿ ಡ್ಯಾನ್ಸ್‌ಗಿಂತ ಪ್ರಥಮ್‌ ಆರ್ಭಟನೇ ಸಖತ್‌ ಮಜಾ ಕೊಡುತ್ತೆ. ಇದೇ ಪ್ರಥಮ್ ಈ ಅವಕಾಶವನ್ನ ಹೇಗೆ ಬಳಸಿಕೊಳ್ತಾರೆ ಅನ್ನೋದು ಇಂಪಾರ್ಟ್‌ಟೆಂಟ್. ಬಳಿಕ ಗಗನಾ ಅವರು ಕೂಡ ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಮಹಾನಟಿಯ ಫೈನಲಿಸ್ಟ್‌ ಆಗಿದ್ದ ಚಿತ್ರದುರ್ಗದ ಗಗನಾ ಈಗ ಸಖತ್ ಪಾಪ್ಯುಲರ್ ಆಗಿದ್ದಾರೆ. ನಟನೆಯಿಂದ ಜನಪ್ರಿಯತೆ ಪಡೆದಿರೋ ಗಗನಾ, ಇನ್ಮುಂದೆ ಡಿಕೆಡಿಯಲ್ಲಿ ಪಕ್ಕಾ ಸಿಗ್ತಾರೆ. ಇವರ ಜೊತೆ ಎಂಟರ್‌ಟೈನ್‌ಮೆಂಟ್‌ ಕೂಡ ಜಸ್ಟ್ ಫ್ರೀ.

publive-image

ಡಿಕೆಡಿಯ ಸೆಲೆಬ್ರಿಟಿ ಲಿಸ್ಟ್‌ನಲ್ಲಿರೋ ಮತ್ತೊಂದು ಹೆಸರು ಪುಟ್ಟಕ್ಕನ ಮಗಳ ಸೀರಿಯಲ್ ಖ್ಯಾತಿಯ ಕಂಠಿ ಹಾಗೂ ಸ್ನೇಹ. ಇಲ್ಲಿಯವರೆಗೂ ಕಂಠಿ ಆ್ಯಕ್ಟಿಂಗ್‌, ಆ್ಯಕ್ಷನ್‌ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಮುಂದೆ ಡಿಕೆಡಿಯಲ್ಲಿ ತಮ್ಮ ನೃತ್ಯ ಕಲೆಯನ್ನೂ ಪ್ರದರ್ಶನ ಮಾಡಲಿದ್ದಾರೆ. ಹೀಗಾಗಿ ಕಂಠಿ ಫ್ಯಾನ್ಸ್‌, ಇನ್ಮೇಲೆ ಡಿಕೆಡಿಯ ಖಾಯಂ ವೀಕ್ಷಕರಾಗೋದು ಗ್ಯಾರಂಟಿ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಸಹನಾ ಅಂದ್ರೆ ಅಕ್ಷರಾ ಕೂಡ ಡಿಕೆಡಿಗೆ ಎಂಟ್ರಿಕೊಟ್ಟಿದ್ದಾರೆ. ಇದು ಅವ್ರ ಮೊದಲ ರಿಯಾಲಿಟಿ ಶೋ.

publive-image

ಇನ್ನು, ಡಿಕೆಡಿಯಲ್ಲಿ ಸಿಂಗರ್‌ ಕೋಟಾದಲ್ಲಿ ಕಾಣಿಸಿಕೊಳ್ತಿರೋದು ರೆಮೋ. ಮಜಾ ಟಾಕೀಸ್ ಮೂಲಕ ಬೆಳಕಿಗೆ ಬಂದ ರೆಮೋ, ಜ್ಹೀ ಕನ್ನಡದ ಕ್ವೀನ್ಸ್‌ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು. ಈಗ ಮತ್ತೆ ಡಿಕೆಡಿಯ ಮೂಲಕ ಜ್ಹೀ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ.

Advertisment

publive-image

ಮಂಗಳ ಗೌರಿಯ ನಂತರ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಯಶಸ್ವಿನಿ ಈಗ ಡಿಕೆಡಿಯ ಸ್ಪರ್ಧಿಯಾಗಿದ್ದಾರೆ. ಇವರ ಡ್ಯಾನ್ಸ್ ಸ್ಕಿಲ್ಸ್ ಹೇಗಿದೆ ಅಂತಾ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ನೋಡಿದ್ದೀರಿ. ಈಗ ಮತ್ತೆ ಡಿಕೆಡಿಯಲ್ಲಿ ಪರಿಪೂರ್ಣವಾಗಿ ನೋಡಬಹುದು.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!

publive-image

ಇತ್ತ ಕೆಂಡಸಂಪಿಗೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಕಾವ್ಯ ಶೈವ ಡ್ಯಾನ್ಸ್ ದುನಿಯಾಗೆ ಕಾಲಿಟ್ಟಿದ್ದಾರೆ. ಸೀರಿಯಲ್​​ನಲ್ಲಿ ಅಭಿಮಾನಿಗಳು ಕಾವ್ಯ ಅವರನ್ನು ಮಿಸ್​ ಮಾಡಿಕೊಳ್ತಿದ್ರು. ಇನ್ಮುಂದೆ ಡಿಕೆಡಿ ಮೂಲಕ ಕಾವ್ಯ ಫ್ಯಾನ್ಸ್​ನ ರಂಜಿಸಲಿದ್ದಾರೆ.

Advertisment

publive-image

ಇದನ್ನೂ ಓದಿ:ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

ಬಿಗ್​ಬಾಸ್​ ಸೀಸನ್​​ 9ರಲ್ಲಿ ಹಂಗಾಮ ಮಾಡಿದ್ದ ಭರ್ಜರಿ ಎಂಟರ್​ಟೈನರ್​ ನಂಬರ್​ ಅಂದ್ರೇ ನಾನು ಆರ್ಯವರ್ಧನ್​​ ಡಿಕೆಡಿಯಲ್ಲಿ ಜಿಂಗಲಕಾಲಕಾ ಅಂತ ಜಿಂಗ್​ಚ್ಯಾಕ್​ ಡ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ. ಸೀತಾರಾಮ ಸೀರಿಯಲ್​ನಿಂದು ಇಬ್ಬರೂ ಡಿಕೆಡಿಗೆ ಬಂದಿದ್ದಾರೆ. ಪ್ರಿಯಾ ಅಂದ್ರೇ ಮೆಘಾ ಶಂಕ್ರಪ್ಪ, ಸಿಹಿ ಅಂದ್ರೇ ರೀತು ಸಿಂಗ್​. ಚೋಟಾ ಪ್ಯಾಕ್​, ಬಡಾ ಪ್ಯಾಕ್​ ಧಮಾಕಾ ಮಜಾನ ಡಬಲ್​ ಮಾಡೋದು ಪಕ್ಕಾ.

publive-image

ಇನ್ನೂ, ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿಶ್ವರನ್ನ ಪಿಕ್​ ಮಾಡಲಾಗಿದೆ. ಆಗಾಗ ಮಹಾನಟಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ವಿಶ್ವ ಇನ್ಮುಂದೆ ಡಿಕೆಡಿಯ ಸ್ಪರ್ಧಿ. ಅಮೃತಧಾರೆ ಧಾರಾವಾಹಿಯಿಂದ ಜೀವನ್​ ಪಾತ್ರ ಮಾಡ್ತಿರೋ ಶಶಿ ಅವರನ್ನು ಆಯ್ಕೆ​ ಮಾಡಿದ್ದಾರೆ. ಶಶಿ ಈ ಹಿಂದೆ ಜೋಡಿ ನಂಬರ್​ ಒನ್​​ ಶೋನ ವಿನ್​ ಆಗಿದ್ರು. ಒಟ್ಟು 13 ಸ್ಪರ್ಧಿಗಳು ಡಿಕೆಡಿಗೆ ಬಂದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment