Advertisment

ಆರ್ಯವರ್ಧನ್ ಗುರೂಜಿಗೆ ತರಾಟೆ ತೆಗೆದುಕೊಂಡ ಕಿಚ್ಚ ಸುದೀಪ್ ಅಭಿಮಾನಿಗಳು; ಏನಾಯ್ತು?

author-image
admin
Updated On
ಆರ್ಯವರ್ಧನ್ ಗುರೂಜಿಗೆ ತರಾಟೆ ತೆಗೆದುಕೊಂಡ ಕಿಚ್ಚ ಸುದೀಪ್ ಅಭಿಮಾನಿಗಳು; ಏನಾಯ್ತು?
Advertisment
  • ಆರ್ಯವರ್ಧನ್ ಗುರೂಜಿ ಮೇಲೆ ಕಿಚ್ಚ ಸುದೀಪ್‌ ಅಭಿಮಾನಿಗಳ ಕೋಪ
  • ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಫ್ಯಾನ್ಸ್
  • ಬಿಗ್‌ಬಾಸ್‌ ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದ್ದ ಆರ್ಯವರ್ಧನ್ ಗುರೂಜಿ

ಬೆಂಗಳೂರು: ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಅಂತಾ ಹೇಳಿಕೊಳ್ಳುವ ಆರ್ಯವರ್ಧನ್ ಗುರೂಜಿ ಅವರು ನಟ ಕಿಚ್ಚ ಸುದೀಪ್‌ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ಕಿಚ್ಚನ ಚಪ್ಪಾಳೆ ಬಗ್ಗೆ ಆರ್ಯವರ್ಧನ್ ಗುರೂಜಿ ಹಗುರವಾಗಿ ಮಾತನಾಡಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್‌ರನ್ನ ನೇರವಾಗಿ ಭೇಟಿಯಾಗಿ ಕ್ಷಮೆ ಕೋರುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

Advertisment

ಚಾಮರಾಜಪೇಟೆಯಲ್ಲಿರುವ ಆರ್ಯವರ್ಧನ್ ಗುರೂಜಿ ಕಚೇರಿಗೆ ಇಂದು ಕಿಚ್ಚ ಸುದೀಪ್ ಅಭಿಮಾನಿಗಳು ಭೇಟಿ ನೀಡಿದ್ದರು. ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ನವೀನ್ ಗೌಡ ಹಾಗೂ ಬೆಂಬಲಿಗರು ಆರ್ಯವರ್ಧನ್‌ ಗುರೂಜಿ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಸರಿಯಲ್ಲ. ಲೇವಡಿ ಮಾಡಿ ಯಾಕೆ ಮಾತಾಡ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ ನವೀನ್ ಗೌಡ ಅವರು…ನೇರವಾಗಿ ಸುದೀಪ್ ಅವರ ಮುಂದೆ ಬಂದು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

publive-image

ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಅವರು ಕಿಚ್ಚನ ಚಪ್ಪಾಳೆ ಯಾರಿಗೂ ಬೇಕಾಗಿಲ್ಲ ಎಂದಿದ್ದರು. ಈ ರೀತಿ ಮಾತನಾಡಿರೋದು ತಪ್ಪು ಎಂದಿರೋ ಸುದೀಪ್ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಭೇಟಿಗೆ ಆರ್ಯವರ್ಧನ್ ಗುರೂಜಿ ಅವರನ್ನು ಕರೆದೊಯ್ಯಲು ಅಭಿಮಾನಿಗಳು ರೆಡಿಯಾಗಿದ್ದು, ನೇರವಾಗಿ ಕ್ಷಮೆ ಕೋರುವಂತೆ ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment