/newsfirstlive-kannada/media/post_attachments/wp-content/uploads/2025/02/SU-57-1.jpg)
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯ ಶೋನಲ್ಲಿ ಅಮೆರಿಕಾದ ಎರಡು F35 ಸ್ಟೀಲ್ತ್ ಫೈಟರ್ ಜೆಟ್ಗಳು ಲ್ಯಾಂಡ್ ಆಗಿವೆ. ಅದರ ಜೊತೆಗೆ ಶನಿವಾರ ಮೊದಲ ಬಾರಿಗೆ ರಷ್ಯಾದ 5ನೇ ಜನರೇಷನ್ನಲ್ಲಿ ಫೈಟರ್ ಎಸ್-57ಕೂಡ ಹಾರಾಟ ನಡೆಸಿದೆ. ಶನಿವಾರದಂದು ಎರಡು ಎಫ್-35 ಎಸ್ ಬೆಂಗಳೂರಿನ ಆಗಸದಲ್ಲಿ ಹಾರಾಟ ನಡೆಸಿವೆ. ಅದರ ಜೊತೆಗೆ ಯುಎಸ್ನ 32 ಎಫ್16 ಕೂಡ ಏರೋ ಇಂಡಿಯಾದ ವಿಮಾನ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿವೆ.
ಪ್ರಮುಖವಾಗಿ ರಷ್ಯಾದ ಎಸ್ಯು-57 ಮತ್ತು ಯುಎಸ್ನ ಎಫ್-35 ಈ ಐದು ದಿನಗಳಲ್ಲಿ ವೈಮಾನಿಕ ಪ್ರದರ್ಶನಕ್ಕಾಗಿ ತರಲಾಗಿದೆ. ಆದರೆ ಅಮೆರಿಕಾದ ಫೈಟರ್ ಜೆಟ್ಗಳನ್ನು ಕೇವಲ ಜನರು ನೋಡಲು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹೇಳಲಾಗಿದೆ.
ಮೂಲಗಳು ಹೇಳುವ ಪ್ರಕಾರ ಅಮೆರಿಕಾದಲ್ಲಿಈ ಫೈಟರ್ ಜೆಟ್ಗಳನ್ನು ವೈಮಾನಿಕ ಪ್ರದರ್ಶನ ನಡೆಸಲು ನುರಿತ ಪೈಲೆಟ್ಗಳಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಅವುಗಳನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಡಲಾಗುವುದು ಎಂದು ಹೇಳಲಾಗಿದೆ. ಇತ್ತ ಎಸ್ಯು-57 ಈ ವಾರವೇ ಬೆಂಗಳೂರಿಗೆ ಬಂದು ಲ್ಯಾಂಡ್ ಆಗಿದ್ದು. ಮೊದಲ ಬಾರಿ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ತೋರಲಿದೆ ಎಂದು ಕೂಡ ಹೇಳಲಾಗಿದೆ.
ರಷ್ಯಾದಿಂದ ಭಾರತಕ್ಕೆ ವಿಶೇಷ ಆಫರ್
ರಷಿಯನ್ ಮೂಲಗಳು ಹೇಳುವ ಪ್ರಕಾರ ಎಸ್ಯು-57 ಫೈಟರ್ ಜೆಟ್ನ್ನು ಜೊತೆಯಾಗಿ ಸೇರಿಕೊಂಡು ಪಾಲದಾರಿಕೆಯಲ್ಲಿ ಈ ಯುದ್ಧ ವಿಮಾನಗಳನ್ನು ತಯಾರಿಸಲು ಭಾರತಕ್ಕೆ ಒಂದು ಆಫರ್ ನೀಡಿದೆಯಂತೆ. ಈ ಹಿಂದೆಯೇ ಅಂದ್ರೆ 2007ರಲ್ಲಿ ಭಾರತ ಹಾಗೂ ರಷ್ಯಾ 5ನೇ ಜನರೇಷನ್ನ ಫೈಟರ್ ಏರ್ಕ್ರಾಫ್ಟ್ಗಳನ್ನು ಜಂಟಿಯಾಗಿ ತಯಾರು ಮಾಡುವ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದವು.
2010ರಲ್ಲಿ ಎಫ್ಜಿಎಫ್ಎ ಎರಡು ಸೀಟಿನ ಐಎಎಫ್ ಸ್ಪೇಸಿಫಿಕಷೇನ್ ಇರುವ ಏರ್ಕ್ರಾಪ್ಟ್ ತಯಾರಿಕೆಗೆ ಅಂತಿಮವಾಗಿ ಒಪ್ಪಂದ ಮಾಡಲಾಗಿತ್ತು. ಇದು ಒಟ್ಟು 300 ಮಿಲಿಯನ್ ಯುಎಸ್ ಡಾಲರ್ನ ಯೋಜನೆಯಾಗಿತ್ತು. ಹಲವು ವಿಚಾರಗಳಲ್ಲಿ ಅಂದ್ರೆ ವಿನ್ಯಾಸ, ಸ್ಟೀಲ್ತ್ ಕೆಪ್ಯಾಬಲಿಟಿಸ್, ಇಂಜಿನ್ ಟೆಕ್ನಾಲಜಿ ಟ್ರಾನ್ಸ್ಫರ್ ಸೇರಿದಂತೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ನಂತರವೂ ರಷ್ಯ ಒಟ್ಟಾಗಿ ಈ ವಿಮಾನ ನಿರ್ಮಾಣವನ್ನು ಜಂಟಿಯಾಗಿ ಉತ್ಪಾದನೆ ಮಾಡುವ ವಿಚಾರವನ್ನು 2018ರಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಕೂಡ ಮಾತನಾಡಲಾಗಿತ್ತು.
ಇದನ್ನೂ ಓದಿ: ನೀವೂ ಏರ್ ಶೋಗೆ ಹೋಗಬಹುದು.. ಒಂದು ಪಾಸ್ಗೆ ಎಷ್ಟು ರೂಪಾಯಿ ಗೊತ್ತಾ..?
ಸದ್ಯ ಭಾರತ ಫಿಫ್ತ್ ಜನರೇಷನ್ನ ಫೈಟರ್ ಜೆಟ್ಗಳನ್ನ ಅಂದ್ರೆ ಅತ್ಯಾಧುನಿಕ ಮಿಡಿಯಂ ಕೋಂಬ್ಯಾಟ್ ಏರ್ಕ್ರಾಪ್ಟ್ಗಳ ನಿರ್ಮಾಣದ ವಿಚಾರದಲ್ಲಿ ಕೆಲಸ ನಡೆಸಿದೆ. ಅದರ ಮಾಡೆಲ್ನನ್ನು ಈಗಾಗಲೇ ಏರೋ ಇಂಡಿಯಾದಲ್ಲಿ ಶೋಗೆ ಇಡಲಾಗಿದೆ. ಈ ಒಂದು ಏರ್ಕ್ರಾಪ್ಟ್ ಇನ್ನೂ ವಿನ್ಯಾಸದ ಹಂತದಲ್ಲಿದೆ. ಭಾರತೀಯ ವಾಯುಪಡೆ ಒಟ್ಟು 7 ಎಎಮ್ಸಿಎ ಅಂದ್ರೆ ಅಡ್ವಾನ್ಸ್ಡ್ ಮಿಡಿಯಂ ಕೊಂಬ್ಯಾಟ್ ಏರ್ಕ್ರಾಫ್ಟ್ಗಳನ್ನು ಏರೋನಾಟಿಕಲ್ ಡವೆಲಪ್ಮೆಂಟ್ ಎಜೆನ್ಸಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಮತ್ತು ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಜೊತೆ ಸೇರಿಕೊಂಡು ನಿರ್ಮಾಣ ಮಾಡಲು ಸಿದ್ಧತೆ ನಡೆಸಿಕೊಂಡಿದೆ.
ಇದನ್ನೂ ಓದಿ:ಏರ್ ಇಂಡಿಯಾ ಶೋ ಹೋಗೋರಿಗೆ BMTC ಗುಡ್ನ್ಯೂಸ್.. ನಿಮ್ಮ ಪ್ರಯಾಣ ಫ್ರೀ ಫ್ರೀ..!
ಈ ಒಂದು ಏರ್ಕ್ರಾಪ್ಟ್ ಇನ್ನೂ ಕೂಡ ಡಿಸೈನ್ ಹಂತಲ್ಲಿದೆ. ಇದರ ಇಂಜಿನ್ ಯಾವುದಿರಬೇಕು ಎಂಬುದರ ಬಗ್ಗೆ ಭಾರತ ವಿಚಾರ ಮಾಡುತ್ತಿದೆ. 110-120ಕೆನ್ ಇಂಜಿನ್ನ್ನು ವಿದೇಶಿ ಪಾಲುದಾರರೊಂದಿಗೆ ಅಂದ್ರೆ ಅಮೆರಿಕಾದ ಜಿಐ, ಫ್ರೆಂಚ್ನ ಸಫ್ರಾನ್ ಮತ್ತು ಬ್ರಿಟಿಷ್ ರೋಲ್ಸ್ ರಾಯ್ಸ್ ಜೊತೆ ಸೇರಿ ಅಭಿವೃದ್ಧಿಪಡಿಸುವ ಚಿಂತನೆಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ